ಟೆಸ್ಟೋಸ್ಟಿರಾನ್ ಎಂದರೇನು...? ಪ್ರಮುಖ ಕಾರ್ಯಗಳು, ಲಕ್ಷಣಗಳು ಮತ್ತು ಚಿಕಿತ್ಸೆಗಳು/what is testosterone, low and high testosterone, testosterone levels and treatment
ಟೆಸ್ಟೋಸ್ಟಿರಾನ್ ಪ್ರಮುಖ ಪುರುಷರ ಲೈಂಗಿಕ ಹಾರ್ಮೋನ್. ಇದು ಮುಖ್ಯವಾಗಿ ವೃಷಣಗಳಲ್ಲಿ ಉತ್ಪತ್ತಿಯಾಗುತ್ತದೆ. ಇದು ಪುರುಷರಲ್ಲಿ ಸ್ನಾಯುಗಳ ಬೆಳವಣಿಗೆ, ಮೂಳೆಗಳ ಗಟ್ಟಿತನ, ಕೂದಲು ಬೆಳೆಯುವುದು, ವೀರ್ಯ ಉತ್ಪಾದನೆ ಮತ್ತು ಲೈಂಗಿಕ ಆಸಕ್ತಿಯನ್ನು ನಿಯಂತ್ರಿಸಲು ಅಗತ್ಯವಾಗಿರುತ್ತದೆ.
6/23/20261 min read


ಟೆಸ್ಟೋಸ್ಟಿರಾನ್ ಪ್ರಮುಖ ಪುರುಷರ ಲೈಂಗಿಕ ಹಾರ್ಮೋನ್. ಇದು ಮುಖ್ಯವಾಗಿ ವೃಷಣಗಳಲ್ಲಿ ಉತ್ಪತ್ತಿಯಾಗುತ್ತದೆ. ಇದು ಪುರುಷರಲ್ಲಿ ಸ್ನಾಯುಗಳ ಬೆಳವಣಿಗೆ, ಮೂಳೆಗಳ ಗಟ್ಟಿತನ, ಕೂದಲು ಬೆಳೆಯುವುದು, ವೀರ್ಯ ಉತ್ಪಾದನೆ ಮತ್ತು ಲೈಂಗಿಕ ಆಸಕ್ತಿಯನ್ನು ನಿಯಂತ್ರಿಸಲು ಅಗತ್ಯವಾಗಿರುತ್ತದೆ. ಮಹಿಳೆಯರಲ್ಲೂ ಸ್ವಲ್ಪ ಪ್ರಮಾಣದಲ್ಲಿ ಅಂಡಾಶಯದಲ್ಲಿ ಈ ಹಾರ್ಮೋನು ಉತ್ಪತ್ತಿಯಾಗುತ್ತದೆ.
ಟೆಸ್ಟೋಸ್ಟಿರಾನ್ ಒಂದು ನೈಸರ್ಗಿಕವಾದ ಸ್ಟೀರಾಯ್ಡ್ ಆಗಿದ್ದು ಇದು ಅನಬೋಲಿಕ್- ಆಂಡ್ರೋಜಿನಿಕ್ ಥೀಯೈಡ್ ಆಗಿದೆ. ಅನಬೋಲಿಕ್ ಎಂದರೆ ಸ್ನಾಯುಗಳ ನಿರ್ಮಾಣ ಮತ್ತು ಆಂಡ್ರೋಜನಿಕ್ ಎಂದರೆ ಪುರುಷರ ಲೈಂಗಿಕ ಗುಣಲಕ್ಷಣಗಳ ಹೆಚ್ಚಳ. ಕೆಲವು ಕ್ರೀಡಾಪಟುಗಳು ಮತ್ತು ದೇಹದಾರ್ಯಕಾರರು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಅಥವಾ ದೈಹಿಕ ನೋಟವನ್ನು ಬದಲಾಯಿಸಲು ಹೆಚ್ಚಿನ ಪ್ರಮಾಣದಲ್ಲಿ ನಬೋಲಿಕ್ ಸ್ಟಿರಾಯ್ಡ್ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ಔಷಧಿಗಳ ಅಹಿತಕರ ಲಕ್ಷಣಗಳನ್ನು ಉಂಟು ಮಾಡಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವ ವಾಯು ಸೇರಿದಂತೆ ದೀರ್ಘಕಾಲಿನ ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ಸ್ರವಿಕೆ ಮತ್ತು ನಿಯಂತ್ರಣ
1. ಉತ್ಪಾದನೆ
ಪುರುಷರಲ್ಲಿ ಹೆಚ್ಚಾಗಿ ಪುರುಷಣಗಳಲ್ಲಿರುವ ಕೋಶಗಳಿಂದ ಸ್ರವಿಸಲ್ಪಡುತ್ತದೆ. ಅಡ್ರಿನಲ್ ಗ್ರಂಥಿಗಳು ಕೂಡ ಸ್ವಲ್ಪ ಪ್ರಮಾಣದಲ್ಲಿ ಇದನ್ನು ಉತ್ಪಾದಿಸುತ್ತವೆ.
.2. ನಿಯಂತ್ರಣ
ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ಮತ್ತು ಈ ಹಾರ್ಮೋನ್ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತವೆ. ಇವು ರಕ್ತದಲ್ಲಿನ ಮಟ್ಟವನ್ನು ಗಮನಿಸಿ, ಅಗತ್ಯಕ್ಕೆ ತಕ್ಕಂತೆ ಲುಟನೈಸಿಂಗ್ ಹಾರ್ಮೋನ್(LH) ಮೂಲಕ ಪುರುಷಣಗಳಿಗೆ ಉತ್ಪಾದನೆ ಮಾಡಲು ಸೂಚನೆ ನೀಡುತ್ತವೆ.
ಹೈಪೋಥಾಲಮಸ್
ಟೆಸ್ಟೋಸ್ಟಿರ ಹಾರ್ಮೋನಿನ ಪ್ರಮುಖ ಕಾರ್ಯಗಳು
1. ಲೈಂಗಿಕ ಲಕ್ಷಣಗಳು
ಪ್ರೌಢಾವಸ್ಥೆಯಲ್ಲಿ ಹುಡುಗರಲ್ಲಿ ದೈಹಿಕ ಬದಲಾವಣೆ( ಮೀಸೆ, ಗಡ್ಡ ಬೆಳೆಯುವುದು, ಧ್ವನಿ ದಪ್ಪ ಆಗುವುದು, ಎತ್ತರದಲ್ಲಿ ಹೆಚ್ಚಳ, ದೇಹ ಮತ್ತು ಪಬಿಕ್ ಕೂದಲಿನ ಬೆಳವಣಿಗೆ, ಅವರ ಶಿಶ್ನ ,ಪುರುಷಣಗಳು ಮತ್ತು ಪ್ರೋಸ್ತೆಟ್ ಗ್ರಂಥಿಯ ಹಿಗ್ಗುವಿಕೆ).
ಉಂಟಾಗಲು ಕಾರಣವಾಗಿದೆ.
2. ಸ್ನಾಯು ಮತ್ತು ಮೂಳೆ
ದೇಹದಲ್ಲಿ ಸ್ನಾಯುಗಳ ಬಲವನ್ನ ಹೆಚ್ಚಿಸಲು ಮತ್ತು ಮೂಳೆಗಳ ಸಾಂದ್ರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.
3. ವೀರ್ಯ ಉತ್ಪಾದನೆ
ಪುರುಷಣೆಗಳಲ್ಲಿ ವೀರ್ಯಾಣುಗಳ ಆರೋಗ್ಯಕರ ಉತ್ಪಾದನೆಗೆ ಈ ಹಾರ್ಮೋನು ಅತ್ಯಗತ್ಯ.
4.ಗರ್ಭಾಶಯದ 7ನೇ ವಾರದಲ್ಲಿ Y ಕ್ರೋಮೋಸೋಮ್ನಲ್ಲಿರುವ ಲಿಂಗ ಸಂಬಂಧಿತ ಜೀನ್ ಗಂಡು ಶಿಶುಗಳಲ್ಲಿ ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ. ವೃಷಣಗಳು ಉತ್ಪಾದಿಸುತ್ತದೆ. ಬ್ರೂಣದ ಬೆಳವಣಿಗೆ ಸಮಯದಲ್ಲಿ ಪುರುಷರ ಆಂತರಿಕ ಮತ್ತು ಬಾಹ್ಯ ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.
5. ವಯಸ್ಕ ಮಹಿಳೆಯರಿಗೆ, ಟೆಸ್ಟೋಸ್ಟಿರಾನ್ ಕಾಮಸಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ಪ್ರಾಥಮಿಕ ಸ್ತ್ರೀ ಲೈಂಗಿಕ ಹಾರ್ಮೋನ್, ಎಸ್ ಆಗಿ ಪರಿವರ್ತನೆಗೊಳ್ಳುತ್ತದೆ.
ಟೆಸ್ಟೋಸ್ಟಿರಾನ್ ಮಟ್ಟದ ನಿಯಂತ್ರಣ
ನಮ್ಮ ದೇಹವು ನಮ್ಮ ರಕ್ತದಲ್ಲಿನ ಟೆಸ್ಟೋಸ್ಟಿರಾನ್ ಮಟ್ಟವನ್ನು ನಿಯಂತ್ರಿಸುತ್ತದೆ. ಟೆಸ್ಟೋಸ್ಟಿರಾನ್ ಸಾಮಾನ್ಯವಾಗಿ ಬೆಳಿಗ್ಗೆ ಅತ್ಯಧಿಕವಾಗಿರುತ್ತವೆ ಮತ್ತು ಹಗಲಿನಲ್ಲಿ ಕಡಿಮೆಯಾಗುತ್ತವೆ. ಹೈಪೋಥಾಲಮಸ್ ಮತ್ತು ಪಿಟ್ಯುಟರಿ ಗ್ರಂಥಿ ಗೋನಾಡ್ ಗಳು ಉತ್ಪಾದಿಸುವ ಮತ್ತು ಬಿಡುಗಡೆ ಮಾಡುವ ಟೆಸ್ಟೋಸ್ಟಿರಾನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಹೈಪೋಥಾಲಮಸ್, ಗೊನೋಡೋ ಟ್ರೋಫಿನ್ ಬಿಡುಗಡೆ ಮಾಡುವ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಪಿಟ್ಯುಟರಿ ಗ್ರಂಥಿಯು LHಹಾರ್ಮೋನನ್ನು ಬಿಡುಗಡೆ ಮಾಡಲು ಪ್ರಚೋದಿಸುತ್ತದೆ. ನಂತರ LH ನಿಮ್ಮ ಗೋನಾಡ್ ಗಳಿಗೆ ಪ್ರಯಾಣಿಸುತ್ತದೆ ಮತ್ತು ಟೆಸ್ಟೋಸ್ಟಿರಾನ್ ಉತ್ಪಾದನೆ ಮತ್ತು ಬಿಡುಗಡೆಯನ್ನು ಉತ್ತೇಜಿಸುತ್ತದೆ.
ರಕ್ತದಲ್ಲಿ ನ ಟೆಸ್ಟೋಸ್ಟಿರಾನ್ ಹೆಚ್ಚಾದಂತೆ ಅದು ಗೊನಡೋ ಟ್ರೋಫಿನ್ ಬಿಡುಗಡೆ ಮಾಡುವ ಹಾರ್ಮೋನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ, ಇದು ಸಾಮಾನ್ಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.
ಈ ಅಂಗಗಳಲ್ಲಿ ಯಾವುದಾದರೂ ಹೈಪೋಥಾಲಮಸ್,ಪಿಟ್ಯುಟರಿ ಗ್ರಂಥಿ ಅಥವಾ ಗೋನಾಡ್ ಸಾಮಾನ್ಯವಾಗಿ ಕೆಲಸ ಮಾಡದಿದ್ದರೆ ಅದು ಅಸಹಜ ಟೆಸ್ಟೋಸ್ಟಿರಾನ್ ಮಟ್ಟಗಳಿಗೆ ಕಾರಣವಾಗುವುದು.
ಟೆಸ್ಟೋಸ್ಟಿರಾನ್ ಮೊತ್ತವನ್ನು ಅಳೆಯುವ ಪರೀಕ್ಷೆಗಳು.
1. ಒಟ್ಟು ಟೆಸ್ಟೋಸ್ಟಿರಾನ್ ರಕ್ತ ಪರೀಕ್ಷೆ ಇದನ್ನು ಸಾಮಾನ್ಯವಾಗಿ ಬೆಳಗ್ಗೆ ನಡೆಸಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ಟೆಸ್ಟೋಸ್ಟಿರಾನ್ ಮಟ್ಟಗಳು ಅಧಿಕವಾಗಿರುತ್ತವೆ.
2. FSH ಪರೀಕ್ಷೆ
3 LH ಹಾರ್ಮೋನ್ ಪರೀಕ್ಷೆ
ವಯಸ್ಸಿನ ಪ್ರಕಾರ ಸಾಮಾನ್ಯ ಟೆಸ್ಟೋಸ್ಟಿರಾನ್ ಮಟ್ಟಗಳು
ಟೆಸ್ಟೋಸ್ಟಿರಾನ್ ಸಾಮಾನ್ಯ ಮಟ್ಟಗಳು ಪ್ರತಿ ಡೆಸಿಲಿಟರ್ ಗೆ ನ್ಯಾನೋ ಗ್ರಾಮಗಳಲ್ಲಿ (ng/dl) ಅಳೆಯಲಾಗುತ್ತದೆ.
ಟೆಸ್ಟೋಸ್ಟಿರಾನ್ ಸಾಮಾನ್ಯ ಶ್ರೇಣಿಗಳು ಮಾಡಿದ ರಕ್ತ ಪರೀಕ್ಷೆಯ ಪ್ರಕಾರ ಅದನ್ನು ಮಾಡಲಾಗುವ ಪ್ರಯೋಗಾಲಯವನ್ನು ಅವಲಂಬಿಸಿ ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯ.
1 ವರ್ಷದ ಒಳಗಿನವರಿಗೆ 12ng/dl ಗಿಂತ ಕಡಿಮೆ.
1 ರಿಂದ 5 ವರ್ಷದವರಿಗೆ 12ng/dl ಗಿಂತ ಕಡಿಮೆ.
6 ರಿಂದ 10 ವರ್ಷದವರಿಗೆ25ng/dl ಗಿಂತ ಕಡಿಮೆ.
11 ರಿಂದ 15 ವರ್ಷದವರಿಗೆ 830 ng/dl ಗಿಂತ ಕಡಿಮೆ.
16 ರಿಂದ 17 ವರ್ಷದವರಿಗೆ 102 ರಿಂದ 1010 ng/dl ಗಿಂತ ಕಡಿಮೆ.
ದೇಹದಲ್ಲಿ ಅಸಹಜ ಟೆಸ್ಟೋಸ್ಟಿರಾನ ಮಟ್ಟಗಳು ( ಹೆಚ್ಚಳ ಅಥವಾ ಇಳಿಕೆ) ಪುರುಷರು ಮತ್ತು ಮಹಿಳೆಯರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇವುಗಳ ಮುಖ್ಯ ಕಾಯಿಲೆಗಳು ಈ ಕೆಳಗಿನಂತಿವೆ.
1. ಹೈ ಪೋಗೊನಾಡಿಸಂ( ಪುರುಷರಲ್ಲಿ ಟೆಸ್ಟೋಸ್ಟಿರಾನ್ ಕೊರತೆ)
ದೇಹದಲ್ಲಿ ಸಾಕಷ್ಟು ಪ್ರಮಾಣದ ಟೆಸ್ಟೋಸ್ಟಿರಾನ್ ಯಾಕೋಉತ್ಪತ್ತಿಯಾಗದ ಕಾರಣ ಈ ಸ್ಥಿತಿಯು ಉಂಟಾಗುತ್ತದೆ ಎಂದು ಕರೆಯಲಾಗುತ್ತದೆ.
ಕಾರಣಗಳು ಮತ್ತು ಲಕ್ಷಣಗಳು
ವೃಷಣಗಳ ಸಮಸ್ಯೆ, ಪಿಟ್ಯುಟರಿ ಗ್ರಂಥಿಯ ದೋಷ ಅಥವಾ ವಯಸ್ಸಾಗುವಿಕೆ.
ದೈಹಿಕ ಆಯಾಸ, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಸ್ನಾಯುಗಳ ದೌರ್ಬಲ್ಯ, ಮೂಳೆಗಳು ದುರ್ಬಲಗೊಳ್ಳುವುದು ಮತ್ತು ಬೊಜ್ಜು ಹೆಚ್ಚಾಗುವುದು.
2.ಪಿ ಸಿ ಓ ಡಿ / ಪಿಸಿಓಎಸ್ (PCOD / PCOS ಮಹಿಳೆಯಲ್ಲಿ ಟೆಸ್ಟೋಸ್ಟಿರಾನ್ ಹೆಚ್ಚಳ).
ಇದು ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಸಮಸ್ಯೆ.ಈ ಸಮಯದಲ್ಲಿ ಟೆಸ್ಟೋಸ್ಟಿರಾನ್ ಮಟ್ಟವು ಹೆಚ್ಚಾಗುತ್ತದೆ.
ಕಾರಣಗಳು ಮತ್ತು ಲಕ್ಷಣಗಳು
ಅನುವಂಶಿಕತೆ, ಕಳಪೆ ಜೀವನ ಶೈಲಿ ಮತ್ತು ಒತ್ತಡ.
ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುವುದು, ಮೊಡವೆಗಳು, ಮುಟ್ಟಿನ ಸಮಸ್ಯೆಗಳು ಮತ್ತು ತೂಕ ಹೆಚ್ಚಾಗುವುದು.
ಟೆಸ್ಟೋಸ್ಟಿರಾನ್ ಹಾರ್ಮೋನ್ ಚಿಕಿತ್ಸೆಯು ಪುರುಷರಲ್ಲಿ ನೈಸರ್ಗಿಕವಾಗಿ ಕಡಿಮೆಯಾಗಿರುವ ಟೆಸ್ಟೋಸ್ಟಿರಾನ್ ಮಟ್ಟವನ್ನು ಹೆಚ್ಚಿಸಲು ಬಳಸುವ ವೈದ್ಯಕೀಯ ಚಿಕಿತ್ಸೆಯಾಗಿದೆ ಇದು ಲೈಂಗಿಕ ಆಸಕ್ತಿ, ಸ್ನಾಯುವಿನ ಬಲ ಮೂಳೆಗಳ ಸಾಂದ್ರತೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಚಿಕಿತ್ಸೆಯ ವಿಧಗಳು
1. ಜಲ್ ಅಥವಾ ಕ್ರೀಮ್ ಗಳು
ಪ್ರತಿದಿನ ಚರ್ಮಕ್ಕೆ ಹಚ್ಚಿಕೊಳ್ಳುವ ಮೂಲಕ ಬಳಸಬಹುದು.
2. ಇಂಜೆಕ್ಷನ್
ವೈದ್ಯರ ಮೇಲ್ವಿಚಾರಣೆಯಲ್ಲಿ ನಿಯಮಿತವಾಗಿ ನೀಡಲಾಗುವ ಚುಚ್ಚುಮದ್ದು.
3. ಪ್ಯಾಚ್ ಗಳು ಅಥವಾ ಮಾತ್ರೆಗಳು
ದೇಹಕ್ಕೆ ಹಾರ್ಮೋನ್ ಒದಗಿಸುವ ಚರ್ಮದ ಪಟ್ಟಿಗಳು ಅಥವಾ ಮಾತ್ರೆಗಳ ಮೂಲಕ ಟೆಸ್ಟೋಸ್ಟಿರಾನ್ ಕೊರತೆಯನ್ನು ನೀಗಿಸಬಹುದು.
ಅಡ್ಡ ಪರಿಣಾಮಗಳು
ಮೊಡವೆಗಳು ಅಥವಾ ಎಣ್ಣೆಯುಕ್ತ ಚರ್ಮ, ಎದೆ ಊತ ಅಥವಾ ನಿದ್ರಾಹೀನತೆ,, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.
ಆದ್ದರಿಂದ ವೈದ್ಯಕೀಯ ಅನುಮತಿ ಇಲ್ಲದೆ ಈ ಚಿಕಿತ್ಸೆಗಳನ್ನು ಪಡೆಯುವುದು ಅಪಾಯಕಾರಿ. ಯಾವಾಗಲೂ ಅರ್ಹ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಅವರ ಸಲಹೆ ಮೇರೆಗೆ ಮಾತ್ರ ಚಿಕಿತ್ಸೆಯನ್ನು ಪಡೆಯಬೇಕು .
