ಮಧುಮೇಹ ಅಥವಾ ಸಕ್ಕರೆ ಕಾಯಿಲೆ, diabetes symptoms and causes

ರಕ್ತದಲ್ಲಿನ ಸಕ್ಕರೆ ಅಂಶವು ನಿಯಮಿತ ಪ್ರಮಾಣಕ್ಕಿಂತ ಅಧಿಕವಾದರೇ ಅದನ್ನು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ ಪ್ರಮುಖವಾಗಿ ಟೈಪ್1 ಮತ್ತು ಟೈಪ್2 ಹಾಗೂ ಗರ್ಭಾವಸ್ಥೆಯ ಮಧುಮೇಹ ಎಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

5/22/20261 min read

1.ಟೈಪ್ 1 ಮಧುಮೇಹ

ಇದು ದೇಹದ ರೋಗನಿರೋಧಕ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಮೇದೋಜೀರಕ ಗ್ರಂಥಿಯು ಜೀವಕೋಶಗಳನ್ನು ನಾಶಪಡಿಸುವುದರಿಂದ ಬರುತ್ತದೆ ಇದರಲ್ಲಿ ಇನ್ಸುಲಿನ್ ಉತ್ಪಾದನೆಯ ಇರುವುದಿಲ್ಲ ಹಾಗಾಗಿ ಇವರು ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದನ್ನು ಪಡೆಯಬೇಕಾಗುತ್ತದೆ.

2. ಟೈಪ್ 2 ಮಧುಮೇಹ

ಇದು ಅತ್ಯಂತ ಸಾಮಾನ್ಯವಾದ ವಿಧವಾಗಿದೆ ಸ್ಥಿತಿಯಲ್ಲಿ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ ಅಥವಾ ದೇಹಕ್ಕೆ ಅಗತ್ಯವಾದಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಜೀವನಶೈಲಿ ಆಹಾರ ಪದ್ಧತಿ ಮತ್ತು ಅನುವಂಶಿಯತೆಯು ಇದಕ್ಕೆ ಮುಖ್ಯ ಕಾರಣ.

3. ಗರ್ಭಾವಸ್ಥೆಯ ಮಧುಮೇಹ

ಕೆಲವು ಮಹಿಳೆಯರಿಗೆ ಗರ್ಭವಸ್ಥೆಯಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ ಇದು ಸಾಮಾನ್ಯವಾಗಿ ಮಗುವಿನ ಜನನದ ನಂತರ ತಾನಾಗಿಯೇ ಸರಿಯಾಗುತ್ತದೆ ಆದರೆ ಇದು ಭವಿಷ್ಯದಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ .

ಮಧುಮೇಹ ಕಾಯಿಲೆಯ ಸಾಮಾನ್ಯವಾಗಿ ಮುಖ್ಯ ಲಕ್ಷಣಗಳು.

ಪದೇ ಪದೇ ಬಾಯಾರಿಕೆ, ಹೆಚ್ಚಿದ ಮೂತ್ರ ವಿಸರ್ಜನೆ, ವಿಪರೀತ ಹಸಿವು, ಆಯಾಸ, ಮತ್ತು ಯಾವುದೇ ಕಾರಣವಿಲ್ಲದೆ ದೇಹದ ತೂಕ ಕಡಿಮೆಯಾಗುವುದು ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ.

ಮಧುಮೇಹದ ಪ್ರಮುಖ ಲಕ್ಷಣಗಳು.

1. ಪದೇ ಪದೇ ಮೂತ್ರ ವಿಸರ್ಜನೆ ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ.

2. ಅತಿಯಾದ ಬಾಯಾರಿಕೆ ಬಾಯಿ ಒಣಗುವುದು ಮತ್ತು ಪದೇಪದೇ ಬಾಯಾರಿಕೆ ಯಾಗುವುದು

ಆಯಾಸ ಮತ್ತು ದೌರ್ಬಲ್ಯ ಸದಾ ಸುಸ್ತಾದಂತೆ ಅನುಭವವಾಗುವುದು ಮತ್ತು ಯಾವುದೇ ಕೆಲಸ ಮಾಡಲು ಶಕ್ತಿ ಇಲ್ಲದಿರುವುದು.

3. ದಿಡೀರ್ ತೂಕ ನಷ್ಟ ಸರಿಯಾಗಿ ಊಟ ಮಾಡುತ್ತಿದ್ದರು ಸಹ ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದು ಮುಖ್ಯವಾಗಿ ಟೈಪ್ ಒನ್ ಮಧುಮೇಹದ ಲಕ್ಷಣವಾಗಿದೆ.

4.ವಿಪರೀತ ಹಸಿವು ಹೊಟ್ಟೆ ತುಂಬ ಊಟ ಮಾಡಿದರು ಕೂಡ ಮತ್ತೆ ಮತ್ತೆ ಹಸಿವಾಗುವುದು.

5.ಮಸುಕಾದ ದೃಷ್ಟಿ ಕಣ್ಣುಗಳು ಮಂಜಾಗುವುದು ಅಥವಾ ಸ್ಪಷ್ಟವಾಗಿ ಕಾಣಿಸದಿರುವುದು.

6. ಗಾಯಗಳು ವಾಸಿಯಾಗದಿರುವುದು ಕೈಕಾಲುಗಳಿಗೆ ಆದ ಸಣ್ಣ ಪುಟ್ಟ ಗಾಯಗಳು ಅಥವಾ ಕಡಿತಗಳು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಮಧುಮೇಹ ಕಾಯಿಲೆಯ ನಿಯಂತ್ರಣ ಏಕೆ ಅವಶ್ಯಕವಾಗಿದೆ.

ದೇಹದಲ್ಲಿ ಇನ್ಸುಲಿನ್ ಕೊರತೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವ ಕಾಯಿಲೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ ಏಕೆಂದರೆ ಇದು ಕಣ್ಣು ಮೂತ್ರಪಿಂಡ ಮತ್ತು ಹೃದಯದಂತಹ ಪ್ರಮುಖ ಅಂಗಗಳಿಗೆ ಹಾನಿ ಮಾಡುತ್ತದೆ.

1. ಸೈಲೆಂಟ್ ಕಿಲ್ಲರ್ ಆರಂಭದಲ್ಲಿ ಇದರ ಲಕ್ಷಣಗಳು ತಿಳಿಯುವುದಿಲ್ಲ ಆದರೆ ನಿಯಂತ್ರಿಸದಿದ್ದರೆ ದೇಹದ ಇತರ ಅಂಗಗಳನ್ನು ನಿಧಾನವಾಗಿ ಹಾನಿಗೊಳಿಸುತ್ತದೆ.

2.ಹೃದಯದ ತೊಂದರೆಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ರಕ್ತನಾಳಗಳು ಗಟ್ಟಿಯಾಗುತ್ತವೆ ಇದು ಪಾರ್ಶ್ವಬಾಹು ಮತ್ತು ಹೃದಯಘಾತದ ಅಪಾಯವನ್ನು ಹೆಚ್ಚಿಸುತ್ತದೆ.

3. ಅಂಗಗಳ ವೈಫಲ್ಯ ಇದು ದೀರ್ಘ ಕಾಲದವರೆಗೆ ಮೂತ್ರಪಿಂಡ ವೈಫಲ್ಯ ಮತ್ತು ದೃಷ್ಟಿ ದೋಷಕ್ಕೆ

ಪ್ರಮುಖ ಕಾರಣವಾಗಿದೆ.

4. ನರಗಳ ಹಾನಿ, ಕಾಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿ ನರಗಳು ದುರ್ಬಲಗೊಳ್ಳುತ್ತವೆ ಇದರಿಂದ ಗಾಯಗಳು ಗುಣವಾಗುವುದು ತಡವಾಗುತ್ತದೆ.

ಮಧುಮೇಹ ಕಾಯಿಲೆಯನ್ನು ಪತ್ತೆ ಹಚ್ಚುವ ರಕ್ತ ಪರೀಕ್ಷೆಗಳು.

ಮಧುಮೇಹ ಪರೀಕ್ಷಿಸಲು ಮತ್ತು ರೋಗನಿರೋಣಯ ಮಾಡಲು ಬಳಸುವ ಮುಖ್ಯ ರಕ್ತ ಪರೀಕ್ಷೆಗಳು ಇಲ್ಲಿವೆ. ಅಧಿಕೃತ Healthline ಮತ್ತುNIDDK ಮೂಲಗಳ ಪ್ರಕಾರ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ

1.Hba1c- ಪರೀಕ್ಷೆ ಕಳೆದ ಮೂರು ತಿಂಗಳ ನಿಮ್ಮ ಸರಾಸರಿ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷೆಯ ಮೂಲಕ ಅಳೆಯಲಾಗುತ್ತದೆ.

2.Fasting blood sugar(FBS)-ಕನಿಷ್ಠ 8 ಗಂಟೆಗಳ ಕಾಲ ಏನನ್ನು ಸೇವಿಸದೆ ಖಾಲಿ ಹೊಟ್ಟೆಯಲ್ಲಿ ರಕ್ತವನ್ನು ಕೊಟ್ಟು ಪರೀಕ್ಷೆ ಮಾಡಲಾಗುತ್ತದೆಮೇಹ ಕಾಯಿಲೆಯ ಚಿಕಿತ್ಸೆ.

Random blood sugar (RBS)-ದಿನದ ಯಾವುದೇ ಸಮಯದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು.

Post prandialblood sugar (PPBS) -ಊಟ ಮಾಡಿದ ಎರಡು ಗಂಟೆಗಳ ನಂತರ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸುವುದು.

ಮೂರು ಪರೀಕ್ಷೆಗಳಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಂಡುಹಿಡಿಯಬಹುದು ಹಾಗೂ ಅವಶ್ಯಕತವಾದ ಚಿಕಿತ್ಸೆಯನ್ನು ಪಡೆಯುವ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಮಧುಮೇಹವನ್ನು ನಿಯಂತ್ರಿಸುವ ಪ್ರಮುಖ ವಿಧಾನಗಳು.

ಮಧುಮೇಹಕ್ಕೆ ಯಾವುದೇ ಸಂಪೂರ್ಣ ಗುಣವಿಲ್ಲ. ಆದರೆ ಅದನ್ನು ನಿಯಂತ್ರಿಸಬಹುದು ಚಿಕಿತ್ಸೆಯೂ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ರಕ್ತ ಪರೀಕ್ಷೆಯ ಮೂಲಕ ಮೇಲ್ವಿಚಾರಣೆ ಮಾಡುವುದು ಮತ್ತು ಅಗತ್ಯವಿದ್ದರೆ ಔಷಧಿ ಅಥವಾ ಇನ್ಸುಲಿನ್ ತೆಗೆದುಕೊಳ್ಳುವುದು ಇದೆಲ್ಲದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ಅದರಿಂದ ದೇಹಕ್ಕೆ ಆಗುವ ಹಾನಿಯನ್ನು ತಡೆಯಬಹುದು.

1. ಆಹಾರ ಪದ್ಧತಿ ಫೈಬರ್ಗಳು ಧಾನ್ಯಗಳು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಸಿಹಿ ಪದಾರ್ಥಗಳು ಮತ್ತು ಜಂಕ್ ಫುಡ್ ಗಳನ್ನು ತಪ್ಪಿಸುವುದು.

2.ದೈಹಿಕ ಚಟುವಟಿಕೆ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ ಅಥವಾ ಇತರ ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು.

3.ಔಷಧಿಗಳು ಮತ್ತು ಇನ್ಸುಲಿನ್ ವೈದ್ಯರ ಸಲಹೆ ಮೇರೆಗೆ ಸೂಚಿತ ಔಷಧಿಗಳನ್ನು ತೆಗೆದುಕೊಂಡು ಅಗತ್ಯವಿದ್ದರೆ ದೇಹಕ್ಕೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವುದು.

ಮಧುಮೇಹ ಕಾಯಿಲೆಗೆ ಮನೆಮದ್ದು ಮತ್ತು ಆಯುರ್ವೇದ

ಮೆಂತ್ಯ ಕಾಳು ಜಾವರಾಲು ಮತ್ತು ಪ್ರತಿದಿನ ಯೋಗ ಅಥವಾ ಪ್ರಾಣಾಯಾಮ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು

ರೋಗದ ತೀವ್ರತೆಯನ್ನು ಆಧರಿಸಿ ಸರಿಯಾದ ಚಿಕಿತ್ಸೆಯನ್ನು ಹಾಗೂ ಸೂಕ್ತ ಆಹಾರ ಕ್ರಮಗಳು ಮತ್ತು ದೈಹಿಕ ಶ್ರಮದಿಂದ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತು ಅದರಿಂದ ಆಗುವ ದೇಹದ ಹಾನಿಯನ್ನು ತಡೆಯಬಹುದು.

ಮಧುಮೇಹ ಕಾಯಿಲೆಯೂ ಬರದಂತೆ ತಡೆಯುವ ಮುನ್ನೆಚ್ಚರಿಕ ಕ್ರಮಗಳು.

1. ದೈನಂದಿನ ಸೇವಿಸುವ ನಿಯಂತ್ರಣ ಆಹಾರ.

2.ಉತ್ತಮ ಯೋಗಭ್ಯಾಸಗಳು.

3.ಕ್ರಿಯಾಶೀಲತೆಯಿಂದ ಕೆಲಸ ಕಾರ್ಯಗಳ ನಿರ್ವಹಣೆ.

4. ಮಾನಸಿಕ ಒತ್ತಡಗಳ ನಿಯಂತ್ರಣ ಹಾಗೂ ಧ್ಯಾನ ಮಾಡುವುದು.

5. ಮೂರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು.

6.ವಿಶೇಷವಾಗಿ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಅಂಶಗಳಿರುವ ಪದಾರ್ಥಗಳನ್ನು ಕಡಿಮೆ ಸೇವಿಸುವುದು.

7.. ಸಿಹಿ ಪದಾರ್ಥಗಳು ಫಾಸ್ಟ್ ಫುಡ್ ಮತ್ತು ಬೇಕರಿ ತಿನಿಸುಗಳನ್ನು ತ್ಯಜಿಸುವುದು.

8. ಹಣ್ಣುಗಳು ಮೊಟ್ಟೆ ಮೀನು ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವುದು ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.