ಮೂತ್ರಪಿಂಡ ಅಥವಾ ಕಿಡ್ನಿಯ ರಚನೆ, ಕಾರ್ಯಗಳು, ವೈಫಲ್ಯ, ರೋಗಗಳು ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ./kidney diseases, causes, symptoms & treatment.
ಮೂತ್ರಪಿಂಡ ಅಥವ ಕಿಡ್ನಿಯು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದರ ರಚನೆಯು ಉರುಳಿ ಬೀಜದ ಆಕಾರದಲ್ಲಿದ್ದು, ಬೆನ್ನೆಲುಬಿನ ಎರಡು ಬದಿಗಳಲ್ಲಿ ಕಿಬ್ಬೊಟ್ಟೆಯ ಹಿಂಭಾಗದಲ್ಲಿಕಂಡುಬರುತ್ತದೆ.
5/30/20261 min read


ಕಿಡ್ನಿಯ ಮುಖ್ಯ ಭಾಗಗಳು
ಕಿಡ್ನಿಯ ಒಳಗಿನ ರಚನೆಯನ್ನು ಮುಖ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ
1. ಕಾರ್ಟೆಕ್ಸ್: ಇದು ಕಿಡ್ನಿಯ ಹೊರಭಾಗದ ರಚನೆಯಾಗಿದೆ ಇಲ್ಲಿ ರಕ್ತವನ್ನು ಶುದ್ಧೀಕರಿಸುವ ಕ್ರಿಯೆ ಆರಂಭವಾಗುತ್ತದೆ.
2. ಮೆಡುಲ್ಲಾ: ಇದು ಕಿಡ್ನಿಯ ಒಳಗಿನ ರಚನೆಯಾಗಿದ್ದು, ಪಿರಮಿಡ್ ಆಕಾರದ ರಚನೆಗಳನ್ನು ಒಳಗೊಂಡಿದೆ. ಇದು ತಯಾರಾದ ಮೂತ್ರವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.
3. ಪೆಲ್ವಿಸ್: ಇದು ಕಿಡ್ನಿಯ ಮಧ್ಯಭಾಗದಲ್ಲಿರುವ ಕೊಳವೆಯಂತಹ ರಚನೆಯಾಗಿದ್ದು, ತಯಾರಾದ ಮೂತ್ರವನ್ನು ಮೂತ್ರನಾಳದ ಮೂಲಕ ಮೂತ್ರಕೋಶಕ್ಕ ರವಾನಿಸುತ್ತದೆ.
ನೆಫ್ರಾನ್ಗಳು.
ಕಿಡ್ನಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳನ್ನು ನೆಫ್ರಾನ್ಗಳು ಕರೆಯಲಾಗುತ್ತದೆ. ಒಂದು ಕಿಡ್ನಿಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ನೆಫ್ರಾನ್ಗಳಿರುತ್ತವೆ. ಇವು ರಕ್ತದಲ್ಲಿನ ಕಲ್ಮಶಗಳನ್ನು ಮತ್ತು ಹೆಚ್ಚಿನ ದ್ರವವನ್ನು ಬೇರ್ಪಡಿಸಿ ಮೂತ್ರವಾಗಿ ಪರಿವರ್ತಿಸುವುದು ಇದರ ಮುಖ್ಯ ಕಾರ್ಯವಾಗಿದೆ.
ಕಿಡ್ನಿಯ ಪ್ರಮುಖ ಕಾರ್ಯಗಳು
1. ರಕ್ತದ ಶುದ್ಧೀಕರಣ ರಕ್ತದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ.
2. ನೀರಿನ ಸಮತೋಲನ ದೇಹದಲ್ಲಿ ನೀರಿನ ಅಂಶ ಮತ್ತು ಎಲೆಕ್ಟ್ರೋಲೈಟ್ಸ್ ಗಳ( ಉಪ್ಪು, ಪೊಟ್ಯಾಶಿಯಂ) ಇತ್ಯಾದಿ ಮಟ್ಟವನ್ನು ಸಮತೋಲನದಲ್ಲಿ ಕಾಪಾಡುತ್ತದೆ.
3. ರಕ್ತದೊತ್ತಡ ನಿಯಂತ್ರಣ ಕಿಡ್ನಿಗಳು ರೆನಿನ್ ಎಂಬ ಹಾರ್ಮೋನ್ ಉತ್ಪಾದಿಸುವ ಮೂಲಕ ರಕ್ತದೊತ್ತಡವನ್ನು ಸಮತೋಲನದಲ್ಲಿ ಕಾಪಾಡುತ್ತದೆ.
4. ಕೆಂಪು ರಕ್ತದ ಉತ್ಪಾದನೆ ಮೂಳೆ ಮಜ್ಜಿಯಲ್ಲಿ ಕೆಂಪು ರಕ್ತಗಳ ಉತ್ಪಾದನೆಗೆ ಸಹಾಯ ಮಾಡುವ ಏರಿತ್ರೋ ಪೊಯೆಟ್ನ್ ಹಾರ್ಮೋನನ್ನು ಕಿಡ್ನಿಯು ಉತ್ಪಾದಿಸುತ್ತದೆ.
5.ಆಹಾರದ ಪಚನ ಕ್ರಿಯೆಯಿಂದ ದೇಹದಲ್ಲಿ ಅನಾವಶ್ಯಕ ವಸ್ತುಗಳ ಉತ್ಪಾದನೆ ಆಗುತ್ತದೆ ಕಿಡ್ನಿಯು ದೇಹದಲ್ಲಿನ ಅನಾವಶ್ಯಕ ನೀರು ಮತ್ತು ತ್ಯಾಜ್ಯ ಪದಾರ್ಥಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುತ್ತದೆ.
6.ಶಕ್ತಿಯುತ ಎಲುಬುಗಳು ಕಿಡ್ನಿಯು ಸಕ್ರಿಯ ವಿಟಮಿನ್ ಡಿ ಯನ್ನು ಉತ್ಪಾದಿಸುವಲ್ಲಿ ಸಹಾಯಮಾಡುತ್ತದೆ ವಿಟಮಿನ್ ಡಿ ಯು ಶರೀರದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಪ್ರಮಾಣಕ್ಕೆ ಅನುಸಾರವಾಗಿ ಮೂಳೆ ಮತ್ತು ಹಲ್ಲುಗಳ ವಿಕಾಸ ಮತ್ತು ಗಟ್ಟಿತನ ಉಂಟಾಗುವಲ್ಲಿ ಮಹತ್ವದ ಕಾರ್ಯ ಮಾಡುತ್ತದೆ.
ಕಿಡ್ನಿಯ ವೈಫಲ್ಯ ಅಥವಾ ಮೂತ್ರಪಿಂಡದ ವೈಫಲ್ಯ.
ಮೂತ್ರಪಿಂಡಗಳು ತಮ್ಮ ಕಾರ್ಯವನ್ನು ನಿಲ್ಲಿಸಿ ರಕ್ತದಿಂದ ತ್ಯಾಜ್ಯಗಳನ್ನು ಫಿಲ್ಟರ್ ಮಾಡಲು ಸಾಧ್ಯವಾಗದ ಸಿಟಿಯನ್ನು ಕಿಡ್ನಿ ವೈಫಲ್ಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ ಅಥವಾ ಅಧಿಕಾರದಿಂದ ಉಂಟಾಗುತ್ತದೆ.
ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳು
1.ಕಾಲು ಮತ್ತು ಮುಖದ ಊತ ದೇಹದಲ್ಲಿ ದ್ರವ ಅಂಶ ಹೆಚ್ಚಾಗಿ ಮುಖ, ಪಾದ ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.
2. ಬದಲಾವಣೆ ಮೂತ್ರದ ಪ್ರಮಾಣದಲ್ಲಿ ಹೆಚ್ಚಳ ಅಥವಾ ಇಳಿಕೆ ಈ ಲಕ್ಷಣವನ್ನು ನಾವು ಲಕ್ಷಣ ಎಂದು ಪರಿಗಣಿಸಬಹುದು.
3. ಆಯಾಸ ಮತ್ತು ದೌರ್ಬಲ್ಯ ರಕ್ತಹೀನತೆಯಿಂದಾಗಿ ನಿರಾಸಕ್ತಿ ಮತ್ತು ಯಾವುದೇ ಕಾರ್ಯಗಳನ್ನು ಸರಾಗವಾಗಿ ಮಾಡಲು ಆಗದೆ ಇರುವುದು.
4.ಉಸಿರಾಟದ ತೊಂದರೆ ಮತ್ತು ಚರ್ಮದಲ್ಲಿ ವಿಪರೀತ ತುರಿಕೆಗಳು ಕಾಣಿಸಿಕೊಳ್ಳುತ್ತದೆ.
ವಿಧಗಳು.
1. ತೀವ್ರ ಮೂತ್ರಪಿಂಡ ವೈಫಲ್ಯ(Acute)
ಇದು ಇದ್ದಕ್ಕಿದ್ದಂತೆ ಕಿಡ್ನಿಯ ವೈಫಲ್ಯವಾಗಿದೆ. ಇದು ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ ಆದರೆ ಕಿಡ್ನಿಯ ಕಾರ್ಯವನ್ನು ನಿಯಂತ್ರಿಸುವದಲ್ಲಿ ವೈಫಲ್ಯವಾಗಿದೆ.
2. ದೀರ್ಘಕಾಲದ ಮೂತ್ರಪಿಂಡ ವೈಫಲ್ಯ(Chronic)
ಇದು ನಿಧಾನವಾಗಿ ಮತ್ತು ದೀರ್ಘಾವಧಿಯಲ್ಲಿ ಮೂತ್ರಪಿಂಡಗಳನ್ನು ಪ್ರಾಣಿಗೊಳಿಸುತ್ತದೆ.
ಮೂತ್ರಪಿಂಡ ವೈಫಲ್ಯಕ್ಕೆ ಕಾರಣಗಳು.
ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಮತ್ತು ದೇಹದಿಂದ ತ್ಯಾಜ್ಯವನ್ನು ಶುದ್ಧೀಕರಿಸಲು ಸಾಧ್ಯವಿಲ್ಲದಿದ್ದರೆ ಮೂತ್ರಪಿಂಡ ವೈಫಲ್ಯ ಸಂಭವಿಸುತ್ತದೆ ಇದರ ಹಿಂದೆ ಕೆಲವು ಕಾರಣಗಳಿವೆ ಅವುಗಳೆಂದರೆ,
1. ಮಧುಮೇಹ- ಸಕ್ಕರೆ ಮೊಟ್ಟೆ ದೀರ್ಘಕಾಲದ ವರೆಗೆ ಹೆಚ್ಚಿದ್ದರೆ ಅದು ನಿಧಾನವಾಗಿ ಮಿತ್ರ ಪಿಂಡಗಳಿಗೆ ಹಾನಿ ಮಾಡುತ್ತದೆ. ಅದಕ್ಕಾಗಿಯೇ ಮಧುಮೇಹವು ಮೂತ್ರಪಿಂಡ ವೈಫಲ್ಯಕ್ಕೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ.
2.ತೀವ್ರ ರಕ್ತದೊತಡ- ರಕ್ತದ ಒತ್ತಡ ಅಧಿಕವಾದಾಗ ಅದು ಮೂತ್ರಪಿಂಡದಲ್ಲಿನ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ ಕಾಲಂತರದಲ್ಲಿ ಅವು ದುರ್ಬಲಗೊಳ್ಳುತ್ತವೆ.
3. ಗ್ಲೋಮೆರುಲೋ ನೆಫ್ರೆಟಿಸ-ಇದು ಮೂತ್ರಪಿಂಡಗಳಲ್ಲಿನ ಒಂದು ರೀತಿಯ ಊತವಾಗಿದ್ದು, ಅವುಗಳ ಶೋಧಕ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ, ಇದರಿಂದಾಗಿ ಅವಳಿಗೆ ಅವುಗಳಿಗೆ ಕಾರ್ಯನಿರಹಿಸಲು ಕಷ್ಟವಾಗುತ್ತದೆ.
4. ಪಾಲಿಸಿಸ್ಟಿಕ್ ಕಿಡ್ನಿ ಕಾಯಿಲೆ- ಈ ಸ್ಥಿತಿಯಲ್ಲಿ ಮೂತ್ರಪಿಂಡಗಳ ಒಳಗೆ ದ್ರವ ತುಂಬಿದ ಚೀಲಗಳು ರೂಪುಗೊಳ್ಳುತ್ತವೆ, ಇದು ಮೂತ್ರಪಿಂಡ ವೈಫಲ್ಯದ ರೋಗಿಗೆ ಸಮಸ್ಯೆ ಉಂಟುಮಾಡಬಹುದು.
5. ಕುಟುಂಬದ ಇತಿಹಾಸ- ನಿಮ್ಮ ಹತ್ತಿರದಲ್ಲಿ ಕುಟುಂಬದವರಿಗೆ ಯಾರಿಗಾದರೂ ಸಮಸ್ಯೆ ಇದ್ದರೆ ನಿಮಗೂ ಅವು ಕಾಲಕ್ರಮಣದಲ್ಲಿ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಕಿಡ್ನಿ ಕಾರ್ಯ ಪರೀಕ್ಷೆ Kidney function test.
ಕಿಡ್ನಿ ಕಾರ್ಯ ಪರೀಕ್ಷೆ ಎಂದರೆ ನಿಮ್ಮ ಮೂತ್ರಪಿಂಡಗಳು ರಕ್ತವನ್ನು ಎಷ್ಟು ಪರಿಣಾಮಕಾರಿಯಾಗಿ ಶೋಧಿಸುತ್ತವೆ ಮತ್ತು ವಿಷಕಾರಿ ತ್ಯಾಜ್ಯವನ್ನು ಹೊರಾಕುತ್ತವೆ ಎಂದು ಪರೀಕ್ಷಿಸುವ ರಕ್ತ ಮತ್ತು ಪರೀಕ್ಷೆಗಳ ಗುಂಪಾಗಿದೆ . ಇದು ಮೂತ್ರಪಿಂಡದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ .
KFT ಮಾಡುವ ಮುಖ್ಯ ಪರೀಕ್ಷೆಗಳು.
ರಕ್ತ ಪರೀಕ್ಷೆಗಳು (Blood tests)
1.ಕ್ರಿಯಾಟಿನ್(creatinine) -ಇದು ಸ್ನಾಯುಗಳ ತ್ಯಾಜ್ಯವಗಿದ್ದು, ಕಿಡ್ನಿಯು ಇದನ್ನು ಶೋಧಿಸುತ್ತದೆ. ಇದರ ಪ್ರಮಾಣ ಹೆಚ್ಚಾದಾಗ ಕಿಡ್ನಿಯು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರ್ಥ.
2. ಬ್ಲಡ್ ಯೂರಿಯ ನೈಟ್ರೋಜನ್(BUN)- ರಕ್ತದಲ್ಲಿನ ಯೂರಿಯ ಮಟ್ಟವು ಅಧಿಕವಾದರೂ ಕಿಡ್ನಿಯು ಕಾರ್ಯ ಸಮತೋಲನದಲ್ಲಿಲ್ಲ ಎಂದರ್ಥ .
3. ಅಂದಾಜು ಗ್ಲೋ ಮೆರೂಲರ್ ಫಿಲ್ಟರೇಷನ್ ದರ(eGFR )- ಕಿಡ್ನಿಯು ನಿಮಿಷಕ್ಕೆ ಎಷ್ಟು ರಕ್ತವನ್ನು ಫಿಲ್ಟರ್ ಮಾಡುತ್ತದೆ ಎಂಬುದನ್ನು ಈ ಟೆಸ್ಟ್ ಮೂಲಕ ಪತ್ತೆ ಹಚ್ಚಲಾಗುತ್ತದೆ.
ಮೂತ್ರ ಪರೀಕ್ಷೆಗಳು(Urine test)- ಪ್ರೋಟೀನ್ ಅಥವಾ ಸಕ್ಕರೆ ಅಂಶವಿದೆಯೇ ಎಂದು ಪರೀಕ್ಷಿಸಲು ಮೂತ್ರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮೂತ್ರದಲ್ಲಿ ಹೆಚ್ಚಿದ ಪ್ರೋಟೀನ್ ಅಂಶವು ಕಿಡ್ನಿಯ ಕಾಯಿಲೆಯನ್ನು ಸೂಚಿಸುತ್ತದೆ.
KFT ಪರೀಕ್ಷೆಯ ಪ್ರಾಮುಖ್ಯತೆ.
1. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರಿಗೆ ಮೂತ್ರಪಿಂಡದ ತೊಂದರೆಯನ್ನು ಆರಂಭದಲ್ಲೇ ಪತ್ತೆ ಹಚ್ಚಲು ಇದು ಸಹಾಯ ಮಾಡುತ್ತದೆ.
2. ಕಿಡ್ನಿ ವೈಫಲ್ಯ, ಕಲ್ಲುಗಳು ಅಥವಾ ಸೋಂಕುಗಳ ಮೌಲ್ಯಮಾಪನ ನಡೆಸಲು ಈ ಪರೀಕ್ಷೆಯು ಸಹಾಯಕಾರಿಯಾಗಿದೆ.
ಚಿಕಿತ್ಸಾ ವಿಧಾನಗಳು.
1. ಡಯಾಲಿಸಿಸ್(Dialysis)- ರಕ್ತವನ್ನು ಕೃತಕವಾಗಿ ಶುದ್ಧೀಕರಿಸುವ ಪ್ರಕ್ರಿಯೆ.
2. ಮೂತ್ರಪಿಂಡ ಕಸಿ(Kidney Transplant)-ವೈಫಲ್ಯಗೊಂಡ ಕಿಡ್ನಿಯ ಬದಲಿಗೆ ದಾನೀಯ ಆರೋಗ್ಯಕರ ಕಿಡ್ನಿಯನ್ನು ಅಳವಡಿಸುವುದು.
ಕಿಡ್ನಿ ಅಥವಾ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಿಡ್ನಿ ಕಾಯಿಲೆಗಳನ್ನು ತಡೆಗಟ್ಟಲು ನೀವು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.
1. ಮಧುಮೇಹ ಮತ್ತು ರಕ್ತದೊತ್ತಡದ ನಿಯಂತ್ರಣ
ಕಿಡ್ನಿ ವೈಫಲ್ಯಕ್ಕೆ ಕಾರಣವಾಗಿರುವ ಈ ಕಾಯಿಲೆಗಳನ್ನು ನಿಯಮಿತವಾಗಿ ಪರೀಕ್ಷಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಗತ್ಯ.
2.ಆರೋಗ್ಯಕರ ಆಹಾರ ಪದ್ಧತಿ
ಸಮತೋಲಿತ ಆಹಾರವನ್ನು ಸೇವಿಸಿ, ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸುವುದು.
3. ಸಾಕಷ್ಟು ನೀರು ಕುಡಿಯುವುದು
ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವುದು ಕಿಡ್ನಿಯಿಂದ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
4.ನಿಯಮಿತವಾದ ದೈಹಿಕ ಚಟುವಟಿಕೆ ಅಥವಾ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
5. ಔಷಧಿಗಳ ಮಿತ ಬಳಕೆ
ನೋವು ನಿವಾರಕ ಮಾತ್ರೆಗಳನ್ನು(Painkiller) ವೈದ್ಯರ ಸಲಹೆ ಇಲ್ಲದೆ ಅತಿಯಾಗಿ ಬಳಸಬಾರದು.
6. ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ
ಧೂಮಪಾನ ಮತ್ತು ಮಧ್ಯಪಾನವು ಕಿಡ್ನಿಗೆ ರಕ್ತದ ಅರಿವನ್ನು ಕಡಿಮೆ ಮಾಡುತ್ತದೆ ಇದರಿಂದ ಕಿಡ್ನಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
