ಹಿಮೋಗ್ಲೋಬಿನ್, Haemoglobin...?
ಕೆಂಪು ರಕ್ತ ಕಣಗಳ ಒಂದು ಪ್ರಮುಖ ಅಂಶ ಇದು ಕಬ್ಬಿನಾಂಶವನ್ನು ಹೊಂದಿರುತ್ತದೆ ಇದರ ರಚನೆ ಮತ್ತು ಕಾರ್ಯವು ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಆಮ್ಲಜನಕವನ್ನು ಪೂರೈಸಲು ಅತ್ಯಗತ್ಯ ವಾಗಿರುತ್ತದೆ.
6/1/20261 min read


Haemoglobin ನ ನಿಯಮಿತ ಮಟ್ಟ .
1.ಪುರುಷರು
13.5- 17 .5 g/dl
2.ಮಹಿಳೆಯರು
12.0-15.5 g/dl
3. ಗರ್ಭಿಣಿಯರು
11.g/dl ಗಿಂತ ಹೆಚ್ಚು
4.ಮಕ್ಕಳು
11.5-15.5 g/dl
ಹಿಮೋಗ್ಲೋಬಿನ್ ರಚನೆ
ಹಿಮೋಗ್ಲೋಬಿನ್ ನಾಲ್ಕು ಸರಪಳಿಗಳಿಂದ ಮಾಡಲ್ಪಟ್ಟಿದೆ 2 alpha ಮತ್ತು ಎರಡು beta ಸರಪಳಿಗಳು ಇರುತ್ತವೆ . ಮೂಳೆ ಮಜ್ಜೆಯ ಜೀವಕೋಶಗಳಲ್ಲಿ ಹಿಮೋಗ್ಲೋಬಿನ್ ಬೆಳವಣಿಗೆ ಆಗುತ್ತದೆ. ಅಂತಿಮವಾಗಿ ಅವು ಕೆಂಪು ರಕ್ತ ಕಣಗಳಾಗಿ ಬದಲಾಗುತ್ತವೆ ಆದ್ದರಿಂದ ಈ ಮೋಗ್ಲೋಬಿನ್ ಕೆಂಪು ರಕ್ತ ಕಣಗಳು ಅಥವಾ ರಕ್ತದ ಎರೈತ್ರೋಸೈಟ್ ನಲ್ಲಿ ಮಾತ್ರ ಕಂಡುಬರುವ ಹಿಮೋ ಪ್ರೋಟೀನ್ ಆಗಿದೆ .
ಹಿಮೋಗ್ಲೋಬಿನ್ ನ ಸಂಶ್ಲೇಷಣೆಯು ಪ್ರೊ ಏರಿತ್ರೋ ಬ್ಲಾಸ್ಟ್ಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ರೆಟಿಕ್ಯುಲೊಸೈಟ್ ಹಂತಕ್ಕೆ ಮುಂದುವರೆಯುತ್ತದೆ. ಆದ್ದರಿಂದ ರೆಟಿಕ್ಯುಲೋಸೈಟ್ಗಳು ಮೂಳೆ ಮಜ್ಜೆಯಿಂದ ಹೊರಬಂದು ರಕ್ತ ಪ್ರವಾಹಕ್ಕೆ ಪ್ರವೇಶಿಸಿದಾಗ ಅವು ಪ್ರಬುದ್ಧ್ ಏರತ್ರಸೈಟ್ ಗಳಾಗಿ ಬದಲಾಗುವವರೆಗೆ ಸ್ವಲ್ಪ ಸಮಯದವರೆಗೆ ಹಿಮೋಗ್ಲೋಬಿನ್ನ ಪ್ರಮಾಣವನ್ನು ರೂಪಿಸುತ್ತದೆ. ಕಬ್ಬಿಣವು ಹಿಮೋಗ್ಲೋಬಿನ್ನ ಪ್ರಮುಖ ಅಂಶ.
ಹಿಮ್ ಗ್ರೂಪ್
ಪ್ರತಿ ಸರಪಳಿವು ತನ್ನ ಕೇಂದ್ರದಲ್ಲಿ ಹೀಮ್ ಎಂಬ ಹಣವನ್ನು ಹೊಂದಿರುತ್ತದೆ ಇದು ಕಬ್ಬಿಣದ ಅಂಶವಾಗಿದೆ ಈ ಕಬ್ಬಿಣದ ಅಂಶವೇ ಆಮ್ಲಜನಕದೊಂದಿಗೆ ಬಂದ ಏರ್ಪಡಿಸಲು ಪ್ರಮುಖ ಕಾರಣ.
ಹೀಮೋಗ್ಲೋಬಿನ್ ಆಲ್ಫಾ, ಬೀಟಾ, ಗಾಮ, ಡೆಲ್ಟಾ, ಎಪ್ಸಿಲನ್ ಮತ್ತು ಜೀಟಾ ಎಂಬ ಗ್ಲೋಬಿನ್ ಸರಪಳಿಗಳ ಜೋಡಿಗಳನ್ನು ಹೊಂದಿರುತ್ತದೆ
ಪ್ರಮುಖ ಕಾರ್ಯಗಳು
1. ಆಮ್ಲಜನಕ ಸಾಗಾಣೆ- ಶ್ವಾಸಕೋಶದಿಂದ ಆಮ್ಲಜನಕವನ್ನು ಹೀರಿಕೊಂಡು ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಮತ್ತು ಸ್ನಾಯುಗಳಿಗೆ ತಲುಪಿಸುತ್ತದೆ.
2. ಇಂಗದ ಡೈಯಾಕ್ಸೈಡ್ ಹೊರಹಾಕುವಿಕೆ- ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಾದ ಇಂಗಾಲದ ಡೈಯಾಕ್ಸೈಡ್ ಅನ್ನು ಕೋಶಗಳಿಂದ ಶ್ವಾಸಕೋಶಕ್ಕೆ ಹಿಂತಿರುಗಿಸುತ್ತದೆ ಅಲ್ಲಿಂದ ಅದನ್ನು ಉಸಿರಾಟದ ಮೂಲಕ ಹೊರ ಹಾಕಲ್ಪಡುತ್ತದೆ.
ಇದರ ಪ್ರಾಮುಖ್ಯತೆ ಮತ್ತು ಪರಿಣಾಮಗಳು
1. ಸಾಮಾನ್ಯ ಮಟ್ಟ- ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟದಲ್ಲಿರಬೇಕು ಇದು ಪುರುಷರಲ್ಲಿ ಸುಮಾರು14 ರಿಂದ17 ಗ್ರಾo ಡೆಸಿಲೇಟರ್ ಮತ್ತು ಮಹಿಳೆಯರಲ್ಲಿ12 ರಿಂದ15 ಗ್ರಾಮ್ ಡೆಸಿಲೇಟರ್ ವರೆಗೆ ಇರಬೇಕು .
2.ರಕ್ತಹೀನತೆ
ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾದರೆ ಆಮ್ಲಜನಕದ ಪೂರೈಕೆಗೆ ಅಡ್ಡಿಯಾಗುತ್ತದೆ ಇದರಿಂದ ತೀವ್ರಾಯಸ, ತಲೆನೋವು, ಉಸಿರಾಟದ ತೊಂದರೆ ಮತ್ತು ಸುಸ್ತು ಉಂಟಾಗುತ್ತದೆ.
3. ರಕ್ತದ ಬಣ್
ಹೀಮೋಗ್ಲೋಬಿನ್ ನಲ್ಲೆ ಕಬ್ಬಿನಾಂಶ ಇರುವುದರಿಂದ ರಕ್ತಕ್ಕೆ ಕೆಂಪು ಬಣ್ಣ ಬರುತ್ತದೆ
ಹಿಮೋಗ್ಲೋಬಿನ್ ರಕ್ತದಾದ್ಯಂತ ಇಂಗಾಲದ ಡೈಯಾಕ್ಸೈಡ್ ಅನ್ನು ಮತ್ತು ಆಮ್ಲಜನಕವನ್ನು ಸಾಗಿಸುವ ಪ್ರಮುಖ ಕಾರ್ಯವನ್ನು ಹೊಂದಿದೆ.ಇದನ್ನು ಕೆಂಪು ರಕ್ತಕಣಗಳು ಸಾಗಿಸುತ್ತವೆ. ಗಮನಹವಾಗಿ ಕಡಿಮೆಯಾದಾಗ ದೇಹದ ಇತರ ಜೀವಕೋಶಗಳಿಗೆ ಬದುಕುಳಿಯಲು ಅಗತ್ಯವಾದ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗದಿರಬಹುದು. ಪರೀಕ್ಷೆಯ ಫಲಿತಾಂಶ ಹಿಮೋಗ್ಲೋಬಿನ್ ಮಟ್ಟವು ಸಾಮಾನ್ಯಗಿಂತ ಕಡಿಮೆಯಾಗಿದೆ ಎಂದುಬಹಿರಂಗಪಡಿಸಿದರೆ ಅದು ಕಡಿಮೆ ಕೆಂಪು ರಕ್ತ ಕಣಗಳ ಕಡಿಮೆ ಸಂಖ್ಯೆಯನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ.
ಈ ಅಣು ನಿಯಂತ್ರಕ ಅಣು ನೈಟ್ರಿಕ್ ಆಕ್ಸಿಡನ್ನು ಹೊಂದಿರುತ್ತದೆ ಇದು ಗ್ಲೋಬಿನ್ ಪ್ರೋಟಿನ್ ನಲ್ಲಿರುವ ಗುಂಪಿನೊಂದಿಗೆ ಸಂಬಂಧ ಹೊಂದಿದ್ದು ಆಮ್ಲಜನಕ ಜೊತೆಗೆ ಅವುಗಳನ್ನು ಬಿಡುಗಡೆ ಮಾಡುತ್ತದೆ. ಸ್ನಾಯುಕೋಷಗಳಲ್ಲಿ ಮಯೋಗ್ಲೊಬಿನ್ ಆಮ್ಲಜನಕವನ್ನು ಸಂಗ್ರಹಿಸುತ್ತದೆ ಮತ್ತು ಬಿಡುಗಡೆ ಮಾಡುತ್ತದೆ .
ಹಿಮೋಗ್ಲೋಬಿನ್ ನ ಸಂಶ್ಲೇಷಣೆಯು ಪ್ರೊಏರಿತ್ರೋ ಬ್ಲಾಸ್ಟ್ಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ರೆಟಿಕ್ಯುಲೊಸೈಟ್ ಹಂತಕ್ಕೆ ಮುಂದುವರೆಯುತ್ತದೆ. ಆದ್ದರಿಂದ ರೆಟಿಕ್ಯುಲೋಸೈಟ್ಗಳು ಮೂಳೆ ಮಜ್ಜೆಯಿಂದ ಹೊರಬಂದು ರಕ್ತ ಪ್ರವಾಹಕ್ಕೆ ಪ್ರವೇಶಿಸಿದಾಗ ಅವು ಪ್ರಭುದ್ದ ಎರಿಥ್ರೋಸೈಟ ಆಗಿ ಬದಲಾಗುವವರೆಗೆ ಸ್ವಲ್ಪ ಸಮಯದವರೆಗೆ ಹಿಮೋಗ್ಲೋಬಿನ್ನ ಪ್ರಮಾಣವನ್ನು ರೂಪಿಸುತ್ತದೆ. ಕಬ್ಬಿಣವು ಹಿಮೋಗ್ಲೋಬಿನ್ನ ಪ್ರಮುಖ ಅಂಶ.
ಕಡಿಮೆ ಹಿಮೋಗ್ಲೋಬಿನ್ ಲಕ್ಷಣಗಳು
ಕಡಿಮೆ ಹೀಮೋಗ್ಲೋಬಿನ್ ಮಟ್ಟವು ರಕ್ತಹೀನತೆಯ ಸೂಚನೆಯಾಗಿದೆ ಈ ಕಡಿಮೆ ಹಿಮೋಗ್ಲೋಬಿನ್ ಮಟ್ಟಕ್ಕೆ ಮುಖ್ಯ ಲಕ್ಷಣಗಳು.
1 ಉಸಿರಾಟದ ತೊಂದರೆ
2.ತಲೆ ತಿರುಗುವಿಕೆ
3. ದೌರ್ಭಲ್ಯ
4. ಮಸುಕಾದ ಅಥವಾ ಅಳದಿ ಚರ್ಮ
5. ಎದೆ ನೋವು
ಹಿಮೋಗ್ಲೋಬಿನ್ ಅಂಶವು ದೇಹದಲ್ಲಿ ಕಡಿಮೆಯಾಗಲು ಪ್ರಮುಖ ಕಾರಣಗಳು
1.ದೇಹದಲ್ಲಿ ಕಬ್ಬಿನಾಂಶ, ವಿಟಮಿನ್ ಬಿ12 ಅಥವಾ ಪೋಲಿಕ್ ಆಮ್ಲದ ಕೊರತೆ.
2. ಮುಟ್ಟಿನ ಸಮಯದಲ್ಲಿ ಅಥವಾ ಗಾಯಗಳಿಂದ ಅಧಿಕ ರಕ್ತಸ್ರಾವ.
3. ಅನುವಂಶಿಯ ಕಾಯಿಲೆಗಳು.
ಪರಿಹಾರಗಳು
1. ಆಹಾರ ಪದ್ಧತಿ
ಪಾಲಕ್ ಸೊಪ್ಪು, ದಾಳಿಂಬೆ, ಖರ್ಜೂರ, ಬೀಟ್ರೂಟ್, ಮಾಂಸಹಾರ ಮತ್ತು ಬೇಳೆಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು.
2. ವೈದ್ಯಕೀಯ ಚಿಕಿತ್ಸೆ
ಅಗತ್ಯವಿದ್ದಲ್ಲಿ ವಿಟಮಿನ್ ಅಥವಾ ಕಬ್ಬಿನಾಂಶದ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು.
ಪರಿಹಾರಗಳು
1. ಆಹಾರ ಪದ್ಧತಿ
ಪಾಲಕ್ ಸೊಪ್ಪು, ದಾಳಿಂಬೆ, ಖರ್ಜೂರ, ಬೀಟ್ರೂಟ್, ಮಾಂಸಹಾರ ಮತ್ತು ಬೇಳೆಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು.
2. ವೈದ್ಯಕೀಯ ಚಿಕಿತ್ಸೆ
ಅಗತ್ಯವಿದ್ದಲ್ಲಿ ವಿಟಮಿನ್ ಅಥವಾ ಕಬ್ಬಿನಾಂಶದ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು.
ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಪತ್ತೆಹಚ್ಚಲು ಮಾಡಲಾಗುವ ರಕ್ತ ಪರೀಕ್ಷೆಗಳು.
Hb ರಕ್ತದಲ್ಲಿ ಇರುವ ಕೆಂಪು ರಕ್ತಕಣಗಳಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಅಳೆಯುವ ಒಂದು ಪ್ರಮುಖ ರಕ್ತ ಪರೀಕ್ಷೆಯು ಆಗಿದೆ. ಇದು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಅತ್ಯಗತ್ಯವಾಗಿದೆ.
ಪರೀಕ್ಷೆಯ ಪ್ರಮುಖ ಉದ್ದೇಶಗಳು ಮತ್ತು ಉಪಯೋಗಗಳು.
1. ರಕ್ತ ಹೀನತೆ
ಹಿಮೋಗ್ಲೋಬಿನ್ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಆದರೆ ಅದು ರಕ್ತಹೀನತೆಯ ಲಕ್ಷಣವಾಗಿದೆ.
2 ಆಮ್ಲಜನಕದ ಮಟ್ಟ
ರಕ್ತದಲ್ಲಿನ ಆಮ್ಲಜನಕ ಮಟ್ಟವನ್ನು ತಿಳಿಯಲು ಇದು ಸಹಾಯ ಮಾಡುತ್ತದೆ.
3. ಸಾಮಾನ್ಯ ಮಟ್ಟ
ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಈ ಮಟ್ಟವು ಬದಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ದೆಸಿಲೇಟರ್ ರಕ್ತಕ್ಕೆ ಗ್ರಾಂ ನಲ್ಲಿ ಅಳೆಯಲಾಗುತ್ತದೆ.
ಕಡಿಮೆಮೋಗ್ಲೋಬಿನ್ (ರಕ್ತ ಹೀನತೆ/anemia).
ಮಹಿಳೆಯರಲ್ಲಿ12.0g/dl ಗಿಂತ ಮತ್ತು ಪುರುಷರಲ್ಲಿ13.5g/dl ಗಿಂತ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾದರೆ ಅದು ರಕ್ತಹೀನತೆಯ ಲಕ್ಷಣವಾಗಿರಬಹುದು.
ಕಡಿಮೆಮೋಗ್ಲೋಬಿನ್ (ರಕ್ತ ಹೀನತೆ/anemia).
ಮಹಿಳೆಯರಲ್ಲಿ12.0g/dl ಗಿಂತ ಮತ್ತು ಪುರುಷರಲ್ಲಿ13.5g/dl ಗಿಂತ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾದರೆ ಅದು ರಕ್ತಹೀನತೆಯ ಲಕ್ಷಣವಾಗಿರಬಹುದು.
