ವಿಟಮಿನ್ ಸಿ ಎಂದರೇನು.. ?ಕೊರತೆಯ ಲಕ್ಷಣಗಳು, ಚಿಕಿತ್ಸೆ/ Vitamin C, deficiency, symptoms and treatment

ವಿಟಮಿನ್ ಸಿ ಅನ್ನು ಕನ್ನಡದಲ್ಲಿ ವಿಟಮಿನ್ ಸಿ ಅಥವಾ ಸಿ ಜೀವ ಸತ್ವ ಎಂದು ಕರೆಯಲಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಆಸ್ಕಾರ್ಬಿಕ್ ಆಮ್ಲ ಎಂದು ಕರೆಯುತ್ತಾರೆ.

6/16/20261 min read

ಅಗತ್ಯ ಪೋಷಕಾಂಶವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ವಿಟಮಿನ್ ಸಿ ದೇಹಕ್ಕೆ ಅತಿಗತ್ಯವಾದ ಪೋಷಾಂಶಗಳಲ್ಲಿ ಒಂದು. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಅಳವಡಿಸಿಕೊಳ್ಳುವುದು ಉತ್ತಮ.

ಪ್ರತಿನಿತ್ಯ ಆರೋಗ್ಯವಂತ ವ್ಯಕ್ತಿ80mg ಅಷ್ಟು ವಿಟಮಿನ್ ಸಿ ಯನ್ನು ಸೇವನೆ ಮಾಡಬೇಕು. ಚಿಕ್ಕ ಮಕ್ಕಳಿಗೆ30mg ಹಾಗೂ ಕ್ರೀಡಾಪಟುಗಳು90mg ವಿಟಮಿನ್ ಸಿ ಸೇವನೆಯನ್ನು ಮಾಡಬೇಕು.

ವಿಟಮಿನ್ ಸಿ ಕೊರತೆಯ ಲಕ್ಷಣಗಳು

1. ಆಯಾಸ ಮತ್ತು ದುರ್ಬಲತೆ

2. ಬೇಗನೆ ಗಾಯ ವಾಗುವುದು

3. ಚರ್ಮದ ಮೇಲೆ ಅಲ್ಲಲ್ಲಿ ಕೆಂಪು ಮತ್ತು ನೀಲಿ ಬಣ್ಣದಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುವುದು.

4. ಒಣಗಿದ ಚರ್ಮ

5. ಸೀಳು ಕೂದಲು

6. ಹಠತ್ ದೇಹದ ತೂಕ ಇಳಿಕೆಯನ್ನು ಕಾಣಬಹುದು.

ವಿಟಮಿನ್ ಸಿ ದೊರೆಯುವ ಆಹಾರ ಪದಾರ್ಥಗಳು

1. ವಿಟಮಿನ್ ಸಿ ಮತ್ತು ಹಣ್ಣುಗಳಿಗೆ ಅವಿನ ಭಾವ ಸಂಬಂಧ ಇದೆ. ಏಕೆಂದರೆ ಕಿತ್ತಳೆ, ಮೂಸಂಬಿ, ಕಿವಿ, ಲಿಂಬೆ ಹೀಗೆ ಅನೇಕ ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಯನ್ನು ಕಾಣಬಹುದಾಗಿದೆ. ವಿಟಮಿನ್ ಸಿಯುಕ್ತ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ.

2. ಇನ್ನು ಮುಖ್ಯವಾಗಿ ಬೆಟ್ಟದ ನೆಲ್ಲಿಕಾಯಿ ಹೇರಳವಾದ ವಿಟಮಿನ್ ಸಿ, ಅಂಶವನ್ನು ಹೊಂದಿರುವ ಹಣ್ಣು. ಇದರ ಪುಡಿ ಅಥವಾ ನಿಯಮಿತವಾಗಿ ಹಣ್ಣನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಪೂರ್ಣ ಪ್ರಮಾಣದ ವಿಟಮಿನ್ ಸಿ ದೊರೆಯುತ್ತದೆ.

3. ತರಕಾರಿ, ಸೊಪ್ಪುಗಳಿಂದಲೂ ವಿಟಮಿನ್ ಸಿ ಯನ್ನು ಪಡೆಯಬಹುದು. ಕೆಂಪು ಕ್ಯಾಬೇಜ್, ಕ್ಯಾಪ್ಸಿಕಂ, ಆಲೂಗಡ್ಡೆ, ಕುಂಬಳಕಾಯಿ, ಟೊಮೆಟೊ, ಪಾಲಕ್, ಬ್ರೋಕಲಿ ಅಂತಹ ತರಕಾರಿಗಳನ್ನು ಸೇವನೆ ಮಾಡುವುದರಿಂದ ವಿಟಮಿನ್ ಸಿ ನಮ್ಮ ದೇಹಕ್ಕೆ ಹೇರಳವಾಗಿ ದೊರೆಯುತ್ತದೆ.

4.ಮುಖ್ಯವಾಗಿ ಲಿಂಬುವಿನ ಬಳಕೆಯಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಯನ್ನು ಪೂರೈಸಬಹುದಾಗಿದೆ. ಲಿಂಬೆ ಹಣ್ಣಿನ ಪಾನಕ ಮತ್ತು ಆಹಾರ ಪದಾರ್ಥಗಳಲ್ಲಿ ನಿಂಬೆಹಣ್ಣನ್ನು ಸೇರಿಸುವುದರ ಮೂಲಕ ವಿಟಮಿನ್ ಸಿ ಯನ್ನು ನಮ್ಮ ದೇಹಕ್ಕೆ ನೀಡಬಹುದಾಗಿದೆ.

ವಿಟಮಿನ್ ಸಿ ಆರೋಗ್ಯ ಪ್ರಯೋಜನಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚರ್ಮದ ಆರೋಗ್ಯವನ್ನು ಕಾಪಾಡಲು, ಗಾಯಗಳನ್ನು ಗುಣಪಡಿಸಲು ವಿಟಮಿನ್ ಸಿ ಅತ್ಯಗತ್ಯ. ಇದು ದೇಹದಲ್ಲಿ ಉತ್ಪಾದಿಯಾಗದ ಕಾರಣ ನಾವು ಸೇವಿಸುವ ಆಹಾರದ ಮೂಲಕವೇ ಇದನ್ನು ಪಡೆಯಬೇಕು.

1. ರೋಗನಿರೋಧಕ ಶಕ್ತಿ ವೃದ್ಧಿ

, ಇದು ದೇಹದ ಬಿಳಿ ರಕ್ತ ಕಣಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

2. ಉತ್ಕರ್ಷಣ ನಿರೋಧಕ

ದೇಹದಲ್ಲಿರುವ ಹಾನಿಕಾರಕ ಸ್ವತಂತ್ರ ರಾಡಿಕಲ್ ಗಳನ್ನು ತಟಸ್ಥ ಗೊಳಿಸಿ, ರುದ್ರಗ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

3. ಚರ್ಮದ ಹೊಳಪು

ಇದು ಕರ್ಮಕ್ಕೆ ಬಿಗಿತ ಮತ್ತು ಯೌವನವನ್ನು ನೀಡುವ ಕೊಲಾಜೆನ್ ಉತ್ಪಾದನೆಗೆ ಅತ್ಯಂತ ಮುಖ್ಯವಾಗಿದೆ. ಚರ್ಮದ ಒರಟುತನವನ್ನು ನಿವಾರಿಸಿ ಹೊಳೆಯುವಂತೆ ಮಾಡುತ್ತದೆ.

4. ಕಬ್ಬಿನಾಂಶ ಹೀರಿಕೊಳ್ಳುವಿಕೆ

ಸಸ್ಯಹಾರದಲ್ಲಿರುವ ಕಬ್ಬಿನಾಂಶವು ದೇಹಕ್ಕೆ ಹೀರಿಕೊಳ್ಳಲು ವಿಟಮಿನ್ ಸಿ ಸಹಾಯಮಾಡುತ್ತದೆ.

5. ರಕ್ತದೊತ್ತಡ ನಿಯಂತ್ರಣ

ಇದು ರಕ್ತನಾಳಗಳನ್ನು ಸಡಿಲಗೊಳಿಸಿ ಅಧಿಕ ರಕ್ತ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ.

ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಪ್ರಮುಖ ಕಾಯಿಲೆಗಳು

ವಿಟಮಿನ್ ಸಿ ಕೊರತೆಯಿಂದ ಬರುವ ಪ್ರಮುಖ ಕಾಯಿಲೆ ಸ್ಕರ್ವಿ. ಇದರ ಜೊತೆಗೆ ವಸಡುಗಳಲ್ಲಿ ರಕ್ತಸ್ರಾವ, ನಿಧಾನವಾಗಿ ವಾಸಿಯಾಗುವ ಗಾಯಗಳು, ರಕ್ತ ಹೀನತೆ ಮತ್ತು ದುರ್ಬಲಗೊಂಡ ರೋಗ ನಿರೋಧಕ ಶಕ್ತಿಯಿಂದಾಗಿ ಪದೇಪದೇ ಸೋಂಕುಗಳು ಉಂಟಾಗುತ್ತವೆ.

1.ಸ್ಕರ್ವಿ

ಇದು ವಿಟಮಿನ್ ಸಿ ತೀವ್ರ ಕೊರತೆಯಿಂದ ಉಂಟಾಗುವ ಕಾಯಿಲೆ. ಇದು ವಸಡುಗಳಲ್ಲಿ ರಕ್ತಸ್ರಾವ, ಚರ್ಮದ ಮೇಲೆ ಕೆಂಪು ಕಲೆಗಳು ಮತ್ತು ಕೀಲು ನೋವುಗಳಿಗೆ ಕಾರಣವಾಗುತ್ತದೆ.

2.ವಸಡುಗಳ ಸಮಸ್ಯೆ

ಹಲ್ಲುಗಳು ದುರ್ಬಲಗೊಳ್ಳುವುದು, ವಸಡುಗಳು ಊದಿಕೊಳ್ಳುವುದು ಮತ್ತು ರಕ್ತಸ್ರಾವ ಉಂಟಾಗುತ್ತದೆ.

3. ಗಾಯಗಳು ತಡವಾಗಿ ಮಾಯೋದು

ದೇಹದ ಮೇಲಿನ ಗಾಯಗಳು ಅಥವಾ ಕಡಿತಗಳು ಬೇಗನೆ ಗುಣವಾಗುವುದಿಲ್ಲ.

4. ಆಯತ ಮತ್ತು ಸ್ನಾಯು ನೋವು

ದೈಹಿಕ ಶಕ್ತಿ ಕುಂದುವುದು, ಸುಲಭವಾಗಿ ಆಯಾಸವಾಗುವುದು ಮತ್ತು ಸ್ನಾಯು- ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ವಿಟಮಿನ್ ಸಿ ಕೊರತೆಗೆ ಕಾರಣಗಳು ಮತ್ತು ತಡೆಗಟ್ಟುವಿಕೆ.

1. ಮಾನವನ ದೇಹವು ತನ್ನಷ್ಟಕ್ಕೆ ತಾನೇ ವಿಟಮಿನ್ ಸಿ ಅನ್ನು ಉತ್ಪಾದಿಸಿಕೊಳ್ಳುವುದಿಲ್ಲ. ಆದ್ದರಿಂದ ಬಾಹ್ಯ ಆಹಾರದ ಮೇಲೆ ಅವಲಂಬಿತರಾಗಬೇಕು.

2. ಸತತ 3 ತಿಂಗಳ ಕಾಲ ವಿಟಮಿನ್ ಸಿ ಇಲ್ಲದ ಆಹಾರ ಸೇವನೆಯಿಂದ ಕಾಯಿಲೆ ಕಾಣಿಸಿಕೊಳ್ಳುತ್ತದೆ.

3. ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಯುಕ್ತ ಆಹಾರ ಪದಾರ್ಥಗಳನ್ನು ಬಳಸದೆ ಇರುವುದು ಕಾಯಿಲೆಯ ಮುಖ್ಯ ಕಾರಣ.

ವಿಟಮಿನ್ ಸಿ ಕೊರತೆಯನ್ನು ಪತ್ತೆಹಚ್ಚಲು ಮಾಡುವ ಪರೀಕ್ಷೆಗಳು.

ದೇಹದಲ್ಲಿ ವಿಟಮಿನ್ ಸಿ ಅಥವಾ ಪತ್ತೆಹಚ್ಚಲು ವಿಟಮಿನ್ ಸಿ ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ಲ್ಯಾಬ್ ಗಳು ರಕ್ತದ ಮಾದರಿಯನ್ನು ಸಂಗ್ರಹಿಸಿ ಅದನ್ನು ಬೆಳಕಿನಿಂದ ರಕ್ಷಿಸಿ ಪರೀಕ್ಷಿಸಬೇಕಾಗುತ್ತದೆ.

ಪರೀಕ್ಷೆಯ ಹೆಸರು ವಿಟಮಿನ್ ಸಿ/ ಆಸ್ಕಾರ್ಬಿಕ್ ಆಮ್ಲ ಪರೀಕ್ಷೆ.

ರಕ್ತ ಪ್ಲಾಸ್ಮಾದಲ್ಲಿ ವಿಟಮಿನ್ ಸಿ ಸಾಂದ್ರತೆಯನ್ನು ಅಳೆಯಲು ಹೈ ಪರ್ಫಾರ್ಮೆನ್ಸ್ ಲಿಕ್ವಿಡ್ ಕ್ರೋಮಿ(HPLC) ಯೋಗ್ರಫಿ ವಿಧಾನವನ್ನು ಬಳಸಲಾಗುತ್ತದೆ.

ರಕ್ತದಲ್ಲಿ ವಿಟಮಿನ್ ಸಿ ಸಾಮಾನ್ಯ ಮಟ್ಟವು ಸಾಮಾನ್ಯವಾಗಿ 0.6 ರಿಂದ 2.0 mg/dl ಗಿಂತ ಕಡಿಮೆ ಇದ್ದರೆ ಅದು ತೀವ್ರ ಕೊರತೆಯನ್ನು ಸೂಚಿಸುತ್ತದೆ.

ಪರೀಕ್ಷೆಗೆ ಮೊದಲು 12 ರಿಂದ14 ಗಂಟೆಗಳ ಕಾಲ ಉಪವಾಸ ಇರಬೇಕಾಗುತ್ತದೆ. ಪರೀಕ್ಷೆಗೆ 24 ಗಂಟೆಗಳ ಮೊದಲು ಹಣ್ಣುಗಳು ಮತ್ತು ವಿಟಮಿನ್ ಸಪ್ಲಿಮೆಂಟ್ಸ್ ಗಳನ್ನು ತೆಗೆದುಕೊಳ್ಳಬಾರದು.

ವಿಟಮಿನ್ ಸಿ ಕೊರತೆಗೆ ಚಿಕಿತ್ಸೆಗಳು.

ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಸಮಸ್ಯೆಗಳನ್ನು ಸರಿಪಡಿಸಲು ಬಳಸುವ ಪ್ರಮುಖ ವಿಧಾನವಾಗಿದೆ. ಇದನ್ನು ಚರ್ಮದ ಸೀರಮ್ ಗಳು, ಪೂರಕಗಳು ಮತ್ತು ನೈಸರ್ಗಿಕ ಆಹಾರಗಳ ಮೂಲಕ ಗುಣಪಡಿಸಬಹುದು.

1. ತ್ವಚೆಯ ಆರೈಕೆಗೆ

ಬಳಸುವುದರಿಂದ ಚರ್ಮ ಹೊಳೆಯುತ್ತದೆ ಮತ್ತು ಸುಕ್ಕುಗಳು ಕಡಿಮೆಯಾಗುತ್ತದೆ.

ಇದು ಸೂರ್ಯನ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಡೆಯುತ್ತದೆ ಮತ್ತು ಕೊಲ್ಯಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

2. ದೇಹದ ಆರೋಗ್ಯಕ್ಕಾಗಿ

ವಿಟಮಿನ್ ಸಿಕ್ತುಗಳು ದೇಹದಲ್ಲಿನ ವಿಟಮಿನ್ ಸಿ ಕೊರತೆಯನ್ನು ನೀಗಿಸುತ್ತವೆ ಮತ್ತು ಸ್ಕರ್ವಿ ಕಾಯಿಲೆಯನ್ನು ತಡೆಯುತ್ತದೆ.

3. ರೋಗ ನಿರೋಧಕ ಶಕ್ತಿ

ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆರೋಗ್ಯಕರ ಜೀವನಕ್ಕಾಗಿ ವಿಟಮಿನ್ ಸಿ ಭರಿತ ಆಹಾರಗಳಾದ ನಿಂಬೆಹಣ್ಣು, ಕಿತ್ತಳೆ, ಪಪಾಯ, ದಾಸವಾಳ ಮತ್ತು ಹಸಿರು ತರಕಾರಿಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.

ವಿಟಮಿನ್ ಸಿ, ನೀರಿನಲ್ಲಿ ಕರಗುವ ಜೀವ ಸತ್ವವಾಗಿರುವುದರಿಂದ ದೇಹವು ಇದನ್ನು ಸ್ವತಂತ್ರವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಸೇವಿಸುವ ಆಹಾರ ಅಥವಾ ಪೂರಕಗಳ ಮೂಲಕ ಪ್ರತಿದಿನ ಬಾಹ್ಯವಾಗಿ ಸ್ವೀಕರಿಸಬೇಕು.

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.