ಅರಿಶಿನದ ಪ್ರಮುಖ ಆರೋಗ್ಯ ಪ್ರಯೋಜನಗಳು., turmeric uses and health benefits
ಅರಿಶಿನ ವನ್ನು ಕನ್ನಡದಲ್ಲಿ ಅರಿಸಿನ ಎಂದು ಕರೆಯಲಾಗುತ್ತದೆ ಇದು ಭಾರತೀಯ ಅಡುಗೆಮನೆಯ ಪ್ರಮುಖ ಮಸಾಲೆಯಾಗಿದ್ದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ.
6/7/20261 min read


ಅರಿಶಿನ ವನ್ನು ಕನ್ನಡದಲ್ಲಿ ಅರಿಸಿನ ಎಂದು ಕರೆಯಲಾಗುತ್ತದೆ ಇದು ಭಾರತೀಯ ಅಡುಗೆಮನೆಯ ಪ್ರಮುಖ ಮಸಾಲೆಯಾಗಿದ್ದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ.
ಅಡುಗೆಯಲ್ಲಿ ಅಡುಗೆ ಬಣ್ಣ ಮತ್ತು ಪರಿಮಳ ರುಚಿ ನೀಡಲು ಇದನ್ನು ಪ್ರತಿದಿನ ಬಳಸಲಾಗುತ್ತದೆ. ಇದರಲ್ಲಿರುವ ಕರ್ ಕ್ಯೂಮಿನ್ ಅಂಶವು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ನೆಗಡಿ ಕೆಮ್ಮು ಗಂಟಲು ನೋವು ಮತ್ತು ಗಾಯಗಳನ್ನು ಗುಣಪಡಿಸಲು ಇದು ಸಾಂಪ್ರದಾಯಕ ಮನೆಮದ್ದಾಗಿದೆ. ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಸೋಂಕುಗಳನ್ನು ತಡೆಯಲು ಇದನ್ನು ಮುಖದಲ್ಲಿ ಬಳಸಲಾಗುತ್ತದೆ,
ಅರಿಶಿನವನ್ನು ಹಲವಾರು ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಚೆನ್ನಾಗಿ ನೀರು ಬಸಿದು ಹೋಗುವಂತಹ ಸಾವಯವಯುಕ್ತ ಮರಳು ಮಿಶ್ರಿತ ಗೋಡು ಹಾಗೂ ಕಪ್ಪು ಗೋಡು, ಮಣ್ಣುಗಳ ಬೆಳೆಗೆ ಉತ್ತಮ.
ಈ ಬೆಳೆಗೆ ಗಾಳಿಯಲ್ಲಿ ಹೆಚ್ಚು ತೇವಾಂಶವಿರುವ ಉಷ್ಣಭರಿತ ವಾತಾವರಣ ಬೇಕು. ಉಷ್ಣತೆ ಇರುವಲ್ಲಿ ಉತ್ತಮವಾಗಿ ಕೃಷಿ ಮಾಡಬಹುದು ಹೆಚ್ಚು ಮಳೆ ಬೀಡುವ ಮಲೆನಾಡು ಪ್ರದೇಶಗಳಲ್ಲಿ ಇವನ್ನು ಮಳೆ ಆಶ್ರಯದಲ್ಲಿ ಬೆಳೆಯಲಾಗುತ್ತದೆ ಮತ್ತು ನೀರಾವರಿ ಪ್ರದೇಶಗಳಲ್ಲಿಯೂ ಕೂಡ ಬೆಳೆಯಬಹುದು .
ಅರಿಶಿನವು ಕರ್ ಕ್ಯೂಮಿನ್ ಎಂಬ ಔಷಧೀಯ ಅಂಶವನ್ನು ಹೊಂದಿದೆ ಇದು ಅತ್ಯುತ್ತಮ ನೈಸರ್ಗಿಕ ಉರಿಯುತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ವಿಶಿಷ್ಟ ಔಷಧೀಯ ಸಂಯುಕ್ತಗಳೊಂದಿಗೆ, ಇದು ದೇಹವನ್ನು ಆರೋಗ್ಯಕರವಾಗಿ ಇರಿಸುತ್ತದೆ ಮತ್ತು ಮಾರಕ ರೋಗಗಳ ವಿರುದ್ಧ ಹೋರಾಡುತ್ತದೆ. ಇದು ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡಬಲ್ಲದು. ಕೊರೊನ ವೈರಸ್ ಸಾಂಕ್ರಾಮಿಕದ ಮಧ್ಯ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಶೀತ ಮತ್ತು ಕೆಮ್ಮುನಮ್ಮ ಜೀವನವನ್ನುಹಾನಿ ಮಾಡಲು ಯಾವಾಗಲೂ ಇರುವಂತಹ ರೋಗಗಳಾಗಿವೆ. ಇವುಗಳು ಅಪಾಯಕಾರಿ ರೋಗಗಳಲ್ಲದಿದ್ದರೂ ಚಿಕಿತ್ಸೆ ನೀಡದಿದ್ದರೆ, ಇದು ಇದರದೇ ಆದ ರೀತಿಯಲ್ಲಿ ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಗಂಭೀರ ಅಸ್ವಸ್ಥತೆಯನ್ನು ಉಂಟು ಮಾಡಬಹುದು ಅರಿಶಿನ ನೀರನ್ನು ಕುಡಿಯುವುದು ಅಥವಾ ಹಾಲಿಗೆ ಅರಿಶಿನ ಸೇರಿಸಿ ನಿಯಮಿತವಾಗಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ.
ಅರಿಶಿನದ ಪ್ರಮುಖ ಆರೋಗ್ಯ ಪ್ರಯೋಜನಗಳು.
1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅರಿಶಿನದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹವನ್ನು ಸೋಂಕುಗಳು, ಶೀತ ಮತ್ತು ಕೆಮ್ಮುಗಳಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಅರಿಶಿನವನ್ನು ಶತಮಾನಗಳಿಂದ ಸಾಂಪ್ರದಾಯಿಕ ಔಷಧಿದಲ್ಲಿ ಬಳಸಲಾಗುತ್ತದೆ. ಅರಿಶಿನವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ದೇಹವನ್ನು ಸ್ವತಂತ್ರ ರಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಅಲ್ಲದೆ ನಿಯಮಿತವಾಗಿ ಅರಿಶಿನ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ದೇಹವನ್ನುಸದೃಢವಾಗಿ ಇಡಲು ಸಹಾಯ ಮಾಡುತ್ತದೆ.
2. ಜೀರ್ಣಕ್ರಿಯೆಗೆ ಉತ್ತಮ.
ಪಿತ್ತ ರಸದ ಉತ್ಪಾದನೆಯನ್ನು ಉತ್ತೇಜಿಸಿ, ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಅರಿಶಿನವನ್ನು ಸಾಂಪ್ರದಾಯಿಕ ಔಷಧದಲ್ಲಿ ಜೀರ್ಣಕ್ರಿಯೆಗೆ ಸಹಾಯಕವಾಗಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅರಿಶಿಣದ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಜೀರ್ಣಕ್ರಿಯ ಸುಧಾರಿಸಲು, ಹೊಟ್ಟೆ ಉಬ್ಬರ ಮತ್ತು ಅನಿಲವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹರಿಸಿನವು ಉರಿಯುತದ ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಡು ಬಂದಿದೆ ಇದು ಕರುಳಿನ ಉರಿಯುತವನ್ನು ಶಮನಗೊಳಿಸಲು ಮತ್ತು ಒಟ್ಟಾರೆ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3. ಹೃದಯದ ಆರೋಗ್ಯ
ಕಾಯಿಲೆಯು ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅರಿಶಿನವೂ ಉರಿಯುತ, ಅಧಿಕ ಒತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟಗಳನ್ನು ಸೇರಿದಂತೆ ಹೃದಯದ ಕಾಯಿಲೆಗೆ ಸಂಬಂಧಿಸಿದ ಹಲವಾರು ಅಪಾಯಕಾರಿ ಅಂಶಗಳ ಮೇಲೆ ಪ್ರಕಾರವಾಗಿ ಪರಿಣಾಮ ಬೀರುತ್ತದೆ ನಿಯಮಿತವಾಗಿ ಅರಿಶಿನ ನೀರನ್ನು ಕೊಡುವುದರಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
4. ತ್ವಚೆಯ ಕಾಂತಿ.
ಇದರ ಬ್ಯಾಕ್ಟೀರಿಯ ವಿರೋಧಿ ಗುಣಗಳು ಮೊಡವೆಗಳನ್ನು ನಿವಾರಿಸಿ, ತ್ವಚೆಗೆ ಹೊಳಪು ನೀಡುತ್ತದೆ. ಅರಿಶಿನದ ಪ್ರಮುಖ ತ್ವಚೆಯ ಪ್ರಯೋಜನಗಳು
1.ಕಾಂತಿಯುತ ತ್ವಚೆ
ಅರಿಶಿನವನ್ನು ಹಚ್ಚುವುದರಿಂದ ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ ಮತ್ತು ಬಣ್ಣವು ಸಮನಾಗಿರುತ್ತದೆ.
2. ಮೊಡವೆ ನಿಯಂತ್ರಣ
ಇದರಲ್ಲಿರುವ ಬ್ಯಾಕ್ಟೀರಿಯ ವಿರೋಧಿ ಗುಣಗಳು ಮೊಡವೆಗಳನ್ನು ಉಂಟುಮಾಡುವ ಕ್ರಿಮಿಗಳ ವಿರುದ್ಧ ಹೋರಾಡುತ್ತದೆ.
3. ಗಾಯ ಮತ್ತು ಕಲೆಗಳ ನಿವಾರಣೆ
ಗಾಯಗಳನ್ನು ಬೇಗ ಗುಣಪಡಿಸಲು ಮತ್ತು ಕಪ್ಪು ಕಲೆಗಳು ಹಾಗೂ ಕಣ್ಣಿನ ಕೆಳಗಿನ ಕಪ್ಪು ವಲಯಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
4. ಉರಿಯುತ ಶಮನ
ತುರಿಕೆ, ಕೆಂಪು ಬಣ್ಣದ ಗುಳ್ಳೆಗಳು ಮತ್ತು Eczema ಅಥವಾ ಸೋರಿಯಾಸಿಸ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿ.
5. ವಯಸ್ಸಾಗುವಿಕೆ ತಡೆಗಟ್ಟುತ್ತದೆ
ಇದು ಚರ್ಮದಲ್ಲಿ ಸುಕ್ಕುಗಳು ಬರುವುದನ್ನು ತಡೆದು ಯೌವನಯುತವಾಗಿ ಕಾಣಲು ಸಹಾಯಮಾಡುತ್ತದೆ.
ಅರಿಶಿನವನ್ನು ಮೊಸರು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಫೇಸ್ ಪ್ಯಾಕ್ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ತ್ವಚೆಯ ಕಾಂತಿ ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಅರಿಶಿನದಲ ಬ್ಯಾಕ್ಟೀರಿಯ ವಿರೋಧಿ ಚಟುವಟಿಕೆ ಇರುವುದರಿಂದ, ಅರಿಶಿನವನ್ನು ಸೇವಿಸಿದಾಗ ಅದು ಬಾಯಿಯಲ್ಲಿರುವ ಬ್ಯಾಕ್ಟೀರಿಯವನ್ನು ಕೊಲ್ಲಲು ಪ್ರಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಾಯಿಯಾ ಆರೋಗ್ಯಕ್ಕಾಗಿ ಬಹಳ ಸಹಾಯಕವಾಗಿದೆ.
ಅನೇಕ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರೆ ಮತ್ತು ಈ ಕಾರಣದಿಂದಾಗಿ ಅವರು ಹೆಚ್ಚಾಗಿ ಅರಿಶಿನವನ್ನು ತಿನ್ನಲು ಅಥವಾ ಮೊಣಕಾಲುಗಳಿಗೆ ಹಚ್ಚಲು ಸಲಹೆ ನೀಡಬಹುದು.
ಅರಿಶಿನವು ನೋವು ನಿವಾರಕ ಗುಣವನ್ನು ಹೊಂದಿದೆ ಎಂದು ಹೇಳಲಾಗುತ್ತದೆ ಮತ್ತು ದೇಹದಲ್ಲಿ ನೋವನ್ನು ನಿವಾರಿಸಲು ಸಕ್ರಿಯವಾಗಿ ಕೆಲಸ ಮಾಡುತ್ತದೆ.
ಅರಿಶಿನವು ರಕ್ತ ಹೀನತೆ,ಸೆಳೆತ, ಸಂಧಿವಾತ, ಕ್ಯಾಂಡಿಡ, ತೂಕ ನಷ್ಟ, ಆಯಾಸ, ಶೀತ, ಕೆಮ್ಮು ,ಶ್ವಾಸಕೋಶದ ಸೋಂಕುಗಳು,ಗಾಯ ಗುಣವಾಗುವುದು, ,ಸ್ನಾಯುಗಳನ್ನು ಬಲಪಡಿಸುವುದು, ಮುಟ್ಟಿನ ಸಮಸ್ಯೆ, ತುರಿಕೆ ಚರ್ಮ ,ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುವುದು, ಕ್ಯಾನ್ಸರ್ ನಿದ್ರಾಹೀನತೆ, ಪಾರ್ಕಿನ್ಸನ್ಸ್ ಖಿನ್ನತೆ ಯಂತಹ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. ಕರುಳಿನ ಹುಳುಗಳು, ವ್ಯವಸ್ಥಿತ ಕ್ಷಯ ರೋಗಗಳ ಶ್ರಮನಕ್ಕೆ ಅರಿಶಿನ ಉಪಾಯಕಾರಿಯಾಗಿದೆ.
ಅರಿಶಿನವನ್ನು ಸೇವಿಸುವ ವಿಧಾನಗಳು.
1. ಕೊಬ್ಬಿನ ಯಕೃತ್ತಿಗೆ ನಿಂಬೆಯೊಂದಿಗೆ ಅರಿಶಿನವನ್ನು ಸೇವಿಸಬಹುದು.
2. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅರಿಶಿನವನ್ನು ತುಪ್ಪ ಮತ್ತು ಜೇನುತುಪ್ಪದೊಂದಿಗೆ ಸೇವಿಸಿ.
3. ತೂಕ ನಷ್ಟ ಮತ್ತು ಚರ್ಮರೋಗಗಳಿಗೆ ನೀರಿನೊಂದಿಗೆ ಅರಿಶಿನವನ್ನು ಸೇವಿಸಿ.
4. ಕೆಮ್ಮು ಮತ್ತು ನೆಗಡಿ, ಸಂಧಿವಾತ, ಗಾಯ ಗುಣವಾಗುವುದು ಮತ್ತು ಕ್ಯಾಲ್ಸಿಯಂ ಕೊರತೆಗೆ ಹಾಲಿನೊಂದಿಗೆ ಅರಿಶಿನವನ್ನು ಸೇವಿಸುವುದು ಉತ್ತಮ.
5. ಮಧುಮೇಹಕ್ಕೆ ಆಮ್ಲದೊಂದಿಗೆ ಅರಿಶಿನವನ್ನು ಸೇವಿಸುವುದರಿಂದ ಅರಿಶಿನವು ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡು ಬಂದಿದೆ. ಹರಿಸಿನ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಇದು ಮಧುಮೇಹ ಇರುವವರಿಗೆ ಪ್ರಯೋಜನಕಾರಿಯಾಗಿದೆ ಅರಿಶಿನ ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡು ಬಂದಿದೆ ಆದ್ದರಿಂದ ಇದು ರಕ್ತದ ಸಕ್ಕರೆ ನಿಯಂತ್ರಣವನ್ನು ಸಾಧಿಸಲು ಸಹಾಯ ಮಾಡುತ್ತದೆ.
6. ಅರಿಶಿನ ತೆಂಗಿನಕಾಯಿ ಅಥವಾ ಬೇವಿನ ಎಣ್ಣೆಯೊಂದಿಗೆ ಬೆರೆಸಿ ಪೀಡಿತ ಪ್ರದೇಶಕ್ಕೆ ಹಚ್ಚಿದರೆ ಎಸ್ ಜಿ, ಸೋರಿಯಾಸಿಸ್ ಮತ್ತು ಶಿಲೀಂದ್ರಗಳ ಸೋಂಕಿನಂತಹ ಚರ್ಮರೋಗಗಳಿಗೆ ಚಿಕಿತ್ಸೆ ನೀಡಬಹುದು. ಮೊಡವೆಯಿಂದ ಹಿಡಿದು ಸುಕ್ಕುಗಳವರೆಗೆ ಎಲ್ಲಾ ಚರ್ಮದ ಕಾಯಿಲೆಗಳಲ್ಲಿ ಇದು ಉಪಯುಕ್ತವಾಗಿದೆ. ಮುಖದಲ್ಲಿರುವ ಅನಗತ್ಯ ಕೂದಲನ್ನು ನಿವಾರಿಸಲು ಅರಿಶಿನವನ್ನು ಬಳಸಬಹುದು.
7.ಅರಿಶಿನ ಹಾಲು ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಚಿಟಕಿ ಅರಿಶಿಣ ಬೆರೆಸಿ ಕುಡಿಯುವುದು ಅತ್ಯಂತ ಆರೋಗ್ಯಕರ.
8. ಅರಿಶಿನ ಚಹ ಅಥವಾ ಬೆಚ್ಚಗಿನ ನೀರು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿಉಗುರು ಬೆಚ್ಚಗಿನ ನೀರಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯವು ಸುಧಾರಿಸುತ್ತದೆ .
9.ಅಡುಗೆಯಲ್ಲಿ ಪ್ರತಿನಿತ್ಯದ ಆಹಾರದಲ್ಲಿ ಅರಿಶಿನವನ್ನು ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.
ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಸಣ್ಣ ಚಮಚ ಅರಿಶಿನವನ್ನು( ಅರ್ಧ ಗ್ರಾಂ) ಸ್ವಲ್ಪ ಕರಿಮೆಣಸಿನೊಂದಿಗೆ ಸೇವಿಸಿದರೆ ದೇಹಕ್ಕೆ ಅರಿಶಿನದ ಅಂಶವು ಸುಲಭವಾಗಿ ಇರಿಕೊಳ್ಳುತ್ತದೆ.
ನಿಮಗೆ ಅರಿಶಿನವನ್ನು ಯಾವ ನಿರ್ದಿಷ್ಟ ಸಮಸ್ಯೆಗೆ( ಗಾಯ, ಶೀತ ಅಥವಾ ಚರ್ಮದ ಸಮಸ್ಯೆ) ಬಳಸ ಬಹುದು.
