ವಿಟಮಿನ್ ಬಿ 12 ಎಂದರೇನು? ಲಕ್ಷಣಗಳು, ಕಾರ್ಯಗಳು, ರೋಗಗಳು ಮತ್ತು ಚಿಕಿತ್ಸೆ/What is vitamin b12? causes, symptoms, diseases & treatment.

5/28/20261 min read

white concrete building during daytime
white concrete building during daytime
ವಿಟಮಿನ್ B12 (ಕೋಬಲಮಿನ್)

ವಿಟಮಿನ್ B12 ಮೆದುಳಿನ ಆರೋಗ್ಯ, ನರಗಳ ಕಾರ್ಯ ಮತ್ತು ಕೆಂಪು ರಕ್ತ ಕಣಗಳ ರಚನೆಗೆ ಮತ್ತು ಡಿಎನ್ಎ ಉತ್ಪಾದನೆಗೆ ಅಗತ್ಯವಾದ ಒಂದು ಸಂಕೀರ್ಣ, ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ ವಿಶಿಷ್ಟವಾಗಿ ಕೋಬಾಲ್ಟ್ ಖನಿಜವನ್ನು ಹೊಂದಿರುತ್ತದೆ .ನಾವು ಸೇವಿಸುವ ಮಾಂಸ, ಮೀನು ಮತ್ತು ಕೋಳಿ ಮೊಟ್ಟೆಗಳು ಇವುಗಳಲ್ಲಿ ವಿಟಮಿನ್ b12 ಅಧಿಕವಾಗಿರುತ್ತದೆ. ಉಪಹಾರ ಧಾನ್ಯಗಳು ಮತ್ತು ಸಸ್ಯ ಆಧಾರಿತ ಹಾಲುಗಳಂತ ಆಹಾರ ಪೂರಕ ಗಳಿಂದ ವಿಟಮಿನ್ b12 ಅನ್ನು ಪಡೆಯಬಹುದು.

ದೇಹದಲ್ಲಿ ವಿಟಮಿನ್ b12 ಅವಶ್ಯಕತೆಗಳು ನಿಯಮಿತ ಪ್ರಮಾಣಕ್ಕಿಂತ ಕಡಿಮೆಯಾದಾಗ ದೇಹವು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ತಡೆಯಾಗುತ್ತದೆ ಕಾಯಿಲೆಯನ್ನು , ಮೆಗಾಲೋ ಬ್ಲಾಸ್ಟಿಕ್ ಎಂದು ಕರೆಯುತ್ತಾರೆ ಇದು ಕೆಂಪು ರಕ್ತ ಕಣಗಳು ಅಸಹಜವಾಗಿ ದೊಡ್ಡದಾಗಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ತಡೆಯುತ್ತದೆ.

ವಿಟಮಿನ್ b12 ಕೊರತೆಗೆ ಸಾಮಾನ್ಯ ಕಾರಣಗಳು.

1. ಆಹಾರ ನಿರ್ಬಂಧ

b12 ಮುಖ್ಯವಾಗಿ ಪ್ರಾಣಿ ಉತ್ಪನ್ನಗಳಾದ ಮಾಂಸ, ಮೀನು, ಮೊಟ್ಟೆ ಹಾಗೂ ಡೈರಿ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಆದ್ದರಿಂದ ಸಸ್ಯಹಾರಿ ಮನುಷ್ಯರಲ್ಲಿ ವಿಟಮಿನ್ b12 ಕೊರತೆ ಸಾಮಾನ್ಯವಾಗಿ ಕಂಡುಬರುತ್ತದೆ.

2. ಹೀರಿಕೊಳ್ಳುವಿಗೆಯ ಕೊರತೆ

ಕ್ರೋನ್ಸ್ ಅಥವಾ ಸಿಲಿಯಾಕ್ ಕಾಯಿಲೆಯಂತಹ ಪರಿಸ್ಥಿತಿಗಳು ಮತ್ತು b12ಲ್ಲನ್ನು ಹೀರಿಕೊಳ್ಳಲು ಸಾಮಾನ್ಯ ಮಟ್ಟದ enzyme ಗಳ ಕೊರತೆಯಿಂದ ಕರುಳುಗಳು b12 ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

3. ಹಾನಿಕಾರಕ ರಕ್ತ ಹೀನತೆ

ಹೊಟ್ಟೆಯಲ್ಲಿ b12 ಹೀರಿಕೊಳ್ಳುವಿಕೆಗೆ ಅಗತ್ಯವಾದ ನಿರ್ದಿಷ್ಟ ಪ್ರೋಟೀನ್, ಕೊರತೆ ಇರುವ ಸ್ವಯಂ ನಿರೋಧಕ ಸ್ಥಿತಿಯು ಕೂಡ ಕೊರತೆಗೆ ಕಾರಣವಾಗಿರುತ್ತದೆ.

4. ಔಷಧಗಳು

ಕೆಲವು ಮಧುಮೇಹ ಔಷಧಿಗಳ ಅಥವಾ ಆಮ್ಲ ಕಡಿಮೆಗೊಳಿಸುವ ಔಷಧಿಗಳ ದೀರ್ಘಕಾಲಿನ ಬಳಕೆಯು b12 ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ.

5.ವಯಸ್ಸು

ವಯಸ್ಸಾದವರಲ್ಲಿ ಸಾಮಾನ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿb12 ಹೀರಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ.

ವಿಟಮಿನ್ b 12 ಸಂಶ್ಲೇಷಣೆ.

ವಿಟಮಿನ್ b12 ಕೆಲವು ಬ್ಯಾಕ್ಟೀರಿಯಾ ಮತ್ತು ಆರ್ಕಿಯಗಳಿಂದ ಪ್ರತ್ಯೇಕವಾಗಿ ಸಂಶ್ಲೇಷಿಸಲಾಗುತ್ತದೆ .ಪ್ರಾಣಿಗಳು ಅಥವಾ ಸಸ್ಯಗಳು ಇದನ್ನು ಉತ್ಪಾದಿಸಲು ಸಾಧ್ಯವಿಲ್ಲ.

1.ಪ್ರಕೃತಿಯಲ್ಲಿb12 ದೊರೆಯುವ ಮೂಲ.

ಇದು ಮಣ್ಣಿನಲ್ಲಿ ನೀರಿನಲ್ಲಿ ಮತ್ತು ಪ್ರಾಣಿಗಳ ಜೀರ್ಣಾಂಗಗಳಲ್ಲಿರುವ ಸೂಕ್ಷ್ಮಜೀವಿಗಳಿಂದ ಉತ್ಪತ್ತಿಯಾಗುತ್ತದೆ .ಹಸು ಮತ್ತು ಕುರಿಗಳಂತಹ ಪ್ರಾಣಿಗಳ ಕರುಳಿನ ಬ್ಯಾಕ್ಟೀರಿಯದಿಂದ ಉತ್ಪತ್ತಿಯಾಗುವ b12 ಅನ್ನು ಹೀರಿಕೊಳ್ಳುತ್ತವೆ. ಅದಕ್ಕಾಗಿಯೇ ಮಾಂಸ, ಡೈರಿ ಮತ್ತು ಮೊಟ್ಟೆಗಳು ಪ್ರಾಥಮಿಕ ಆಹಾರ ಮೂಲಗಳಾಗಿವೆ .

2. ಕೈಗಾರಿಕವಾಗಿ b12 ದೊರೆಯುವ ಮೂಲಗಳು.

ವಾಣಿಜಿಕ ಅನ್ನು ಪ್ರಯೋಗಗಾಲಯಗಳಲ್ಲಿ ನಿಯಂತ್ರಿತ ಬ್ಯಾಕ್ಟೀರಿಯಾದ ಹುದುಗುವಿಕೆ ಪ್ರಕ್ರಿಯೆಗಳನ್ನು ಬಳಸಿಕೊಂಡು ಸಂಶ್ಲೇಷಿಸಲಾಗುತ್ತದೆ. ಇದು ಹೆಚ್ಚಾಗಿ ಡೋ ಮೊನಸ್ ಮತ್ತು ಪ್ರೋಪಿಯೋನಿ ಬ್ಯಾಕ್ಟೀರಿಯ ನಂತಹ ತಳಿಗಳನ್ನು ಬಳಸಿಕೊಂಡು ವಿಟಮಿನ್ b12 ತಯಾರಿಸುತ್ತಾರೆ.

b12 ಕೊರತೆಯ ಚಿನ್ಹೆಗಳು ಮತ್ತು ಲಕ್ಷಣಗಳು.

ಸಾಮಾನ್ಯವಾಗಿ b12 ಕೊರತೆಯ ಲಕ್ಷಣಗಳು ಕಂಡುಬರುವುದಿಲ್ಲ ಆದರೆ ಕ್ರಮೇಣವಾಗಿ ಬೆಳೆಯುತ್ತದೆ ಕಾಲ ನಂತರದಲ್ಲಿ ಕೊರತೆಯ ಮಟ್ಟವು ಅಧಿಕವಾಗಿ ಲಕ್ಷಣಗಳು ಕಂಡುಬರುತ್ತವೆ.

1. ದೈಹಿಕ ಲಕ್ಷಣ

ತೀವ್ರ ಆಯಾಸ, ದೌರ್ಬಲ್ಯ, ಬಿಳಿಚಿಕೊಳ್ಳುವಿಕೆ, ಉಸಿರಾಟದ ತೊಂದರೆ ಮತ್ತು ಬಾಯಿ ಹುಣ್ಣುಗಳು b12 ಕೊರತೆಯ ದೈಹಿಕ ಲಕ್ಷಣಗಳು.

2. ನರವೈಜ್ಞಾನಿಕ ಲಕ್ಷಣಗಳು

ಕೈ ಮತ್ತು ಪಾದಗಳಲ್ಲಿ ಮರಗಟ್ಟುವಿಕೆ ಅಥವಾಗುಂಡುಗಳು ಮತ್ತು ಸೂಜಿಗಳುಎಂಬ ಸಂವೇದನೆ, ಕಳಪೆ ಸಮತೋಲನ ಮತ್ತು ನಡೆಯಲು ತೊಂದರೆ.

3.ಮಾನಸಿಕ ಲಕ್ಷಣಗಳು

ನೆನಪಿನ ತೊಂದರೆಗಳು, ಗೊಂದಲ, ಮನಸ್ಥಿತಿ ಬದಲಾವಣೆಗಳು ಅಥವಾ ಖಿನ್ನತೆ.

4. ತೂಕ ಕಡಿಮೆಯಾಗುವುದು

5. ಹಸಿವಾಗದೆ ಇರುವುದು.

6.ದೃಷ್ಟಿದೋಷಗಳು.

ವಿಟಮಿನ್ b12 ಕೊರತೆಯ ಕಾರಣದಿಂದ ಉಂಟಾಗುವ ರೋಗಗಳು.

ಸಾಕಷ್ಟು ಪ್ರಮಾಣದಲ್ಲಿ b12 ಆಹಾರವು ದೇಹಕ್ಕೆ ಸೇರದೆ ಇರುವ ಕಾರಣದಿಂದ b12 ನಾ ಕೊರತೆಯು ಉಂಟಾಗುತ್ತದೆ, ಕೊರತೆಯಿಂದ ಉಂಟಾಗುವ ಕೆಲವು ಕಾಯಿಲೆಗಳು

1. ಗ್ಯಾಸ್ ಸ್ಟ್ರೈಟಿಸ್

ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಅಧಿಕವಾಗಿ ಸಮಸ್ಯೆಯು ಉಂಟಾಗುತ್ತದೆ ಇದು b12

ಕೊರತೆಯಿಂದ ಉಂಟಾಗುತ್ತದೆ.

2. ಪರ್ನಿಶಿಯಸ್ ಅನಿಮಿಯಾ

ಕಾಯಿಲೆಯನ್ನು ಹೊಂದಿರುವ ವ್ಯಕ್ತಿಯ ದೇಹವು ಎಂಟ್ರಿಕ್ ಸಿಕ್ ಫ್ಯಾಕ್ಟರ್ ಅನ್ನು ಕಡಿಮೆ ಹೊಂದಿರುತ್ತದೆ ಇದರಿಂದಾಗಿ b12 ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ b12 ಕೊರತೆಯೂ ಉಂಟಾಗುತ್ತದೆ.

3.ಜೀರ್ಣಕ್ರಿಯೆಯ ಸಮಸ್ಯೆ.

ಕ್ರೋನ್ ಡಿಸೀಸ್ ಮತ್ತು ಸಿಲಿಯಾಕ್ ಡಿಸೀಸ್ ಇದು ದೇಹ b12 ಹೀರಿಕೊಳ್ಳುವ ಕ್ರಿಯೆಯನ್ನು ತಡೆಯುತ್ತದೆ, ಇದರಿಂದಾಗಿ b12 ಕೊರತೆಯೂ ಉಂಟಾಗುತ್ತದೆ.

4.ಶಸ್ತ್ರಚಿಕಿತ್ಸೆ

ಜೀರ್ಣಾಂಗ ವ್ಯೂಹದ ಶಾಸ್ತ್ರಚಿಕಿತ್ಸೆ ಆಗಿರುವ ವ್ಯಕ್ತಿಗಳಲ್ಲಿ b12 ಹೀರಿಕೊಳ್ಳಲು ಕಷ್ಟವಾಗುತ್ತದೆ ಇದರಿಂದಲೂ ಸಹ b12 ಕೊರತೆ ಉಂಟಾಗಬಹುದು.

5. ಮಧ್ಯಪಾನ ಸೇವನೆಯಿಂದ ಉಂಟಾಗುವ ಕಾಯಿಲೆ

ಮಧ್ಯಪಾನ ಸೇವಿಸುವುದರಿಂದ ದೇಹದ ಜೀರ್ಣಕ್ರಿಯ ವ್ಯವಸ್ಥೆಯು ಹದಗೆಡುತ್ತದೆ ಕಾರಣದಿಂದ b12 ಕೊರತೆಯೂ ಉಂಟಾಗುತ್ತದೆ.

B12 ರೋಗ ಪತ್ತೆ ಹಚ್ಚುವಿಕೆ

1. ರಕ್ತದಲ್ಲಿ vitamin b12 test ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಮೂಲಕ b12 ಕೊರತೆಯನ್ನು ಪತ್ತೆ ಹಚ್ಚಬಹುದು.

2.CBS Complete blood count

3.Methylmalonic acid (MMA) test

4.Homocysteine test

1.ದೇಹದಲ್ಲಿ b12 ಆರೋಗ್ಯಕರ ಮಟ್ಟ.

400 to 600pg/ ml.

2.ಗಡಿ ರೇಖೆಯ ಕೊರತೆ.

200 to 300p g/ml.

3.ಕೊರತೆ

200pg/ml

4. ಹೆಚ್ಚು/ ಎತ್ತರ

900pg/ml

ಇದು ಕೆಲವೊಮ್ಮೆ ಅತಿಯಾದ ಪೂರಕವನ್ನು ಸೂಚಿಸುತ್ತದೆ. ಆದರೂ ಇದು ಯಕೃತ್ತು ಅಥವಾ ಮೂತ್ರಪಿಂಡದ ಸ್ಥಿತಿಗಳಿಗೂ ಸಂಬಂಧ ವಾಗಿರಬಹುದು.

ವಿಟಮಿನ್ b12 ಕೊರತೆಗೆ ಚಿಕಿತ್ಸೆ

1. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಬಲವರ್ದಿತ ಧಾನ್ಯಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳು ಮೊಟ್ಟೆಗಳನ್ನು ಸೇವಿಸುವುದು

2. ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವುದು.

3. ವಿಟಮಿನ್ b12 ಪೂರಕಗಳನ್ನು ಸೇವಿಸುವುದು

4.. ಹೊಟ್ಟೆ ಅಥವಾ ಕರುಳಿನಲ್ಲಿ b12 ಹೀರಿಕೊಳ್ಳಲು ಸಾಧ್ಯವಾಗದಿದ್ದರೆ ವಿಟಮಿನ್b12 ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಆರಂಭಿಕ ಚಿಕಿತ್ಸೆಯು ಸಾಮಾನ್ಯವಾಗಿ ಕೆಲವು ವಾರಗಳಲ್ಲಿ ಹಲವು ಚುಚ್ಚುಮದ್ದುಗಳನ್ನು ಒಳಗೊಂಡಿರುತ್ತದೆ ನಂತರ ಜೀವನದ ಉದ್ದಕ್ಕೂ ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನಿರ್ವಹಣಾ ಚುಚ್ಚುಮದ್ದನ್ನು ನೀಡಲಾಗುತ್ತದೆ .

Help

For any questions regarding blood tests, reports, health packages, or appointment timings, feel free to contact us.

We aim to respond to all inquiries as quickly as possible.

Contact

Connect

myelabonline@gmail.com

+919113202920

© 2025. All rights reserved.