ಮೆಂತೆ ,ಮೆಂತೆಯ ಉಪಯೋಗಗಳು, ಮೆಂತೆಯ ಔಷಧೀಯ ಗುಣಗಳು/ Fenugreek, uses of Fenugreek and its health benefits, methi water

ಮೆಂತ್ಯವನ್ನು ಕನ್ನಡದಲ್ಲಿ ಮೆಂತೆ ಎಂದು ಕರೆಯುತ್ತಾರೆ ಇಂಗ್ಲಿಷ್ನಲ್ಲಿ ಇದನ್ನು Fenugreek ಹಾಗೂ ಹಿಂದಿಯಲ್ಲಿMethi ಎಂದು ಕರೆಯಲಾಗುತ್ತದೆ.

6/9/20261 min read

ಅಡುಗೆಯಲ್ಲಿ ಇದನ್ನು ಎರಡು ವಿಧಗಳಾಗಿ ಬಳಸಲಾಗುತ್ತದೆ.

1. ಮೆಂತೆ ಸೊಪ್ಪು :ಎಲೆಗಳನ್ನು ಪಲ್ಯ ಅಥವಾ ಇತರ ಖಾದ್ಯಗಳಲ್ಲಿ ಬಳಸುತ್ತಾರೆ.

2. ಮೆಂತೆ ಕಾಳು :ಬೀಜಗಳನ್ನು ಸಾಂಬಾರು ಪುಡಿ, ಒಗ್ಗರಣೆ ಮತ್ತು ಮಸಾಲೆ ಪದಾರ್ಥಗಳಾಗಿ ಬಳಸುತ್ತಾರೆ.

ಆರೋಗ್ಯದ ದೃಷ್ಟಿಯಿಂದ ಮೆಂತೆವು ಅತ್ಯಂತ ಪ್ರಯೋಜನಕಾರಿಯಾಗಿದೆ. ಮಧುಮೇಹ ನಿವಾರಣಕ್ಕೆ ಮತ್ತು ಕೂದಲಿನ ಆರೋಗ್ಯಕ್ಕೆ ಇದು ರಾಮಬಾಣವೆಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.

ಭಾರತದಲ್ಲಿ ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಅಸ್ಸಾಂ,, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರಗಳು ಇದರ ಬೇಸಾಯಕ್ಕೆ ಹೆಸರಾದಂತಿವೆ. ಕಾಶ್ಮೀರ, ಪಂಜಾಬಿನ ಕೆಲವು ಕಡೆ ಗಂಗಾಬಯಲಿನ ಪಶ್ಚಿಮದಲ್ಲಿ ಮೆಂತ್ಯ ಕಾಡು ಸಸ್ಯವಾಗಿ ಕೂಡ ಕಾಣಿಸುತ್ತದೆ. ಭಾರತದ ಉಳಿದೆಡೆಗಳಲ್ಲಿ ವ್ಯಾಪಕವಾಗಿ ಇದರ ಕೃಷಿ ಉಂಟು .

ಮೆಂತೆ ಸುಮಾರು30-60cm ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ ಎಲೆಗಳು 3 ಪರಣಗಳಿಂದ ಕೂಡಿದ ಸಂಯುಕ್ತ ಮಾದರಿಯವು. ಮೆಂತ್ಯದ ಪೈರಿಗೆ ಯಾವುದೇ ರೋಗಗಳು ಮತ್ತು ಕೀಟಗಳ ಕಾಟ ಇಲ್ಲ.

ಮೆಂತ್ಯ ಪ್ರಧಾನವಾಗಿ ಚಳಿಗಾಲದ ಬೆಳೆ.. ಮಧ್ಯಮ ಪ್ರಮಾಣದ ಇಲ್ಲವೇ ಕಡಿಮೆ ಮೊತ್ತದ ಮಳೆ ಬೀಳುವ ಪ್ರದೇಶಗಳು ಇದರ ಬೇಸಾಯಕ್ಕೆ ಉತ್ತಮ. ಇದು ಎಂತಹ ಮಣ್ಣಿನಲ್ಲಿ ಬೆಳೆಯುವುದು ಗೋಡುಯಿಲ್ಲವೇ ಜೇಡಿ ಮಿಶ್ರಿತ ಗೋಡು ಮಣ್ಣು ಇದರ ಬೇಸಾಯಕ್ಕೆ ಉತ್ತಮ. ಯೆರೆ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮೆಂತ್ಯವನ್ನು ಉದ್ದ ಬೆಳೆಯಾಗಿ ಇಲ್ಲವೇ ಹೆಸರು, ಎಳ್ಳು,, ಕೊತ್ತಂಬರಿ ಮುಂತಾದವುಗಳೊಂದಿಗೆ ಬೆಳೆಯಬಹುದು .

ಮೆಂತೆಯ ಉಪಯೋಗಗಳು :

1 ಮೆಂತೆ ಸಾಂಬಾರ ವಸ್ತುವಾಗಿಯೂ ಮತ್ತು ಔಷಧಿಯಾಗಿಯೂ ಬಲುಪ್ರಸಿದ್ಧ. ಬೀಜಗಳಲ್ಲಿ26.2% ಪ್ರೋಟೀನ್,5.8% ಕೊಬ್ಬು,7.2% ನಾರು,44.1% ಕಾರ್ಬೋಹೈಡ್ರೇಟ್ ಅಂಶಗಳು ಇರುತ್ತವೆ. ಅಲ್ಲದೆ ನಿಕೋಟಿನಿಕ್ ಆಮ್ಲ, ವಿಟಮಿನ್ ಸಿ ಗಣನೀಯ ಮೊತ್ತದಲ್ಲಿದೆ. ಸೊಪ್ಪು ಸಹ ಪ್ರೋಟಿನಿನ ಒಳ್ಳೆಯ ಆಗರ.

2. ಮೆಂತ್ಯವನ್ನು ಹಸಿ ಸೊಪ್ಪು ತರಕಾರಿ ಯಾಗಿ ಮಾತ್ರವಲ್ಲದೆ ಬೇಯಿಸಿ ತಿನ್ನುವುದು ಇದೆ. ಕಾಳುಗಳನ್ನು ಆಹಾರದೊಂದಿಗೆ ಸಾಂಬಾರ ವಸ್ತುವಾಗಿ ಬಳಸುವುದು, ಮೆಂತ್ಯದ ಚಟ್ನಿ ಮಾಡುವುದು, ದೋಸೆ ಹಿಟ್ಟಿನಲ್ಲಿ ಬೆರೆಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಜಿನಲ್ಲಿ ಬ್ರೆಡ್ ತಯಾರಿಕೆಗೆ ಗೋಧಿ ಹಿಟ್ಟಿನೊಂದಿಗೆ.. ಸ್ವಿಜರ್ಲ್ಯಾಂಡ್ ನಲ್ಲಿ ಗಿಣ್ಣುವಿಗೆ ವಾಸನೆ ಕಟ್ಟಲು ಬಳಸುತ್ತಾರೆ.. ಕಾಳುಗಳು ಜೀರ್ಣಕಾರಿ, ಶಕ್ತಿವರ್ಧಕ ಎಂದು ಗುರುತಿಸಲ್ಪಟ್ಟಿದೆ. ಇವನ್ನು ಕುಟ್ಟಿ ಹುಣ್ಣುಗಳಿಗೆ ಉಪಯೋಗಿಸುವುದುಂಟು. ಮೆಂತೆ ಸೊಪ್ಪು ದನಗಳಿಗೆ ಕುದುರೆಗಳಿಗೆ ಒಳ್ಳೆಯ ಮೇವು ಇದಕ್ಕೆ ಕೀಟ ವಿಕರ್ಷಕ ಗುಣವು ಇದೆ ಎನ್ನಲಾಗಿದೆ.ಬಾಣಂತಿಯರಿಗೂ ಸಹ ಇದು ಹಾಲು ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ.

ಮೆಂತೆಯ ಔಷಧೀಯ ಗುಣಗಳು

1. ಮೆಂತೆಯು ಉತ್ತಮ ಜೀರ್ಣಕಾರಕವಾಗಿದೆ.

2.ಮೊಳಕೆ ಬಂದಿರುವ ಕಾಳುಗಳು ಕೆಮ್ಮು, ದಮ್ಮುಗಳಿಗೆ ಮದ್ದಾಗಿಯೂ ಬಳಸಲಾಗುತ್ತದೆ.

3. ಹಾಲುಣಿಸುವ ತಾಯಂದಿರಿಗೆ ಅತ್ಯುತ್ತಮ ಆಹಾರ.

4. ಮಧುಮೇಹಿಗಳಿಗೂ ಇದು ಉತ್ತಮ ಔಷಧ.

5.ತಲೆ ಕೂದಲು ಸೊಂಪಾಗಿ ಬೆಳೆಯಲು ಇದು ಉತ್ತಮವಾಗಿದೆ.


ಮೆಂತೆ ನೆನೆಸಿದ ನೀರು

ಮೆಂತೆ ನೆನೆಸಿದ ನೀರು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಇದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಪ್ರಮುಖ ಉಪಯೋಗಗಳು ಮತ್ತು ಪ್ರಯೋಜನಗಳು.

ಮೆಂತೆ ಕಾಳು ಕಹಿಯಾಗಿದ್ದರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇವೆ.. ಇದು ದೇಹದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಲವಾರು ಕಾಯಿಲೆಗಳು ಬಾರದಂತೆ ತಡೆಯುವುದು. ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಟ್ರಯಾಪಚಯ ಕ್ರಿಯೆಗೆ ತುಂಬಾ ಒಳ್ಳೆಯದು ಮೆಂತೆಕಾಳಿನ ನೀರಿನಿಂದ ಅದ್ಭುತ ಲಾಭಗಳು ಇವೆ. ನೀವು ಇದನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಆಹಾರದ ಕ್ರಮದಲ್ಲಿ ಮೊದಲಿಗೆ ಮೆಂತ್ಯ ನೀರನ್ನು ಕುಡಿದರೆ ಅದರಿಂದ ಯಾವ ಲಾಭಗಳು ಆಗಲಿವೆ ಎಂದು ನೋಡೋಣ.

1.. ಮಧುಮೇಹ ನಿಯಂತ್ರಣ

ಪ್ರತಿದಿನ ಮೆಂತೆ ನೆನೆಸಿದ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣ ಗೊಳ್ಳುತ್ತದೆ . ಮೆಂತೆ ಕಾಳು ಇನ್ಸುಲಿನ ಪ್ರತಿರೋಧಕವನ್ನು ಸರಿಪಡಿಸುವುದು ಮತ್ತು ಹೆಚ್ಚು ಸೂಕ್ಷ್ಮ ಮತ್ತು ಪ್ರತಿಕ್ರಿಯಾತ್ಮಕವಾಗಿಸುವುದು. ಹೀಗಾಗಿ ಇದನ್ನು ಮದುವೆಗಳು ಬಳಸಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ

2.ಜೀರ್ಣಕ್ರಿಯ ಸುಧಾರಣೆ

ಇದು ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆ ಇಂತಹ ಸಮಸ್ಯೆಗಳನ್ನು ನಿವಾರಿಸಿ, ಪ್ರಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

3. ತೂಕ ಇಳಿಕೆ

ಮೆಂತ್ಯ ನೀರು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಮೆಂತೆ ಕಾಳಿನ ನೀರನ್ನು ನಿತ್ಯವೂ ಕುಡಿದರೆ ದೇಹದ ತೂಕವನ್ನು ಇಳಿಸಲು ತುಂಬಾ ನೆರವಾಗುವುದು.ಇದು ಚಯಾಪಚಯ ಕ್ರಿಯೆಗೆ ವೇಗ ನೀಡುವುದು. ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು ಮತ್ತು ತೂಕ ಇಳಿಸಲು ಸಹಾಯವಾಗುವುದು.ಮೆಂತೆ ಕಾಳು ಆಮ್ಲ ವಿರೋಧಿಯಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಇದರಿಂದ ಜೀರ್ಣಕ್ರಿಯ ವ್ಯವಸ್ಥೆಗೆ ಬಲಬರವುದು ಮತ್ತು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆ ಕಡಿಮೆಯಾಗುವುದು.

4. ಕೂದಲಿನ ಆರೋಗ್ಯಕ್ಕಾಗಿ ಮೆಂತೆ.

ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಿ, ಚರ್ಮಯನ್ನು ಹೊಳೆಯುವಂತೆ ಮಾಡುತ್ತದೆ. ಮೆಂತ್ಯ ಸೊಪ್ಪು ಮತ್ತು ಮೆಂತೆ ಕಾಳಿನಲ್ಲಿರುವ ಪ್ರೋಟೀನ್, ವಿಟಮಿನ್ ಮತ್ತು ವೈರನ್ ಅಂಶಗಳು ನೆತ್ತಿಯನ್ನು ಪೋಷಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತವೆ.

ಕೂದಲು ಉದುರುವಿಕೆ ತಡೆಗಟ್ಟುತ್ತದೆ ಮೆಂತ್ಯೆಯನ್ನು ನೆನೆಸಿ ಪೇಸ್ಟ್ ಮಾಡಿ ಅಥವಾ ನೆನೆಸಿದ ಮೆಂತೆ ನೀರನ್ನು ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ತಲೆ ಹೊಟ್ಟು ನಿವಾರಣೆ ಮೆಂತೆ ನೆನಸಿ ರುಬ್ಬಿ, ಅದಕ್ಕೆ ನಿಂಬೆರಸ ಅಥವಾ ಮೊಸರು ಬೆರೆಸಿ ಹಚ್ಚುವುದರಿಂದ ತಲೆ ಹೊತ್ತು ಮಾಯವಾಗುತ್ತದೆ.

ದಪ್ಪ ಮತ್ತು ಆರೋಗ್ಯ ಕೂದಲು ಇದು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ದಪ್ಪವಾಗಿ ಮತ್ತು ಒಳಪಿನಿಂದ ಬೆಳೆಯಲು ಸಹಾಯ ಮಾಡುತ್ತದೆ.

5. ಕಫ

ಕಫ ಹೆಚ್ಚಾಗಿ ಇರುವಂತಹ ಜನರಲ್ಲಿ ದೇಹದ ಉಷ್ಣತೆ ಕಡಿಮೆ ಇರುವುದೇ ಎಂದು ಆಯುರ್ವೇದ ತಿಳಿಸುತ್ತದೆ. ಕಫ ಇರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವುದರಿಂದ ಶೀತ, ಕೆಮ್ಮು, ನೆಗಡಿ ಮತ್ತು ಜ್ವರವು ಬರುವುದು. ಮೆಂತ್ಯ ನೀರು ಕುಡಿದ ದೇಹಕ್ಕೆ ಉಷ್ಣತೆ ನೀಡುವುದು ಹಾಗೂ ದೇಹ ಪ್ರತಿರೋಧಕ ಶಕ್ತಿ ಕೂಡ ಅಭಿವೃದ್ಧಿಯಾಗುವುದು.

6. ಬಾಣಂತಿಯರಿಗೆ

ಮೆಂತೆ ನೀರು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಇದು ಹಾಲಿನ ಉತ್ಪ. ಮೆಂತೆಕಾಳನ್ನು ನಿಯಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಅದರಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.

ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮೆಂಟಕಾಳು ತುಂಬಾ ಲಾಭಕಾರಿ.. ಇದರಿಂದ ಬಾಣಂತಿಯರಿಗೆ ಮೂಳೆಗಳು ಬಲಗೊಳ್ಳುತ್ತದೆ ಮೆಂತೆಯಲ್ಲಿರುವ ಕೆಲವೊಂದು ಅಂಶಗಳು ಗರ್ಭಕೋಶವನ್ನು ಮೊದಲಿನ ಸ್ಥಿತಿಗೆ ತರಲು ನೆರವಾಗುತ್ತದೆ ಇದರಿಂದ ಮೆಂತೆ ನೀರನ್ನು ಬಳಸಬಹುದು.

ಚರ್ಮದ ಆರೋಗ್ಯಕ್ಕೆ ಮೆಂತ್ಯ ಪ್ರಯೋಜನಗಳು

1. ಮೊಡವೆ ಮತ್ತು ಕಲೆಗಳ ನಿವಾರಣೆ

ಮೆಂತೆಯಲ್ಲಿ ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಮೈಕ್ರೋಬಿಯಲ್ ಗುಣಗಳಿವೆ.. ಇದರ ಪೇಸ್ಟನ್ನು ಮುಖಕ್ಕೆ ಹಚ್ಚುವುದರಿಂದ ಮೂಡವೆ, ಕಪ್ಪು ಮತ್ತು ಗುಳ್ಳೆಗಳು ಕ್ರಮೇಣ ಕಡಿಮೆಯಾಗುತ್ತದೆ

2.ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ

ಮೆಂತ್ಯದ ಬೀಜಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಮುಖದ ಮೇಲಿನ ಸುಕ್ಕುಗಳು ಮತ್ತು ಗೆರೆಗಳನ್ನು ಕಡಿಮೆ ಮಾಡಿ ಚರ್ಮಕ್ಕೆ ಬಿಗಿತವನು ನೀಡುತ್ತದೆ.

3.ಚರ್ಮಕ್ಕೆ ಒಳಪು

ಮೆಂತ್ಯದ ನೀರು ಅಥವಾ ಅದರ ಪುಡಿಯನ್ನು ಫೇಸ್ ಪ್ಯಾಕ್ ನಲ್ಲಿ ಬಳಸುವುದರಿಂದ ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ.

4. ಸತ್ತಜೀವಕೋಶಗಳ ನಿವಾರಣೆ

ಮೆಂತೆದ ಪೇಸ್ಟನ್ನು ಸ್ಕ್ರಬ್ ನಂತೆ ಬಳಸುವುದರಿಂದ ತ್ವಚೆಯಲ್ಲಿರುವ ಸಪ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮವು ಮೃದುವಾಗುತ್ತದೆ .

5. ತೇವಾಂಶ ಕಾಪಾಡುವುದು

ಒಣಗಿದ ಮತ್ತು ನಿರ್ಜೀವವಾದ ಚರ್ಮಕ್ಕೆ ಮೆಂತ್ಯವು ಅತ್ಯುತ್ತಮ ನೈಸರ್ಗಿಕ ಕಂಡಿಷ್ನರ್ ಆಗಿ ಕೆಲಸ ಮಾಡುತ್ತದೆ.

ಮೆಂತೆ ನೀರನ್ನು ಬಳಸುವ ಸರಿಯಾದ ವಿಧಾನ

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಅಥವಾ ತಣ್ಣನೆಯ ನೀರಿಗೆ ಒಂದು ಚಮಚ ಮೆಂತ್ಯ ಕಾಳುಗಳನ್ನು ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೋಸಿ ಕುಡಿಯಿರಿ. ಉಳಿದಿರುವ ಮೆಂತೆ ಕಾಳುಗಳನ್ನು ಹಾಗೆಯೇ ಜಗಿದು ತಿನ್ನಬಹುದು.

ಮೆಂತೆಕಾಳಿನ ನಿಯಮಿತ ಪ್ರತಿನಿತ್ಯ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕಂಡುಕೊಳ್ಳಬಹುದು. ಇದರ ಸೇವನೆಯು ದೇಹದ ಆರೋಗ್ಯ ಚರ್ಮ ಮತ್ತು ತೂಕದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.