What is progesterone, importance of progesterone, hormones, test/ಪ್ರೋಜೆಸ್ಟಿರಾನ್ ಎಂದರೇನು..? ಪ್ರೋಜೆಸ್ಟಿರಾನ್ ಪ್ರಾಮುಖ್ಯತೆ, ಪ್ರೋಜೆಸ್ಟಿರಾನ್ ಹಾರ್ಮೋನುಗಳು.

ಪ್ರೋಜೆಸ್ಟಿರಾನ್ ಎನ್ನುವುದು ನೈಸರ್ಗಿಕವಾಗಿ ಪ್ರಾಥಮಿಕವಾಗಿ ಮಹಿಳೆಯರಲ್ಲಿ ಕಂಡುಬರುವ ಒಂದು ಲೈಂಗಿಕ ಹಾರ್ಮೋನು. ಇದು ಋತುಚಕ್ರವನ್ನು ನಿಯಂತ್ರಿಸಲು, ಗರ್ಭಧಾರಣೆಯನ್ನು ಬೆಂಬಲಿಸಲು ಮತ್ತು ಗರ್ಭಾಶಯವನ್ನು ಗರ್ಭಾವಸ್ಥೆಗೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಇದು ಒಂದು ಸ್ತ್ರೀ ಹಾರ್ಮೊನ್ ಆಗಿದೆ ಇದು ಮುಖ್ಯವಾಗಿ ಅಂಡಾಶಯದಲ್ಲಿನ ಕಾರ್ಪಸ್ ಲೂಟಿಯಂ ನಿಂದ ಸವಿಸುತ್ತದೆ.

6/19/20261 min read

ಗರ್ಭವಸ್ಥೆಯಲ್ಲಿ ಹಾರ್ಮೋನು ಪ್ಲೇಸೆಂಟಾದಿಂದಲೂ ಸ್ರವಿಸಲ್ಪಡುತ್ತದೆ.

ಮುಖ್ಯವಾಗಿ ಪ್ರೋಜೆಸ್ಟಿರಾನ್ ದೇಹದಲ್ಲಿ ಸ್ರವಿಸುವ ಭಾಗಗಳು.

1.ಅಂಡಾಶಯ (Ovaries)

ಅಂಡೋತ್ಪತ್ತಿಯ ನಂತರ ಪ್ರತಿ ತಿಂಗಳು ಅಂಡಾಶಯದಲ್ಲಿ ಕಾರ್ಪಸ್ ಲೂಟಿಯಂ ಎಂಬ ಬಾಗವ ರೂಪಗೊಂಡು ಅದೆಷ್ಟಿರಾನ್ ಅನ್ನು ಸ್ರವಿಸುತ್ತದೆ. ಇದು ಗರ್ಭಾಶಯವನ್ನು ಗರ್ಭಧಾರಣೆಗೆ ಸಿದ್ಧಗೊಳಿಸಲು ಸಹಾಯ ಮಾಡುತ್ತದೆ.

2. ಪ್ಲೇಸೆಂಟ (Placenta)

ಗರ್ಭವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ಸಮಯದಲ್ಲಿ ಹಾರ್ಮೋನ್ ಪ್ಲೇಸೆಂಟಾದಿಂದ ಉತ್ಪಾದನೆಯಾಗುತ್ತದೆ.

3. ಅಡ್ರಿನಲ್ ಗ್ರಂಥಿಗಳು(Adrenal glands)

ಮಹಿಳೆಯರ ಮತ್ತು ಪುರುಷರು ಇಬ್ಬರ ದೇಹದಲ್ಲೂ ಗ್ರಂಥಿಗಳು ಸ್ವಲ್ಪ ಪ್ರಮಾಣದ ಪ್ರೋಜೆಸ್ಟಿರಾನ್ ಆರ್ಮೋನನ್ನು ಸ್ರವಿಸುತ್ತದೆ.

ಪ್ರೋಜೆಸ್ಟಿರಾನ್ ಹಾರ್ಮೋನ್ ಗಳ ಪ್ರಾಮುಖ್ಯತೆ.

ಅಂಡಾಶಯಗಳಿಂದ, ವಿಶೇಷವಾಗಿ ಅಂಡೋತ್ಪತ್ತಿ ನಂತರ ಮತ್ತು ಗರ್ಭಾವಸ್ಥೆಯಲ್ಲಿ ಪ್ಲೇಸೆಂಟಾದಿಂದಲೂ ಪ್ರೊಜೆಸ್ಟಿರ ಉತ್ಪತ್ತಿಯಾಗುತ್ತದೆ. ಇದು ಫಲವತ್ತಾದ ಅಂಡದ ಉತ್ಪತ್ತಿಗೆ ಗರ್ಭಾಶಯದ ಒಳಪದರವನ್ನು ಸಿದ್ಧಪಡಿಸುತ್ತದೆ ಮತ್ತು ಆರಂಭಿಕ ಗರ್ಭಧಾರಣೆಯನ್ನು ಬೆಂಬಲಿಸುತ್ತದೆ. ಇದು ಮೆದುಳಿನ ಮೇಲೆ ಶಾಂತ ಗೊಳಿಸುವ ಪರಿಣಾಮವನ್ನು ಬೀರುತ್ತದೆ, ನಿದ್ರೆ ಮಾಡಲು ಸಹಾಯಮಾಡುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಅಥವಾ ಇದರಿಂದ ಸಮಸ್ಯೆ ಆದರೆ ಬಂಜೆತನ, ಗರ್ಭಪಾತಗಳು, ಅನ್ಯಮಿತ ಋತುಚಕ್ರಗಳು ಮತ್ತು ಫ್ರೀ ಮೆನ್ಸ್ಟ್ರಲ್ ಸಿಂಡ್ರೋಂಗೆ ಕಾರಣವಾಗಬಹುದು. ಮಹಿಳೆಯರು ಮನಸ್ಥಿತಿ ಬದಲಾವಣೆಗಳು, ಆತಂಕ ಮತ್ತು ನಿದ್ರೆಗೆ ಕಷ್ಟವಾಗಬಹುದು.

ಇದು ಮಹಿಳೆಯರ ದೇಹದಲ್ಲಿ ಉತ್ಪತ್ತಿಯಾಗುವ ಅತ್ಯಂತ ಪ್ರಮುಖವಾದ ಹಾರ್ಮೋನ್ ಆಗಿದೆ. ಇದು ಗರ್ಭಧಾರಣೆಗೆ ಮತ್ತು ಗರ್ಭಾವಸ್ಥೆಯ ಆರಂಭಿಕ ಹಂತಗಳನ್ನು ಆರೋಗ್ಯವಾಗಿಡಲು ಅತ್ಯಂತ ಅವಶ್ಯಕತವಾಗಿರುತ್ತದೆ.

ಗರ್ಭವಸ್ಥೆಯಲ್ಲಿ ಪ್ರೋಜೆಸ್ಟಿರಾನ್ ಹಾರ್ಮೋನ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ವಿವರಗಳನ್ನು ತಿಳಿಯೋಣ.

  1. ಗರ್ಭಾಶಯವನ್ನು ಸಿದ್ಧಪಡಿಸುತ್ತದೆ

ಅಂಡೋತ್ಪತ್ತಿ ಆದ ನಂತರ, ಹಾರ್ಮೋನ್ ಗರ್ಭಾಶಯದ ಒಳಪದರವನ್ನು ದಪ್ಪವಾಗಿಸುತ್ತದೆ. ಇದರಿಂದ ಫಲವತ್ತಾದ ಮೊಟ್ಟೆಯು ಗರ್ಭಶಯಕ್ಕೆ ಸುಲಭವಾಗಿ ಅಂಟಿಕೊಳ್ಳಲು ಸಾಧ್ಯವಾಗುತ್ತದೆ.

2. ಗರ್ಭಪಾತ ತಡೆಗಟ್ಟುವಿಕೆ

ಗರ್ಭವಸ್ಥೆಯ ಆರಂಭಿಕ ಹಂತವಾದ ಮೊದಲನೇ ತ್ರೈಮಾಸಿಕದಲ್ಲಿ ಇದು ಗರ್ಭಾಶಯದ ಸ್ನಾಯುಗಳನ್ನು ಸಡಿಲವಾಗಿಡಲು ಸಹಾಯಮಾಡುತ್ತದೆ. ಇದು ಗರ್ಭಪಾತದ ಅಥವಾ ಅವಧಿಗೆ ಮುನ್ನ ರಕ್ತಸ್ರಾವವಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

3. ಗರ್ಭಧಾರಣೆಯನ್ನು ಕಾಪಾಡುತ್ತದೆ

ಗರ್ಭವಸ್ಥೆಯು ಮುಂದುವರೆದಂತೆ, ಪ್ರದೇಶದ ಮಟ್ಟವು ಏರಿಕೆಯಾಗುತ್ತಾ ಹೋಗುತ್ತದೆ. ಇದು ಗರ್ಭಾವಸ್ಥೆಯ ಪೂರ್ಣಾವಧಿಯವರೆಗೆ ಬ್ರೂಣದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ.


4. ಋತು ಚಕ್ರವನ್ನು ನಿಯಂತ್ರಿಸುತ್ತದೆ.

ಗರ್ಭಧಾರಣೆ ಯಾಗದಿದ್ದರೆ, ಹಾರ್ಮೋನ್ ಮಟ್ಟವು ಕುಸಿದು ಮುಟ್ಟಿನ ಪ್ರಕ್ರಿಯೆಗೆ ಕಾರಣವಾಗುತ್ತದೆ .

ವೈದ್ಯರು ಕೆಲವೊಮ್ಮೆ ಫಲವತ್ತತೆಯ ಚಿಕಿತ್ಸೆಗಳ ಹಿಂದಿನ ಗರ್ಭಪಾತದ ಇತಿಹಾಸವಿರುವವರ ಅಥವಾ ಆರಂಭಿಕ ರಕ್ತಸ್ರಾವದ ಲಕ್ಷಣಗಳಿರುವ ಮಹಿಳೆಯರಿಗೆ ಪ್ರದರ್ಶನ ಮಾತೆಗಳು ಜಲ್ಗಳು ಅಥವಾ ಇಂಜೆಕ್ಷನ್ ಗಳನ್ನು ನೀಡುತ್ತಾರೆ .

ಪ್ರೊಜೆಸ್ಟಿರಾನ್ ಹಾರ್ಮೋನಿನ ಸಾಮಾನ್ಯ ಅಂತ.

ಪ್ರೊಜೆಷ್ಟಿರಾನ್ ಅಂಡಾಶಯಗಳಿಂದ ಉತ್ಪತ್ತಿಯಾಗುವ ಪ್ರಮುಖ ತ್ರಿ ಹಾರ್ಮೋನ್. ಸಾಮಾನ್ಯ ಮಟ್ಟಗಳು ಋತುಚಕ್ರದ ಅಂತ ಅಥವಾ ಗರ್ಭವಸ್ಥೆಯನ್ನು ಅವಲಂಬಿಸಿರುತ್ತದೆ.

1. ಪೋಲಿಕ್ಯುಲರ್ ಅಂತ ( ಅಂಡೋತ್ಪತ್ತಿಯ ಮೊದಲು) 1 ರಿಂದ 1.5 ng/ml ಗಿಂತ ಕಡಿಮೆ .

2. ಲೂಟಿಯಲ್ ಅಂತ ( ಅಂಡೋತ್ಪತ್ತಿಯ ನಂತರ) 5 ರಿಂದ 25ng/ml.

3. ಗರ್ಭಧಾರಣೆಯ ಮೊದಲ ತ್ರೈಮಾಸಿಕ 10 ರಿಂದ 44ng/ml.

ಪ್ರೋಜೆಸ್ಟಿರಾನ್ ಮಹಿಳೆಯರ ಋತುಚಕ್ರ ಮತ್ತು ಗರ್ಭಾವಸ್ಥೆಯನ್ನು ನಿಯಂತ್ರಿಸುವ ಪ್ರಮುಖವಾದ ಹಾರ್ಮೋನ್ ಆಗಿರುವುದರಿಂದ ಇದರ ಮಟ್ಟವು ಹೆಚ್ಚಾದರೆ ಮತ್ತು ಕಡಿಮೆಯಾದರೆ ಅದನ್ನು ಅಸಹಜ ಎಂದು ಪರಿಗಣಿಸಲಾಗುತ್ತದೆ.

ಕಡಿಮೆ ಪ್ರೊಜೆಸ್ಟಿರನ್ನ ಮಟ್ಟವು, ಅನಿಯಮಿತ ಮುಟ್ಟು, ಬಂಜೆತನ, ಗರ್ಭವಸ್ಥೆಯಲ್ಲಿ ರಕ್ತಸ್ರಾವ ಅಥವಾ ಪದೇಪದೇ ಗರ್ಭಪಾತಕೆ ಕಾರಣವಾಗಿರುತ್ತದೆ.

ಅಂಡೋತ್ಪತ್ತಿಯ ಸಮಸ್ಯೆಗಳು, ಅಧಿಕ ಒತ್ತಡ, ಅಧಿಕ ತೂಕ ಮತ್ತುPCOS /PCOD ಇದಕ್ಕೆ ಕಾರಣವಾಗಿರುತ್ತದೆ.

ಅಧಿಕ ಪ್ರೊಜೆಸ್ಟಿರಾನ್ ಮಟ್ಟ, ಸಾಮಾನ್ಯವಾಗಿ ಗರ್ಭವಸ್ಥೆಯಲ್ಲಿ ಇದು ಹೆಚ್ಚಾಗುತ್ತದೆ. ಆದರೆ ಹಾರ್ಮೋನ್ ಚಿಕಿತ್ಸೆಗಳು, ಅಂಡಾಶಯದ ಚೀಲಗಳು, ಅಥವಾ ಕೆಲವು ಬಾರಿ ಅಡ್ಡಿನಲ್ ಗ್ರಂಥಿಯ ಸಮಸ್ಯೆಗಳಿಂದಲೂ ಅಧಿಕ ಪ್ರದರ್ಶನ ಮಟ್ಟವು ರಕ್ತದಲ್ಲಿ ಹೆಚ್ಚಾಗಬಹುದು.ಅನಿಯಮಿತ ಮುಟ್ಟು, ಗರ್ಭ ಧರಿಸಲು ಸಾಧ್ಯವಾಗದ ಸ್ಥಿತಿಗೆ ಇದು ಕಾರಣವಾಗಬಹುದು.

ಪ್ರೊಜೆಷ್ಟಿರಾನ್ ಮಟ್ಟವನ್ನು ಪತ್ತೆಹಚ್ಚಲು ಮಾಡುವ ರಕ್ತ ಪರೀಕ್ಷೆಗಳು ಮತ್ತು ಉಪಯೋಗಗಳು.

ಪ್ರದರ್ಶನ ಪರೀಕ್ಷೆಯು ರಕ್ತದಲ್ಲಿನ ಪ್ರಜೆಷ್ಟಿರಾನ್ ಹಾರ್ಮೋನ್ ಮಟ್ಟವನ್ನು ಅಳೆಯುತ್ತದೆ. ಇದು ಸರಿಯಾಗಿ ನಡೆಯುತ್ತಿದೆಯೋ, ಗರ್ಭಧಾರಣೆಗೆ ಸಮಸ್ಯೆಗಳಿವೆ ಅಥವಾ ಮುಟ್ಟಿನ ಸಮಸ್ಯೆಗಳಿಗೆ ಕಾರಣವೇನು ಎಂದು ಸಹಾಯ ಮಾಡುತ್ತದೆ.

ಅಂಡೋತ್ಪತ್ತಿಯನ್ನು ಖಚಿತಪಡಿಸಲು , ಗರ್ಭಾವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಬಂಜೆತನದ ಸಮಸ್ಯೆಗಳನ್ನು ಪತ್ತೆಹಚ್ಚಲು ರಕ್ತ ಪರಿಚಯವನ್ನು ನಡೆಸಲಾಗುತ್ತದೆ. ಸಾಮಾನ್ಯ ಮಟ್ಟವು ನೀವು ಯಾವ ಋತುಚಕ್ರದ ಹಂತದಲ್ಲಿದ್ದೀರಿ ಎಂಬುದರ ಮೇಲೆ ಫಲಿತಾಂಶಗಳು ಅವಲಂಬಿತವಾಗಿರುತ್ತದೆ ಅಂಡಾಣೋತ್ಪತ್ತಿಯ ಸಮಯದಲ್ಲಿ ಇದರ ಮಟ್ಟವು ಅಧಿಕವಾಗಿರುತ್ತದೆ.

ಪ್ರೊಜೆಸ್ಟಿರಾನ್ ಚಿಕಿತ್ಸೆಯ ಉಪಯೋಗಗಳು

ಪ್ರೊಜೆಸ್ಟಿರಾನ್ ಎನ್ನುವುದು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ನಿಯಂತ್ರಿಸುವ ನೈಸರ್ಗಿಕ ಹಾರ್ಮೋನ್ ಆಗಿರುವುದರಿಂದ ಇದರ ಚಿಕಿತ್ಸೆಯು ಹಾರ್ಮೋನುಗಳ ಅಸಮತೋಲನವನ್ನು ನಿಯಂತ್ರಿಸಲು ಮತ್ತು ಮುಟ್ಟಿನ ಚಕ್ರವನ್ನು ನಿಯಂತ್ರಿಸಲು ಮತ್ತು ಗರ್ಭಧಾರಣೆಯನ್ನು ಬೆಂಬಲಿಸಲು ಅತ್ಯಗತ್ಯ.

1. ಗರ್ಭ ಗರ್ಭವಸ್ಥೆಯಲ್ಲಿ ಗರ್ಭಾಶಯವನ್ನು ಸದೃಢವಾಗಿಡಲು ಮತ್ತು ಗರ್ಭಪಾತದ ಅಪಾಯವನ್ನು ತಡೆಯಲು ಇದನ್ನು ನೀಡಲಾಗುತ್ತದೆ.

2. ಮುಟ್ಟಿನ ಶ್ರಾವ ಸರಿಯಾಗದಿದ್ದಲ್ಲಿ ಅಥವಾ ಮುಟ್ಟು ನಿಂತು ಹೋಗಿದ್ದಲ್ಲಿ ಇದನ್ನು ಚಿಕಿತ್ಸೆಯಾಗಿ ಬಳಸಲಾಗುತ್ತದೆ.

3. ಫಲವತ್ತತೆಯ ಚಿಕಿತ್ಸೆ(IVF) ಬಂಜೆತನ ನಿವಾರಣೆಗೆ ಮತ್ತು ಐವಿಎಫ್ ಚಿಕಿತ್ಸೆಯಲ್ಲಿ ಗರ್ಭಕಟ್ಟುವಿಕೆಗೆ ಅನುಕೂಲವಾಗುವಂತೆ ಇದನ್ನು ನೀಡಲಾಗುತ್ತದೆ.

4. ಋತುಬಂಧದ ಲಕ್ಷಣಗಳಾದ ಮೆನೋಪಾಸ್ ಸಮಯದಲ್ಲಿ ಹಾರ್ಮೋನ್ ಚಿಕಿತ್ಸೆಯಾಗಿ ಬಳಸಲಾಗುತ್ತದೆ.

ಪ್ರೊಜೆಸ್ಟಿರಾನ್ ಹಾರ್ಮೋನು ಲಭ್ಯವಿರುವ ವಿಧಗಳು

1. ಮಾತ್ರೆಗಳು

2. ಕ್ರೀಮ್ ಅಥವಾ ಜಲ್

3. ಇಂಜೆಕ್ಷನ್ ಮತ್ತು ಯೋನಿ ಕ್ಯಾಪ್ಸುಲ್ಗಳು ಗರ್ಭಧಾರಣೆಯ ಸಂದರ್ಭದಲ್ಲಿ ಮತ್ತು ಫಲವತ್ತತೆಯ ಚಿಕಿತ್ಸೆಗಳಲ್ಲಿ ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ.

ಒಟ್ಟಾರೆ ಪ್ರೊಜೆಸ್ಟಿರಾನ್ ಹಾರ್ಮೋನು ಮಹಿಳೆಯರ ದೇಹದ ಮುಖ್ಯವಾದ ನೈಸರ್ಗಿಕ ಹಾಗೂ ಲೈಂಗಿಕ ಹಾರ್ಮೋನ್ ಆಗಿದ್ದು, ಅತಿಯಾದ ಅಥವಾ ಕಡಿಮ ಸ್ರವಿಸುವಿಕೆಯಿಂದ ದೇಹದಲ್ಲಿ ಅಂಡೋತ್ಪತ್ತಿ, ಗರ್ಭವಸ್ಥೆ ಮತ್ತು ಋತುಚಕ್ರದ ಮೇಲೆ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಸಮಯಕ್ಕೆ ಅನುಗುಣವಾಗಿ ಇದರ ಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅಗತ್ಯವಿದ್ದಲ್ಲಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ.

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.