what is vitamin d, deficiency, symptoms & treatment...?, ವಿಟಮಿನ್ ಡಿ ಯ ಪ್ರಮುಖ ಕಾರ್ಯಗಳು, ಕೊರತೆಯ ಲಕ್ಷಣಗಳು?

ವಿಟಮಿನ್ ಡಿ ಎನ್ನುವುದು ದೇಹದ ಆರೋಗ್ಯಕ್ಕೆ ಪತ್ಯಗತ್ಯವಾದ ಒಂದು ಕೊಬ್ಬು ಕರಗುವ ಜೀವಸತ್ವ ಇದು ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಯು ಕರುಳಿನಲ್ಲಿ ಕ್ಯಾಲ್ಸಿಯಂ ಹಾಗೂ ಪಾಸ್ಪೇಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ.

5/24/20261 min read

a bottle of gummy vitamins sitting on top of a wooden table
a bottle of gummy vitamins sitting on top of a wooden table
ವಿಟಮಿನ್ ಡಿ ಯ ಪ್ರಮುಖ ಕಾರ್ಯಗಳು.

1. ಮೂಳೆಯ ಅರೋಗ್ಯ- ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದ ಮಟ್ಟವನ್ನು ನಿಯಂತ್ರಿಸುತ್ತದೆ ಇದು ಬಲವಾದ ಮೂಳೆಗಳುಮತ್ತು ಹಲ್ಲುಗಳಿಗೆ ಅತ್ಯಗತ್ಯ.

2. ಸೂರ್ಯನ ಬೆಳಕು -ವಿಟಮಿನ್ ಡಿ ಯನ್ನು ಸೂರ್ಯನ ವಿಟಮಿನ್ ಎಂದು ಕರೆಯುತ್ತಾರೆ ನಮ್ಮ ಚರ್ಮವು ಸೂರ್ಯನ ನೇರಳಾತೀತ UV ಕಿರಣಗಳಿಗೆ ಒಡ್ಡಿಕೊಂಡಾಗ ದೇಹವು ಸ್ವತಃ ವಿಟಮಿನ್ ಡಿ ಯನ್ನು ಉತ್ಪಾದಿಸುತ್ತದೆ.

ವಿಟಮಿನ್ ಡಿ ಕೊರತೆಯ ಲಕ್ಷಣಗಳು.

1. ಮೂಳೆ ಮತ್ತು ಬೆನ್ನು ನೋವು- ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದರೆ ಮೂಳೆ ಹಾಗೂ ಕೀಲು ನೋವು ಕಾಣಿಸಿಕೊಳ್ಳುತ್ತದೆ.

2.ಸುಸ್ತು ಮತ್ತು ಆಯಾಸ- ಸದಾ ಸುಸ್ತು ಮತ್ತು ದೈಹಿಕ ಶಕ್ತಿ ಕುಂದಿದಂತೆ ಭಾಸವಾಗುತ್ತದೆ.

3.ರೋಗ ನಿರೋಧಕ ಶಕ್ತಿ ಕಡಿಮೆ- ಆಗಾಗ ಶೀತ ಕೆಮ್ಮು ಮತ್ತು ಇತರ ಸೋಂಕುಗಳಿಗೆ ತುತ್ತಾಗುವುದು.

4. ಖಿನ್ನತೆ ಮತ್ತು ಗಾಯ ಮಾನಸಿಕ ಒತ್ತಡ -ಖಿನ್ನತೆ ಮತ್ತು ಗಾಯಗಳು ಬೇಗನೆ ವಾಸಿಯಾಗದಿರುವುದು ಇದರ ಪ್ರಮುಖ ಲಕ್ಷಣಗಳು.

ವಿಟಮಿನ್ ಡಿ ಯುಕ್ತ ಆಹಾರಗಳು.

ವಿಟಮಿನ್ ಡಿ ಮೂಳೆಗಳು, ಹಲ್ಲುಗಳು ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಪತ್ಯಗತ್ಯವಾದ ಪೋಷಕಾಂಶವಾಗಿದೆ ಸೂರ್ಯನ ಬೆಳಕು ದೇಹಕ್ಕೆ ಇದರ ಮುಖ್ಯ ಮೂಲವಾಗಿದ್ದರು ಪ್ರಮುಖ ಆಹಾರ ಮೂಲ ಆಹಾರಗಳ ಮೂಲಕ ವಿಟಮಿನ್ ಡಿ ನಮಗೆ ದೊರಕುತ್ತದೆ .

1.ಮೀನುಗಳು- ಸಾಲ್ಮಾನ್, ಟ್ಯೂನ, ಸಾಡಿನ್ ಮತ್ತು ಮ್ಯಾಕೆರಲ್ ನಂತಹ ಕೊಬ್ಬಿನ ಮೀನುಗಳು ವಿಟಮಿನ್ ಡಿ ಅತ್ಯುತ್ತಮ ನೈಸರ್ಗಿಕ ಮೂಲವಾಗಿದೆ.

2 ಮೊಟ್ಟೆಯ ಹಳದಿ ಭಾಗ- ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ.

3ಅಣಬೆಗಳು (ಮಶ್ರೂಮ್)- ಸೂರ್ಯನ ಬೆಳಕಿಗೆ ವಡ್ಡಿದ ಹಣಬೆಗಳು ವಿಟಮಿನ್ ಡಿ ಯನ್ನು ಹೊಂದಿರುತ್ತವೆ.

4.ಕಾಡ್ ಲಿವರ್ ಆಯಿಲ್ -ಇದು ಅತ್ಯಂತ ಹೆಚ್ಚು ವಿಟಮಿನ್ ಡಿ ಹೊಂದಿರುವ ಪೂರಕವಾಗಿದೆ .

5.ಡೈರಿ ಉತ್ಪನ್ನಗಳು ಮತ್ತು ಬಲವರ್ದಿತ ಆಹಾರಗಳು-ಹಾಲು, ಬೆಣ್ಣೆ ಚೀಸ್ ಮತ್ತು ಓಟ್ಸ್.

ವಿಟಮಿನ್ ಡಿ ಜೀವ ಸತ್ವದ ಕೊರತೆಗೆ ಕಾರಣಗಳು.

1. ಚರ್ಮದಲ್ಲಿ ಅಗತ್ಯ ಪ್ರಮಾಣದ ವಿಟಮಿನ್ ಡಿ ಉತ್ಪಾದನೆಯಾಗದಿರುವುದು -ಕಾರಣ ಸೂರ್ಯನ ಬೆಳಕಿಗೆ ನಮ್ಮ ದೇಹವನ್ನು ಒಡ್ಡದೆ ಇರುವುದು.

2. ಸೇವಿಸುವ ಆಹಾರದಲ್ಲಿ ಅಗತ್ಯ ಪ್ರಮಾಣದ ವಿಟಮಿನ್ ಡಿ ಜೀವಸತ್ವವು ದೊರಕದೇ ಇರುವುದು .

3.ಮತ್ತು ದೇಹದ ಭಾಗವನ್ನು ಸೂರ್ಯನ ಕಿರಣಗಳಿಗೆ ವಡ್ಡದಂತೆ ಬಟ್ಟೆಗಳನ್ನು ಧರಿಸುವುದು ಸೂರ್ಯನ ಕಿರಣಗಳನ್ನು ತಡೆಯುವ ಕ್ರೀಮ್ ಗಳನ್ನು ಬಳಸುವುದು.

4.ನಾವು ಸೇವಿಸುವ ಆಹಾರದಲ್ಲಿನ ವಿಟಮಿನ್ ಡಿ ಅಂಶವು ಸರಿಯಾದ ಪ್ರಮಾಣದಲ್ಲಿ ಹೀರಲ್ಪಡದೆ ಇರುವುದು.

ವಿಟಮಿನ್ ಡಿ ವಿಧಗಳು.

ವಿಟಮಿನ್ d ಯನ್ನು ಅದರ ರಾಸಾಯನಿಕ ಕ್ರಿಯೆಯಾದಾರದ ಮೇಲೆ ವಿಟಮಿನ್ d1 ವಿಟಮಿನ್ d2 ವಿಟಮಿನ್ d3 ವಿಟಮಿನ್ d4 ಹಾಗೂ ವಿಟಮಿನ್ d5 ಎಂದು ವಿಭಜಿಸಲಾಗಿದೆ.

ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಪ್ರಮುಖ ಕಾಯಿಲೆಗಳು ರೋಗ ಲಕ್ಷಣಗಳು ಮತ್ತು ಕಾರಣಗಳು.

1. ಮಕ್ಕಳಲ್ಲಿ ರಿಕೆಟ್ -ಮೂಳೆಗಳು ಮೃದುವಾಗಿ ಬಾಗುವುದು, ಕಾಲುಗಳು ಬಿಲ್ಲು ಆಕಾರಕ್ಕೆ ತಿರುಗುವುದು ,ಬೆನ್ನು ಮೂಳೆ ನೋವು ಮತ್ತು ಬೆಳವಣಿಗೆಯಲ್ಲಿ ಕುಂಠಿತ.

2. ವಯಸ್ಕರಲ್ಲಿಆಸ್ಟಿಯೋ ಮಲೇಶಿಯಾ -ಸೊಂಟ ಕಾಲು ಮತ್ತು ಪಕ್ಕೆಲುಬುಗಳಲ್ಲಿ ತೀವ್ರವಾದ ಮೂಳೆ ನೋವು ಹಾಗೂ ಸುಲಭವಾಗಿ ಮೂಳೆಮುರಿತಕ್ಕೆ ಒಳಗಾಗುವುದು.

ವಿಟಮಿನ್ ಡಿ ಕೊರತೆಯನ್ನು ಪತ್ತೆಹಚ್ಚಲು ಮಾಡುವ ಪರೀಕ್ಷೆಗಳು.

ವಿಟಮಿನ್ ಡಿ ಕೊರತೆಯನ್ನು ಪತ್ತೆಹಚ್ಚಲು ಮಾಡುವ ಮುಖ್ಯ ಪರೀಕ್ಷೆ25 ಹೈಡ್ರಾಕ್ಸಿ ವಿಟಮಿನ್ ಡಿ ಪರೀಕ್ಷೆ. ಪರೀಕ್ಷೆಯು ನಿಮ್ಮ ರಕ್ತದಲ್ಲಿನ ವಿಟಮಿನ್ ಡಿ ಮಟ್ಟವನ್ನು ನಿಖರವಾಗಿ ಅಳೆಯುತ್ತದೆ.

.

ವಿಟಮಿನ್ ಡಿ ಕೊರತೆಯ ಚಿಕಿತ್ಸೆ.

ವಿಟಮಿನ್ ಡಿ ಕೊರತೆಯ ಚಿಕಿತ್ಸೆಯು ಮುಖ್ಯವಾಗಿ ಸೂರ್ಯನ ಬೆಳಕು ಆಹಾರ ಪದ್ಧತಿ ಮತ್ತು ಅಗತ್ಯವಿದ್ದರೆ ಪೂರಕಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ ಕೊರತೆಯೂ ಮೂಳೆಗಳ ಬಲಹೀನತೆ ಮತ್ತು ಸ್ನಾಯುಗಳ ದೌರ್ಬಲ್ಯ ಕ್ಕೆ ಕಾರಣವಾಗಬಹುದು.

ಚಿಕಿತ್ಸೆಯ ಪ್ರಮುಖ ವಿಧಾನಗಳು.

1. ಸೂರ್ಯನ ಬೆಳಕು- ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಸುಮಾರು15-20 ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ಮಯೋಡ್ವುದರಿಂದ ದೇಹವು ನೈಸರ್ಗಿಕವಾಗಿ ವಿಟಮಿನ್ d ಯನ್ನು ಉತ್ಪಾದಿಸಿಕೊಳ್ಳುತ್ತದೆ.

2.ಆಹಾರ ಪದ್ಧತಿ- ಮೊದಲೇ ತಿಳಿಸಿದಂತೆ ಮೊಟ್ಟೆಯಾಡದಿ ಭಾಗ ಸಾಲ್ಮಾನ್ ಅಥವಾ ತೀವ್ನಾದಂತಹ ಮೀನುಗಳು ಹಾಲು ಮತ್ತು ಅಣಬೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

3.ವೈದ್ಯರ ಸಲಹೆ -ರಕ್ತಪರಿಕ್ಷೆಯ ಮೂಲಕ ಕೊರತೆಯ ಮಟ್ಟವನ್ನು ಖಚಿತ ಪಡಿಸಿಕೊಂಡು ವೈದ್ಯರು ಸೂಚಿಸುವ ವಿಟಮಿನ್ ಡಿ ಮಾತ್ರೆಗಳು ಅಥವಾ ಇಂಜೆಕ್ಷನ್ ಪಡೆಯುವುದು ಉತ್ತಮ.

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.