ವಿಟಮಿನ್ E ಎಂದರೇನು.. ?ಕೊರತೆಯ ಲಕ್ಷಣಗಳು, ಚಿಕಿತ್ಸೆ/ Vitamin E, deficiency, treatment and symptoms
ವಿಟಮಿನ್ E ಅನ್ನು ಕನ್ನಡದಲ್ಲಿ ಸರಳವಾಗಿ ವಿಟಮಿನ್ ಇ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕರ ಚರ್ಮ, ಹೊಳಪಿನ ಕೂದಲು, ಬಲವಾದ ರೋಗ ನಿರೋಧಕ ಶಕ್ತಿ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕೊಬ್ಬು ಕರಗುವ ಮತ್ತೊಂದು ಪೋಷಕಾಂಶ ಮತ್ತು ಉತ್ಕರ್ಷಣ ನಿರೋಧಕವಾಗಿದೆ.
6/15/20261 min read


ವಿಟಮಿನ್ E ಅನ್ನು ಕನ್ನಡದಲ್ಲಿ ಸರಳವಾಗಿ ವಿಟಮಿನ್ ಇ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕರ ಚರ್ಮ, ಹೊಳಪಿನ ಕೂದಲು, ಬಲವಾದ ರೋಗ ನಿರೋಧಕ ಶಕ್ತಿ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕೊಬ್ಬು ಕರಗುವ ಮತ್ತೊಂದು ಪೋಷಕಾಂಶ ಮತ್ತು ಉತ್ಕರ್ಷಣ ನಿರೋಧಕವಾಗಿದೆ.
ವಿಟಮಿನ್ ಇ ಎಂಬುದು ಎಂಟು ಸಂಯುಕ್ತಗಳ ಗುಂಪಾಗಿದ್ದು, ಇದರಲ್ಲಿ ನಾಲ್ಕು ಟೊಕೋ ಫೆರಲ್ಗಳು ಮತ್ತು ನಾಲ್ಕು ಟೋಕೋ ಟ್ರೀಯನಾಲ್ ಗಳು ಸೇರಿವೆ.ಟೊಕೋ ಫೆರಲ್ಗಳು ಕೊಬ್ಬು ಕರಗುವ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.ಜೀವಕೋಶಗಳ ಪೊರೆಗಳನ್ನು ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಇ ಅನ್ನೋ ಮಾನವರಿಗೆ ಅತ್ಯಗತ್ಯ ಪೋಷಕಾಂಶವೆಂದು ವರ್ಗೀಕರಿಸಲಾಗಿದೆ. ದಿನಕ್ಕೆ 3 ರಿಂದ ಮಲ15mg ಶಿಫಾರಸು ಮಾಡಲಾಗಿದೆ.
ವಿಟಮಿನ್ ಇ ಸಮೃದ್ಧವಾಗಿರುವ ಮೂಲಗಳಲ್ಲಿ ಬೀಜದ ಎಣ್ಣೆಗಳು, ಬೀಜಗಳು, ಕಡಲೆ ಎಣ್ಣೆ, ವಿಟಮಿನ್ ಇ ಹೆಚ್ಚಾಗಿ ಕಂಡುಬರುವಂತಹ ಆಹಾರಗಳು.
ವಿಟಮಿನ್ ಇ ಕೊರತೆಗೆ ಕಾರಣಗಳು
1.ವಿಟಮಿನ್ ಇ ಕೊರತೆಗಿಂತ ವಿಟಮಿನ್ ಇರಿಕೊಳ್ಳುವ ಕೊಬ್ಬು ಅಥವಾ ಚಯಾಪಚಯ ಕ್ರಿಯೆಯಲ್ಲಿನ ಅಸಹಜತೆಗಳ ಪರಿಣಾಮವಾಗಿ ವಿಟಮಿನ್ ಇ ಕೊರತೆಯು ಕಂಡುಬರುತ್ತದೆ. ಇತರ ಕೊಬ್ಬಿನ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುವ ಪರಿಸ್ಥಿತಿಯಲ್ಲಿ ಶ್ರೀರಾಮ್ ವಿಟಮಿನ್ ಕೊರತೆಗೆ ಕಾರಣವಾಗಬಹುದು.
2. ಚಯಾಪಚಯ ಕ್ರಿಯೆಯಲ್ಲಿನ ಅನುವಂಶಿಕ ಅಸಾಧ್ಯತೆ ಕಾರಣವಾಗಬಹುದು.
3. ಬೊಜ್ಜು ಚಿಕಿತ್ಸೆಯಾಗಿ ಬೇರೆಯಟ್ರಿಕ್ ಶಾಸ್ತ್ರ ಚಿಕಿತ್ಸೆಯು ವಿಟಮಿನ್ ಕೊರತೆಗಳಿಗೆ ಕಾರಣವಾಗಬಹುದು ದೀರ್ಘಾವಧಿಯ ಅನುಸರಣೆಯು ವಿಟಮಿನಿ ಕೊ16.5% ರಷ್ಟು ಹರಡುವಿಕೆಯನ್ನು ವರದಿ ಮಾಡಿದೆ. ಮಲ್ಟಿ ವಿಟಮಿನ್ ಪೂರಕ ಗಳಿಗೆ ಮಾರ್ಗಸೂಚಿಗಳಿವೆ ಆದರೆ ಅನುಸರಣೆ ದರಗಳು20% ಕಿಂತ ಕಡಿಮೆ ಎಂದು ವರದಿಯಾಗಿದೆ.
4. ಹೀರಿಕೊಳ್ಳುವಿಕೆಯಲ್ಲಿ ಅಡಚಣೆ ಅಥವಾ ಚಯಾಪಚಯ ಕ್ರಿಯೆಯಲ್ಲಿನ ಅಸಂಗತತೆಯಿಂದಾಗಿ ವಿಟಮಿನ್ ಇ ಕೊರತೆಗಳು ನರಗಳ ಉದ್ದಕ್ಕೂ ವಿದ್ಯುತ್ ಪ್ರಚೋದನೆಗಳ ಕಳಪೆ ವಾಹನದಿಂದಾಗಿ ನರಗಳ ಸಮಸ್ಯೆಗಳನ್ನು ಉಂಟು ಮಾಡಬಹುದು, ಏಕೆಂದರೆ ನರ ಪೊರೆಯ ರಚನೆ ಮತ್ತು ಕಾರ್ಯದಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ.
5. ಆಟಾಕ್ಷಿಯ ಜೊತೆಗೆ ವಿಟಮಿನ್ ಕೊರತೆಯು ಬಾಹ್ಯ ನರರೋಗ, ಮೈಯೋಪತಿಗಳು, ರೆಟಿನೋಪತಿ ಮತ್ತು ರೋಗ ನಿರೋಧಕ ಪ್ರತಿಕ್ರಿಯೆಗಳ ದುರ್ಬಲತೆಗೆ ಕಾರಣವಾಗಬಹುದು.
ಆಹಾರವನ್ನು ಸೇವಿಸಿದಾಗ ವಿಟಮಿನ್ ಇ ಯ ಅಂಶಗಳಾದ ಆಲ್ಫ- ಟೋಪಾಫಿರಲ್, ಇತರ ಟಕೋ ಪೆರಲ್ ಮತ್ತು ಟೋಕೋಪಿ ಏನ್ ಎಲ್ ಗಳು ಪ್ರಮಾಣವು. ಔಷಧಿಗಳೊಂದಿಗೆ ಯಾವುದೇ ಪರಸ್ಪರ ಕ್ರಿಯೆಯನ್ನು ಉಂಟುಮಾಡುವುದಿಲ್ಲ. ದಿನಕ್ಕೆ 300mg ಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಫಾ- ಟೋಕೋ ಫೇರಲ್ ಅನ್ನು ಆಹಾರ ಪೂರಕವಾಗಿ ಸೇವಿಸುವುದರಿಂದ ಆಸ್ಪಿರಿನ್, ವಾರ್ಫಾರಿಲ್, ತ್ಯಾಮಾಕ್ಸಿಫೇನ್ ಮತ್ತು ಸೈಕ್ಲೋಸ್ಪೋರಿನ್ ಜೊತೆಗಿನ ಪರಸ್ಪರಿ ಕ್ರಿಯೆಗಳು ಕಾರ್ಯವನ್ನು ಬದಲಾಯಿಸಬಹುದು.
ವಿಟಮಿನ್ ಇ ಸಮೃದ್ಧವಾಗಿರುವ ಆಹಾರಗಳು.
ನಮ್ಮ ಆರೋಗ್ಯಕ್ಕೆ ಪ್ರತಿಯೊಂದು ಪೋಷಕಾಂಶಗಳು ಅತಿ ಅಗತ್ಯ. ಉದಾಹರಣೆಗೆ ಪ್ರೊಟೀನುಗಳು, ಖನಿಜಾಂಶಗಳು ಹಾಗೂ ವಿಟಮಿನ್ಸ್ ಗಳು ಇವುಗಳಲ್ಲಿ ಪ್ರಮುಖವಾಗಿವೆ. ಇವುಗಳಲ್ಲಿ ಒಂದು ಪೋಷಕಾಂಶದ ಕೊರತೆ ಉಂಟಾದರೂ ಕೂಡ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಟಮಿನ್ ಇಂತಹ ಒಂದು ಅವಶ್ಯಕ ಪೋಷಕಾಂಶಗಳಲ್ಲಿ ಒಂದಾಗಿದೆ.
ಪ್ರಮುಖವಾಗಿ ಕಣ್ಣುಗಳು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ, ವಿಟಮಿನ್ ಪಾತ್ರ ಮರೆಯುವುದಿಲ್ಲ.
1. ಅವಕಾಡೊ ಹಣ್ಣು
ಅವಕಾಡೊ ಹಣ್ಣು ಬೆಲೆಯಲ್ಲಿ ದುಬಾರಿಯಾದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಈ ಹಣ್ಣಿನಲಿ ವಿಟಮಿನ್ ಇ ಸಮೃದ್ಧ ಪ್ರಮಾಣದಲ್ಲಿ ಕಂಡು ಬರುತ್ತದೆ.
2 .ತುಪ್ಪ
ಆಯುರ್ವೇದ ತಜ್ಞರ ಪ್ರಕಾರ ತುಪ್ಪ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದು ಪ್ರಮುಖವಾಗಿ ವಾತ ಮತ್ತು ಪಿತ್ತದೋಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಮುಖವಾಗಿ ತುಪ್ಪದಲ್ಲಿ ವಿಟಮಿನ್ ಎ, ಇ ಹಾಗೂ ಡಿ ಉನ್ನತ ಮಠದಲ್ಲಿ ಕಂಡುಬರುತ್ತದೆ .
3. ಕುಂಬಳಕಾಯಿ ಬೀಜಗಳು.
ಕುಂಬಳಕಾಯಿ ಬೀಜಗಳು ನೋಡಲು ಸಾಮಾನ್ಯವಾಗಿರಬಹುದು ಆದರೆ ಅಗಾಧ ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಈ ಪುಟ್ಟ ಬೀಜದಲ್ಲಿಯೂ ಕೂಡ ವಿಟಮಿನ್ ಇ ಯಥೇಚ್ಛವಾಗಿ ಕಂಡುಬರುತ್ತದೆ.
4. ಸೂರ್ಯಕಾಂತಿ ಬೀಜಗಳು
ಸೂರ್ಯಕಾಂತಿ ಬೀಜಗಳು ಕೂಡ ಅಷ್ಟೇ ನೋಡಲು ಸಣ್ಣದಾಗಿ ಕಂಡುಬಂದರು,. ಅಗಾಧ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಈ ಬೀಜಗಳಲ್ಲಿ ವಿಟಮಿನ್ ಇ ಅಂಶದ ಜೊತೆಗೆ ಜಿಂಕ್ ಹಾಗೂ ಸೆಲೇನಿಯಂ ಅಂಶ ಕೂಡ ಹೆಚ್ಚಾಗಿ ಕಂಡುಬರುತ್ತದೆ.
5. ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಈ ಸೊಪ್ಪಿನಲ್ಲಿ ವಿಟಮಿನ್ ಇ ಅಂಶವು ಅಗಾಧ ಪ್ರಮಾಣದಲ್ಲಿ ಕಂಡುಬರುತ್ತದೆ
6. ಗೋಡಂಬಿ ಬೀಜಗಳು
ಗೋಡಂಬಿ ಬೀಜಗಳು ಬೆಲೆಯಲ್ಲಿ ದುಬಾರಿಯಾದರೂ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಪ್ರಮುಖವಾಗಿ ಗೋಡಂಬಿ ಬೀಜಗಳಲ್ಲಿಯೂ ಸಹ ಅಷ್ಟೇ ಪ್ರೋಟೀನ್, ನಾರಿನಾಂಶ, ಖನಿಜಾಂಶಗಳ ಜೊತೆಗೆ ವಿಟಮಿನ್ ಇ ಅಂಶ ಕೂಡ ಹೆಚ್ಚಾಗಿ ಕಂಡುಬರುತ್ತದೆ.
7. ಬಾದಾಮಿ ಬೀಜಗಳು.
ಬಾದಾಮಿಗಳಲ್ಲಿ ವಿಟಮಿನ್ ಈ ಸಮೃದ್ಧ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ಕಾಂತಿಗೆ ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಒಳಗೊಂಡಿದೆ.
ವಿಟಮಿನ್ ಇ ಕೊರತೆಯು ದೇಹದಲ್ಲಿ ಅಪರೂಪವಾದರೂ, ಇದು ಸ್ನಾಯು ದೌರ್ಬಲ್ಯ, ದೃಷ್ಟಿ ಮಂದವಾಗುವುದು, ನರಗಳ ಸಮಸ್ಯೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು. ಈ ಕೊರತೆಯನ್ನು ನಿವಾರಿಸಲು ವಿಟಮಿನ್ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದು ಉತ್ತಮ.
ವಿಟಮಿನ್ ಇ ಕೊರತೆಯ ಮುಖ್ಯ ಲಕ್ಷಣಗಳು.
1. ಸ್ನಾಯುಗಳ ದೌರ್ಬಲ್ಯ
ಸ್ನಾಯುಗಳು ದುರ್ಬಲವಾಗಿ ದೈನಂದಿನ ಕೆಲಸ ನಿಭಾಯಿಸಲು ಕಷ್ಟವಾಗಬಹುದು.
2. ದೃಷ್ಟಿ ಮಸುಕಾಗುವುದು
ಕಣ್ಣಿನ ರೆಟಿನಾ ದುರ್ಬಲಗೊಂಡು ದೃಷ್ಟಿ ದೋಷ ಅಥವಾ ಮಸುಕಾದ ದೃಷ್ಟಿ ಉಂಟಾಗಬಹುದು.
3. ನರಗಳ ಹಾನಿ
ಕೈ ಕಾಲು ನಡುಗುವುದು ಮತ್ತು ದೇಹದ ಸಮತೋಲನ ಕಳೆದುಕೊಳ್ಳುವುದು.
4. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.
ಪದೇ ಪದೇ ಶೀತ, ಕೆಮ್ಮು ಮತ್ತು ಇತರ ವೈರಲ್ ಸೋಂಕುಗಳು ಕಾಣಿಸಿಕೊಳ್ಳುತ್ತವೆ.
5.ಮೆದುಳಿನೊಳಗೆ ರಕ್ತಸ್ರಾವ .
6.ಕಣ್ಣುಗಳಲ್ಲಿ ರಕ್ತನಾಳಗಲ ಅಸಹಜ ಬೆಳವಣಿಗೆ .
7.ಹೆಮೋಲಿಟಿಕ್ ರಕ್ತಹೀನತೆ .
8.ನಡೆಯಲು ತೊಂದರೆ.
ವಿಟಮಿನ್ ಈ ಕೊರತೆಯಿಂದ ಬರಿವ ಖಾಯಿಲೆಗೆ ಕಾರಣವೇನು.
ಕೊಬ್ಬಿನ ಹೀರಿಕೊಳ್ಳುವಿಕೆಯ ಅಸ್ವಸ್ಥತೆಗಳು ಮತ್ತು ಕೆಲವು ಅನುವಂಶಿಕ ಅಸ್ವಸ್ಥತೆಗಳು ಸಾಮಾನ್ಯವಾಗಿ ಕಡಿಮೆ ವಿಟಮಿನ್ ಈ ಅನೇಕ ಆಹಾರಗಳಲ್ಲಿ ಕಂಡು ಬರುತ್ತದೆ.ಆದ್ದರಿಂದ ಅರೋಗ್ಯವಂತ ಜನರು ವಿರಳವಾಗಿ ಕೊರತೆಯನ್ನು ಹೊಂದಿರುತ್ತಾರೆ .
ಕೊಬ್ಬು ಹೀರಿಕೊಳ್ಳುವ ಅಸ್ವಸ್ಥತೆಗಳು.
ಆಹಾರ ಭದ್ರತೆಯ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ,ವಿಟಮಿನ್ ಈ ಕೊರತೆ ಅಸಾಮಾನ್ಯ.ನಿಮಗೆ ವಿಟಮಿನ್ ಈ ಕೊರತೆ ಇದ್ದಾರೆ,ಅದು ಹೆಚ್ಚಾಗಿ ನಿಮ್ಮ ದೇಹವು ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುವ ಅಸ್ವಸ್ಥತೆಯಿಂದ ಉಂಟಾಗುತ್ತದೆ.ಈ ರೋಗಗಳು ಸೇರಿವೆ.
1.ಯಕೃತ್ತಿನ ರೋಗ
2.ಪ್ಯಾಂಕ್ರಿಯಾಟಿಟಿಸ್
3.ಸಿಸ್ಟಿಕ್ ಫೈಬ್ರೋಸಿಸ್
4.ಕ್ರೋನ್ಸ್ ಖಾಯಿಲೆ
5.ಸಿಲಿಯಾಕ್ ಕಾಯಿಲೆ
ವಿಟಮಿನ್ ಇ ಕೊರತೆಯನ್ನು ಪತ್ತೆಹಚ್ಚಲು ವೈದ್ಯರು ಸಾಮಾನ್ಯವಾಗಿ (Vitamin E blood test) ರಕ್ತ ಪರೀಕ್ಷೆಯನ್ನುಬಳಸುತ್ತಾರೆ.. ಈ ಪರೀಕ್ಷೆ ರಕ್ತದಲ್ಲಿರುವ ವಿಟಮಿನ್ ಇ ಮಟ್ಟವನ್ನು ಅಳೆಯುತ್ತದೆ.
ಈ ಪರೀಕ್ಷೆಯಲ್ಲಿ ನಿಮ್ಮ ರಕ್ತದ ಮಾದರಿಯನ್ನು ಸಂಗ್ರಹಿಸಿ ಅದರಲ್ಲಿರುವ ವಿಟಮಿನ್ ಇ ಪ್ರಮಾಣವು ಸಾಮಾನ್ಯ ಮಟ್ಟದಲ್ಲಿದೆಯೂ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತಾರೆ.
ಸಾಮಾನ್ಯವಾಗಿ ಈ ಪರೀಕ್ಷೆಗೆ ಯಾವುದೇ ವಿಶೇಷ ಉಪವಾಸದ ಅಗತ್ಯವಿರುವುದಿಲ್ಲ. ನೀವು ಯಾವುದೇ ರಕ್ತ ತಿಳಿಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು
ವಿಟಮಿನ್ ಇ ಕೊರತೆಗೆ ಚಿಕಿತ್ಸೆ.
ವಿಟಮಿನ್ ಇ ಕೊರತೆ ಇದ್ದರೆ ವೈದ್ಯರು ನಿಮ್ಮ ದೇಹಗಳ ಅಗತ್ಯಕ್ಕೆ ಅನುಗುಣವಾಗಿ ವಿಟಮಿನ್ ಇ ಕ್ಯಾಪ್ಸುಲ್ ಅಥವಾ ಸಪ್ಲಿಮೆಂಟ್ ಗಳನ್ನು ಚಿಕಿತ್ಸೆಯಾಗಿ ನೀಡುತ್ತಾರೆ. ಜೊತೆಗೆ ವಿಟಮಿನ್ ಇರಳವಾಗಿರುವ ಸೊಪ್ಪು, ತರಕಾರಿ ಮತ್ತು ಬೀಜಗಳನ್ನು ಸೇವಿಸುವುದರ ಮೂಲಕ ವಿಟಮಿನ್ ಇ ಯನ್ನು ನೈಸರ್ಗಿಕ ರೀತಿಯಲ್ಲಿ ಹೆಚ್ಚಿಸಿಕೊಳ್ಳಬಹುದು.
