What is cholestrol, symptoms,control, treatment and reasons for it.ಕೊಲೆಸ್ಟ್ರಾಲ್ ಎಂದರೆ ಏನು…? ವಿಧಗಳು, ಕಾರಣಗಳು, ಮುನ್ನೆಚ್ಚರಿಕೆಗಳು ಹಾಗೂ ಚಿಕಿತ್ಸೆ.

ನಮ್ಮ ದೇಹದಲ್ಲಿನ ರಕ್ತವು ಕೊಬ್ಬಿನಾಂಶವನ್ನು ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ನಾವು ಸೇವಿಸುವ ಆಹಾರದ ಮೂಲಕ ಕೊಲೆಸ್ಟ್ರಾಲ್ ಅಂಶ ರಕ್ತಕ್ಕೆ ಸೇರುತ್ತದೆ. ಇದು ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಉಪಯುಕ್ತವಾಗಿದೆ.

5/21/20261 min read

ಯಕೃತ್ತಿನಿಂದ ಉತ್ಪಾದನೆಯಾಗುವ ಕೊಲೆಸ್ಟ್ರಾಲ್ ಬದಲಿಗೆ ನಾವು ತೆಗೆದುಕೊಳ್ಳುವ ಆಹಾರದ ಮೂಲಕವೂ ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಸೇರುತ್ತದೆ .ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಎಲ್ಲವೂ ಹಾನಿಕಾರಕವಲ್ಲ ನಮ್ಮ ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ ಉತ್ತಮ ಕೊಲೆಸ್ಟ್ರಾಲ್ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ಅನಾರೋಗ್ಯವನ್ನು ಉಂಟುಮಾಡುತ್ತದೆ .

ಕೊಲೆಸ್ಟ್ರಾಲ್ ನ ವಿಧಗಳು

ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ ಅದು High density ಲಿಪೋ ಪ್ರೋಟೀನ್ HDL’,Low density ಲಿಪೋ ಪ್ರೋಟೀನ್ LDL Tri glycerides .ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಜೀರ್ಣಾಂಗ ವ್ಯೂಹಕ್ಕೆ ಹೋಗುವಾಗ ತೊಂದರೆ ಉಂಟಾಗುತ್ತದೆ ಒಂದು ವೇಳೆ ಕೆಟ್ಟ ಕೊಲೆಸ್ಟ್ರಾಲ್ ಅತಿಯಾಗಿ ಇದರಿಂದ ಹೃದಯ ಸಂಬಂಧಿಸಿದ ಕಾಯಿಲೆಗಳು ಬರುವ ಅಪಾಯವಿದೆ.

ಅಧಿಕ ಕೊಲೆಸ್ಟ್ರಾಲ್ ಕಾರಣದಿಂದ ದೇಹದಲ್ಲಿ ಉಂಟಾಗುವ ಲಕ್ಷಣಗಳು

ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ ಅಧಿಕವಾಗಿದ್ದರೆ ಅದು ಕೆಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಕಂಡುಬರುವ ಲಕ್ಷಣಗಳು.

1- ಗುಂಡದಡ

ನಮ್ಮ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಹೆಚ್ಚಾದರೆ ಅವು ರಕ್ತ ಪ್ರಸರಣವನ್ನು ತಡೆಯುತ್ತವೆ. ಇದರಿಂದ ನಾವು ಸ್ವಲ್ಪ ವೇಗವಾಗಿ ನಡೆದಾಡಿ ಕೆಲಸ ಮಾಡಿದರು ಹೃದಯ ಬಡಿತ ಹೆಚ್ಚಾಗುತದೆ.

2- ಚಾತಿ ನೋವು

ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯದಿಂದ ದೇಹದ ಭಾಗಗಳಿಗೆ ಅವಶ್ಯಕತೆ ವಾದ ರಕ್ತವು ಲಭ್ಯವಾಗುವಂತೆ ಜಾತಿಯ ಉಂಟಾಗುತ್ತದೆ ಇದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ ಕಾರಣದಿಂದಾಗಿ ಹೃದಯ ಅಥವಾ ಜಾತಿಯಲ್ಲಿ ನೋವು ಉಂಟಾಗುತ್ತದೆ.

3 ದೇಹದ ಮೇಲೆ ಹುಣ್ಣು

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ಗಡ್ಡೆಗಳು ಉಂಟಾಗುವ ಸಾಧ್ಯತೆ ಇದೆ. ಹುಣ್ಣುಗಳು ದೇಹದ ಯಾವ ಭಾಗದಲ್ಲಿ ಸಂಭವಿಸಬಹುದು .

4 ಉಸಿರಾಟದ ಕ್ರಿಯೆಯಲ್ಲಿ ತೊಂದರೆ

ಕೊಲೆಸ್ಟ್ರಾಲಿ ಹೆಚ್ಚಾಗಿ ಇರುವುದರಿಂದ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ ಕೆಲವು ಬಾರಿ ಉಸಿರು ತೆಗೆದುಕೊಳ್ಳಲು ಕಷ್ಟವಾಗುತ್ತದೆ .

5ಅಧಿಕ ರಕ್ತದೊತ್ತಡ

ಕೊಲೆಸ್ಟ್ರಾಲ್ ಹೆಚ್ಚಾಗಿ ಇದರಿಂದ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ.

ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಮ್ಮ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್(LDL) , Tri glyceride ಇರುತ್ತದೆ ಒಟ್ಟು ಕೊಲೆಸ್ಟ್ರಾಲ್ 200 mg/DL ಇದ್ದರೆ ಅದು ಆರೋಗ್ಯಕರ ಮಟ್ಟದಲ್ಲಿ ಇರುತ್ತದೆ .ಇದರಲ್ಲಿHDL 40mg/DL ಕಡಿಮೆ, LDL 100mg/DL ಕಡಿಮೆ, Triglyceride 150 mg/DL ಕಡಿಮೆ ಇರಬೇಕು

ಒಟ್ಟು ಕೊಲೆಸ್ಟ್ರಾಲ್ ಮಟ್ಟ 200ರಿಂದ 240 mg/DL ಮಧ್ಯದಲ್ಲಿ ಇದ್ದಾರೆ ಇದು ಸ್ವಲ್ಪ ಹೆಚ್ಚು . ಇದರಲ್ಲಿ HDL 60mg/DL, LDL 160mg/DL ಕಡಿಮೆ, Triglyceride 200mg/DL ಕಡಿಮೆ ಇರಬೇಕು. ರೀತಿ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಅವರು ಸೂಚಿಸಿದ ರೀತಿಯಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಒಟ್ಟು ಕೊಲೆಸ್ಟ್ರಾಲ್ 240 ದಾಟಿದರೆ ಅದು ಅಪಾಯಕಾರಿ ಮಟ್ಟದಲ್ಲಿದೆ ಇಂತಹ ಸಂದರ್ಭದಲ್ಲಿ ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವು ಅತಿಯಾಗಿ ಉತ್ಪತ್ತಿಯಾಗಲು ಕಾರಣಗಳು

ಅಧಿಕ ಕೊಲೆಸ್ಟ್ರಾಲ್ ನಮ್ಮ ದೇಹವನ್ನು ಅನೇಕ ರೂಪದಲ್ಲಿ ಸೇರುತ್ತದೆ.

1) ಆಹಾರ

ಸಾಮಾನ್ಯವಾಗಿ ಆಹಾರ ಜಂಕ್ ಫುಡ್ ಮತ್ತು ಪ್ರೋಸೆಸ್ ಮಾಡಿದ ಆಹಾರ ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಸ್ಥಾಯಿಗಳು ಬೆಳೆಯುತ್ತದೆ

2) ಕನಿಷ್ಠ ದೈಹಿಕ ಶ್ರಮ ಕೊರತೆ

ಪ್ರತಿ ದಿನ ನಾವು ದೇಹಕ್ಕೆ ಅಗತ್ಯವಾದ ಆಹಾರಕ್ಕಿಂತ ಹೆಚ್ಚು ಆಹಾರ ತೆಗೆದುಕೊಳ್ಳುತ್ತೇವೆ ಅಂತಹ ಸಂದರ್ಭದಲ್ಲಿ ದೇಹಕ್ಕೆ ಶ್ರಮ ಇಲ್ಲದಿದ್ದರೆ ಆದರ ಕಾರಣ ಕೊಲೆಸ್ಟ್ರಾಲ್ ಸ್ಥಾಯಿಗಳು ಬೆಳೆಯುತ್ತದೆ

3) ಧೂಮಪಾನ

ಧೂಮಪಾನ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.

4) ಮಧ್ಯಪಾನ

ಮಧ್ಯಪಾನದಿಂದ ಕೂಡ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.

5) ಮಧುಮೇಹ

ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವು ಹೆಚ್ಚಿನ ಅವಕಾಶವನ್ನು ಹೊಂದಿದೆ

6)ಹೈಪೋ ಥೈರಾಯಿಡಿಸಂ

ನಮ್ಮ ದೇಹದಲ್ಲಿ ಇರುವ ಥೈರೊಯ್ಡ್ ಗ್ರಂಥಿ ದೇಹಕ್ಕೆ ಅಗತ್ಯವಾದ ಹಾರ್ಮೋನ್ ಗಳನ್ನು ಉತ್ಪಾದಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ ಇದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವು ಅಧಿಕವಾಗುತ್ತದೆ

7) ಮಾನಸಿಕ ಒತ್ತಡ

ಮಾನಸಿಕ ಒತ್ತಡ ಎಂಬುದು ನೇರವಾಗಿ ಕೊಲೆಸ್ಟ್ರಾಲ್ ಮಟ್ಟ ಬೆಳೆಯಲು ಕಾರಣ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವಂತೆ ಪ್ರೇರೇಪಿಸುತ್ತದೆ

ಕೊಲೆಸ್ಟ್ರಾಲ್ ನಿಯಂತ್ರಿಸುವ ಕ್ರಮಗಳು
1) ವ್ಯಾಯಾಮ

ಬಹುತೇಕ ಎಲ್ಲಾ ದೈಹಿಕ ಶ್ರಮ, ವ್ಯಾಯಾಮ ಮಾಡದೆ ಇರುವುದರಿಂದ ಹೆಚ್ಚಾಗುತ್ತದೆ ಕೊಲೆಸ್ಟ್ರಾಲ್ ಮಟ್ಟದ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಪ್ರತಿದಿನ ಕನಿಷ್ಠ ವ್ಯಾಯಾಮ ಮಾಡಬೇಕು

2) ತೂಕ ನಿಯಂತ್ರಣ

ತೂಲಕಾಯ ಇರುವವರಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಲು ಆದ್ದರಿಂದ

3) ಧೂಮಪಾನ ನಿಯಂತ್ರಣ

ಸಿಗರೇಟ್ ಕುಡಿಯುವುದು ಅಥವಾ ನಿಕೋಟಿನ್ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತವೆ ಎಲ್ಲಾ ರೀತಿಯ ಧೂಮಪಾನಗಳು ಇತರ ಕಾಯಿಲೆಗಳಿಗೆ ಸಹ ಕಾರಣವಾಗುತ್ತದೆ.

4) ಮದ್ಯಪಾನ ನಿಯಂತ್ರಣ

ಕೊಲೆಸ್ಟ್ರಾಲ್ ಹೆಚ್ಚಾಗಲು ಮಧ್ಯಪಾನವು ಕೂಡ ಕಾರಣವಾಗುತ್ತದೆ ಆದ್ದರಿಂದ ಮಧ್ಯಪಾನವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.

5) ಆಹಾರದಲ್ಲಿ ಬದಲಾವಣೆಗಳು –

ನಾವು ಪ್ರತಿದಿನ ತೆಗೆದುಕೊಳ್ಳುವ ಆಹಾರದಿಂದ ಕೂಡ ದೇಹದಲ್ಲಿ ಕೊಲೆಸ್ಟ್ರಾಲ ಅಂಶವು ಬೆಳೆಯುತ್ತದೆ processed ಆಹಾರವನ್ನು ಕಡಿಮೆ ಮಾಡಬೇಕು ಫೈಬರ್ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬೇಕ.

ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಆಹಾರ ಕ್ರಮಗಳು.

ನಮ್ಮ ದೇಹಕ್ಕೆ ಅಗತ್ಯವಾದ ಉತ್ತಮ ಕೊಲೆಸ್ಟ್ರಾಲನ್ನು ನೀಡುತ್ತಾ ಕೆಟ್ಟ ಕೊಲೆಸ್ಟ್ರಾಲನ್ನು ಹಿಡಿದಿಡಲು ತೆಗೆದುಕೊಳ್ಳಬೇಕಾದ ಆಹಾರಗಳು.

ಬಾದಾಮಿ

ವೋಟ್

ವೋಟ್

ನಿಂಬೆ

ಹಾಲು

ಬಾರ್ಲಿ

ಮೀನುಗಳು

ಹಸಿರು ತರಕಾರಿಗಳು

ಸೊಪ್ಪು

ಆಲಿವ್ ಆಯಿಲ್

ಬದನೆಕಾಯಿ

ಕೊಲೆಸ್ಟ್ರಾಲ್ ಅಂಶವು ಹೆಚ್ಚಾಗಿರುವಾಗ ನಿಯಂತ್ರಿಸಬೇಕಾದ ಆಹಾರ ಪದಾರ್ಥಗಳು.

ಗೋಮಾಂಸ

ಮೇಕೆ ಮಾಂಸ

ಪಮೈಲ್

ಪಿಜ್ಜಾ ಬರ್ಗರ್

ಫಾಸ್ಟ್ ಫುಡ್.

ಕೊಲೆಸ್ಟ್ರಾಲ್ ಚಿಕಿತ್ಸೆ

ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಾಕಷ್ಟು ವ್ಯಾಯಾಮ ಮಾಡುವುದು ಆಹಾರದಲ್ಲಿ ಬದಲಾವಣೆಗಳನ್ನು ಮಾಡುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು. ಪದ್ಧತಿಗಳ ಮೂಲಕ ಕೊಲೆಸ್ಟ್ರಾಲ್ ಅಂಶವು ಕಡಿಮೆಯಾಗದಿದ್ದರೆ ಕೆಲವು ರೀತಿಯ ಔಷಧಗಳ ಮೂಲಕ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸಬಹುದು.ss ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಅವಶ್ಯಕವಾದ ಔಷಧಿಗಳನ್ನು ವೈದ್ಯರು ಸೂಚಿಸುತ್ತಾರೆ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸೂಚಿಸುವ ವ್ಯಾಯಾಮ ಜೀವನ ಶೈಲಿ ಬದಲಾವಣೆಗಳನ್ನು ನಿಖರವಾಗಿ ಪಾಲಿಸಬೇಕು.

ಪ್ರಮುಖ ಕೊಲೆಸ್ಟ್ರಾಲ್ ಪರೀಕ್ಷೆಗಳ ವಿಧಗಳು ಮತ್ತು ಅವುಗಳ ವಿವರ.

1 ಒಟ್ಟು ಕೊಲೆಸ್ಟ್ರಾಲ್ (Total cholesterol) ಇದು ನಿಮ್ಮ ರಕ್ತದಲ್ಲಿರುವ ಎಲ್ಲಾ ಬಗ್ಗೆ ಕೊಲೆಸ್ಟ್ರಾಲ್ ಒಟ್ಟು ಮೊತ್ತವನ್ನು ಅಳೆಯುತ್ತದೆ.

2 LDL ಇದು ಕಡಿಮೆ ಸಾಂದ್ರತೆಯ ಲಿಪೋ ಪ್ರೋಟೀನ್ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ .ಇದು ಅಪಧಮನಿಗಳಲ್ಲಿನ ಜಿಡ್ಡಿನ ಪ್ರದರವನ್ನು ಉಂಟು ಮಾಡಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

3. HDL ಅಧಿಕ ಸಾಂದ್ರತೆಯ ಲಿಪೋ ಪ್ರೋಟೀನ್ಇದನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲನ್ನು ರಕ್ತನಾಳಗಳಿಂದ ತೆಗೆದು ಹಾಕಲು ಸಹಾಯ ಮಾಡುತ್ತದೆ.

4VLDL ಅತ್ಯಂತ ಅತ್ಯಂತ ಕಡಿಮೆ ಸಾಂದ್ರತೆಯ ಲಿಪೋ ಪ್ರೋಟೀನ್ ಇದು ಮತ್ತೊಂದು ರೀತಿಯ ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು ದೇಹದಲ್ಲಿ ಶಕ್ತಿಯಾಗಿ ಬಳಸಲು ಕೊಬ್ಬನ್ನು ಸಾಗಿಸುತ್ತದೆ.

5Triglycerides ಇದು ರಕ್ತದಲ್ಲಿ ಕಂಡುಬರುವ ಒಂದು ಸಾಮಾನ್ಯ ಕೊಬ್ಬಿನ ವಿಧವಾಗಿದೆ ಹೆಚ್ಚಿನಗಳು ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕಾಗಿ ಪ್ರತಿಮೂರು ತಿಂಗಳಿಗೊಮ್ಮೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಪರೀಕ್ಷೆ ಮಾಡುವುದು ಉತ್ತಮ, ಪರೀಕ್ಷೆಗಾಗಿ 8 ರಿಂದ 10 ಗಂಟೆಗಳ ಫಾಸ್ಟಿಂಗ್ ಅಗತ್ಯವಿದೆ .

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.